ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Electroformimg

ವಿದ್ಯುತ್ಮೂಲೀ ನಿರ್ಮಾಣ – ವಿದ್ಯುತ್ತನ್ನು ಬಳಸಿಕೊಂಡು ಲೋಹದ ಮೇಲೆ ಪದರ ಕಟ್ಟುವ, ತನ್ಮೂಲಕ ಸೂಕ್ಷ್ಮ ನಿರ್ಮಿತಿಗಳುಳ್ಳ ಲೋಹದ ವಸ್ತುಗಳನ್ನು ಅಥವಾ ವಸ್ತು ಭಾಗಗಳನ್ನು ನಿರ್ಮಿಸುವ ಒಂದು ವಿಧಾನ.

Electroluminescence

ವಿದ್ಯುತ್ ಪ್ರಕಾಶ – ಎಲೆಕ್ಟ್ರಾನುಗಳ ಹೊಡೆತದಿಂದ ತನ್ನ ಕಣಗಳು ಶಕ್ತಿಯನ್ನು ಹೀರಿಕೊಂಡು ಉದ್ರೇಕಿತ ಸ್ಥಿತಿಗೆ ಹೋದಾಗ ವಸ್ತುವೊಂದು ಹೊರಸೂಸುವ ಪ್ರಕಾಶ (ಬೆಳಕು). 

Electrolysis 

ವಿದ್ಯುತ್ ವಿಭಜನೆ – ಒಂದು ವಿದ್ಯುತ್ವಾಹಕ ದ್ರಾವಕದ ಮೂಲಕ ವಿದ್ಯುತ್ತನ್ನು ಹರಿಸಿ ರಾಸಾಯನಿಕ ಕ್ರಿಯೆಯೊಂದನ್ನು ಅಲ್ಲಿ ತೊಡಗಿಸಿ, ಆ ಮೂಲಕ ಧನ ವಿದ್ಯುದಂಶ ಹಾಗೂ ಋಣ ವಿದ್ಯುದಂಶಗಳನ್ನು ಪ್ರತ್ಯೇಕಿಸುವ ಕ್ರಿಯೆ.

Electrolyte 

ವಿದ್ಯುತ್ ವಿಭಜಕ – ತನ್ನೊಳಗಿನ ಪರಮಾಣುಗಳನ್ನು ಧನ ಹಾಗೂ ಋಣ ವಿದ್ಯುದಂಶದ ಅಣುಗಳಾಗಿ‌ ವಿಭಜಿತಗೊಳಿಸುವ ಮೂಲಕ ವಿದ್ಯುತ್ತನ್ನು ತನ್ನೊಳಗೆ ಹರಿಯಿಸುವ ವಸ್ತು

Electromagnet

ವಿದ್ಯುದಯಸ್ಕಾಂತ ‌- ಮೃದು ಕಬ್ಬಿಣದ ಸುತ್ತ ಒಂದು ತಂತಿಯನ್ನು ಸುತ್ತುವ ಮೂಲಕ ರೂಪಿಸಿದಂತಹ ಒಂದು ಅಯಸ್ಕಾಂತ. ಎಲ್ಲಿಯವರೆಗೆ ತನ್ನಲ್ಲಿ ವಿದ್ಯುತ್ ಹರಿಯುತ್ತದೋ ಅಲ್ಲಿಯವರೆಗೆ ಅದು ಅಯಸ್ಕಾಂತದಂತೆ ವರ್ತಿಸುತ್ತದೆ.

Electromagnetic pump

ವಿದ್ಯುತ್ಕಾಂತೀಯ ರೇಚಕ ಯಂತ್ರ( ಪಂಪು) – ದ್ರವರೂಪೀ ಲೋಹಗಳನ್ನು ಕೊಳವೆಯ ಮೂಲಕ ಮೇಲೆತ್ತಲು ಬಳಸುವ ಒಂದು ಉಪಕರಣ.

Electromagnetic radiation or Electromagnetic wave

ವಿದ್ಯುತ್ ಕಾಂತೀಯ ವಿಕಿರಣ ಅಥವಾ ವಿದ್ಯುತ್ಕಾಂತೀಯ ಅಲೆ – ವಿದ್ಯುತ್ ಕ್ಷೇತ್ರ ಹಾಗೂ ಕಾಂತಕ್ಷೇತ್ರಗಳನ್ನು ಒಳಗೊಂಡಿರುವ ಮತ್ತು ಚಲಿಸಲು ಯಾವ ಮಾಧ್ಯಮವೂ ಬೇಕಿಲ್ಲದ ಅಲೆಗಳು. ಬೆಳಕು ಸಹ ಇಂತಹ ಒಂದು ಅಲೆಯಾಗಿದೆ.

Electromagnetic spectrum 

ವಿದ್ಯುತ್ಕಾಂತೀಯ ವರ್ಣಪಟಲ – ಒಂದು‌ ವಿಸ್ತಾರವಾದ ಹರಹಿನಲ್ಲಿ ಕ್ರಮವಾಗಿ ಇರಿಸಿದ ವಿದ್ಯುತ್ಕಾಂತೀಯ ವಿಕಿರಣಗಳು‌. ಇದರಲ್ಲಿ ಅತಿನೇರಳೆ, ಅಧೋಕೆಂಪು, ಕಣ್ಣಿಗೆ ಕಾಣುವ ಅಲೆಗಳೇ ಮುಂತಾದ ವಿವಿಧ‌ ರೀತಿಯ ಅಲೆಗಳು ಇರುತ್ತವೆ.

Electron

ಎಲೆಕ್ಟ್ರಾನು – ಒಂದು ಮೂಲಭೂತ ಕಣ. ಪರಮಾಣು ಬೀಜಕೇಂದ್ರದ ಸುತ್ತ ಇರುವ ಕವಚಗಳಲ್ಲಿ ಇರುತ್ತದೆ ಹಾಗೂ ಋಣ ವಿದ್ಯುದಂಶವನ್ನು ಹೊಂದಿರುತ್ತದೆ.

Electron affinity 

ಎಲೆಕ್ಟ್ರಾನಾಕರ್ಷಣೆ – ಒಂದು ಋಣವಿದ್ಯುದಣುವಿನಿಂದ ಒಂದು ಎಲೆಕ್ಟ್ರಾನನ್ನು ಅಣುವೊಂದು ಅಥವಾ ಪರಮಾಣುವೊಂದು ಗಳಿಸಿದಾಗ ಉಂಟಾಗುವ ಶಕ್ತಿ ವ್ಯತ್ಯಾಸ.

Page 37 of 80

Kannada Sethu. All rights reserved.