ದಿಕ್ಬದಲನಾ ಮಸೂರ – ಸಮಾನಾಂತರವಾಗಿರುವ ಬೆಳಕಿನ ಕಿರಣಗಳ ದಿಕ್ಕನ್ನು ಬೇರೆಬೇರೆಯಾಗಿಸುವ ಮಸೂರ. ಇದು ಮಧ್ಯದಲ್ಲಿ ತಗ್ಗಿದ್ದು ತುದಿಗಳಲ್ಲಿ ಉಬ್ಬಿರುತ್ತದೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಕಾಂತಪ್ರದೇಶ – ಅಯಸ್ಕಾಂತಗುಣೀ ವಸ್ತುವಿನಲ್ಲಿ ಎಲ್ಲ ಪರಮಾಣುಗಳ ಕಾಂತಕ್ಷೇತ್ರಗಳೂ ಒಂದೇ ದಿಕ್ಕಿನಲ್ಲಿ ಸ್ಥಿತಗೊಂಡಿರುವ ಪ್ರದೇಶ.
ಪ್ರಧಾನ ಅಲೆ – ಒಂದು ಏಕವಾಹಕದಿಂದ ಮಾಡಲಾದ ಕೊಳವೆಯಲ್ಲಿ ಅತ್ಯಂತ ಕಡಿಮೆ ಆವರ್ತನ ಕಡಿತ ಬಿಂದು ( ಶಕ್ತಿಯು ಕಡಿಮೆಯಾಗಲು ಪ್ರಾರಂಭವಾಗುವ ಬಿಂದು) ವನ್ನು ಹೊಂದಿರುವ ವಿದ್ಯುತ್ಕಾಂತೀಯ ಅಲೆ.
ವಿದ್ಯುದಂಶ ದಾನಿ – ಒಂದು ಅರೆವಾಹಕಕ್ಕೆ ವಿದ್ಯುದಂಶ ವಾಹಕಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಸೇರಿಸಿದ ಕಲ್ಮಷ ಪದಾರ್ಥ.
ಉತ್ತೇಜಕ – ಒಂದು ಅರೆವಾಹಕದ ವಾಹಕತ್ವವನ್ನು ಹೆಚ್ಚಿಸಲು ಅದಕ್ಕೆ ಸೇರಿಸುವ ಕಲ್ಮಷ ಪದಾರ್ಥ.
ಡಾಪ್ಲರ್ ಪರಿಣಾಮ – ಆಕರ ಮತ್ತು ವೀಕ್ಷಕನ ನಡುವಿನ ಸಾಪೇಕ್ಷ ( ತುಲನಾತ್ಮಕ) ಚಲನೆಯಿಂದಾಗಿ ಒಂದು ಅಲೆಯ ಆವರ್ತನದಲ್ಲಿ ಇರುವುದೆಂದು ಭಾಸವಾಗುವ ಬದಲಾವಣೆ.
ಒಂದು ಸಲದ ಅಳತೆ( ಒಕ್ಕುಡಿತೆ) – ವಿಕಿರಣಕಾರೀ ಬೆಳಕಿನಿಂದ ಒಂದು ಜೀವಿಗೆ ಒಂದು ಸಲಕ್ಕೆ ಕೊಡಲ್ಪಟ್ಟ ಹಾಗೂ ಆ ಜೀವಿಯು ಹೀರಿಕೊಂಡ ಶಕ್ತಿ.
ದಿಶಾಯುತ ಉತ್ಪನ್ನ – ಎರಡು ದಿಶಾಯುತಗಳ ಉತ್ಪನ್ನ ಇದು, ತಾನು ಒಂದು ದಿಶಾರಹಿತ ಪರಿಮಾಣವಾಗಿರುತ್ತದೆ.
ಇಮ್ಮಡಿ ವಕ್ರೀಭವನ – ಒಂದು ಕಿರಣವು ತನ್ನ ಮೇಲೆ ಬಿದ್ದಾಗ ಅದನ್ನು ಎರಡು ವಕ್ರೀಭವಿತ ಕಿರಣಗಳನ್ನಾಗಿ ಮಾರ್ಪಡಿಸುವಂತಹ ವಿದ್ಯಮಾನ. ಕೆಲವು ಸ್ಫಟಿಕಗಳಿಗೆ ಈ ಗುಣಲಕ್ಷಣವಿರುತ್ತದೆ.
ಥಾಮಸ್ ಯಂಗ್ ಎಂಬ ವಿಜ್ಞಾನಿಯು ಮಾಡಿದ ಇತಿಹಾಸ ಪ್ರಸಿದ್ಧ ಪ್ರಯೋಗ. ಈ ಪ್ರಯೋಗವು ಬೆಳಕಿನಲೆಗಳ ಅಡ್ಡಹಾಯುವಿಕೆಯನ್ನು ಪ್ರತ್ಯಕ್ಷವಾಗಿ ರುಜುವಾತು ಪಡಿಸಿ, ಬೆಳಕನ್ನು ಕುರಿತ ‘ಅಲೆ ಸಿದ್ಧಾಂತ’ ಕ್ಕೆ ಗಟ್ಟಿ ಬೆಂಬಲ ನೀಡಿತು.
Like us!
Follow us!