ಎಲೆಕ್ಟ್ರೋ ಸ್ಟ್ಯಾಟಿಕ್ ಶೀಲ್ಡ್ – ಸ್ಥಾಯೀವಿದ್ಯುತ್ ರಕ್ಷಣಾ ಕವಚ – ಒಂದು ಉಪಕರಣವನ್ನು ವಿದ್ಯುತ್ ಕ್ಷೇತ್ರಗಳು ಮುಟ್ಟದಂತೆ ಕಾಪಾಡುವ ಒಂದು ವಿದ್ಯುತ್ ವಾಹಕ ವಸ್ತು.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಎಲೆಕ್ಟ್ರೋಸ್ಟ್ಯಾಟಿಕ್ ಯೂನಿಟ್ – ಸ್ಥಾಯಿ ವಿದ್ಯುತ್ ಮೂಲಮಾನ – ಸಿಜಿಎಸ್( ಸೆಂಟಿಮೀಟರ್, ಗ್ರಾಂ, ಸೆಕೆಂಡ್) ಮೂಲಮಾನ ವ್ಯವಸ್ಥೆಯಲ್ಲಿನ ಸ್ಥಾಯಿವಿದ್ಯುತ್ ಮೂಲಮಾನಗಳು. ಉದಾಹರಣೆಗೆ ಸ್ಟ್ಯಾಟ್ ಕೂಲಂಬ್, ಸ್ಟ್ಯಾಟ್ ವೋಲ್ಟ್.
ಎಲೆಕ್ಟ್ರೋಸ್ಟ್ಯಾಟಿಕ್ಸ್ – ಸ್ಥಾಯೀವಿದ್ಯುತ್ ವಿಜ್ಞಾನ – ವಿಶ್ರಾಂತಿಯಲ್ಲಿರುವ ವಿದ್ಯದಂಶಗಳನ್ನು, ಅವುಗಳ ನಡುವಿನ ಬಲಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದ ವಿದ್ಯುತ್ ಕ್ಷೇತ್ರಗಳನ್ನು ಅಧ್ಯಯನ ಮಾಡುವ ಜ್ಞಾನಶಾಖೆ.
ಎಲೆಕ್ಟ್ರೋಸ್ಟ್ರಿಕ್ಷನ್ – ವಿದ್ಯುತ್ ವಿರೂಪ – ಒಂದು ವಸ್ತುವನ್ನು ವಿದ್ಯುತ್ ಕ್ಷೇತ್ರದಲ್ಲಿ ಇಟ್ಟಾಗ ಅದರಲ್ಲಿನ ಅಣುಗಳ ದಿಕ್ಕುದೆಸೆ ಬದಲಾಗುವುದರಿಂದ ಆ ವಸ್ತುವಿನ ಗಾತ್ರ, ಆಕಾರಗಳಲ್ಲಿ ಆಗುವ ಬದಲಾವಣೆ.
ಎಲಿಮೆಂಟರಿ ಪಾರ್ಟಿಕಲ್ಸ್ – ಮೂಲಭೂತ ಕಣಗಳು – ಈ ವಿಶ್ವದ ಎಲ್ಲ ವಸ್ತುಗಳನ್ನು ರೂಪಿಸಿರುವ ಆದರೆ ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾಗಿರುವ ಕಣಗಳು. ಇವು ಪರಮಾಣುವಿನ ಒಳಗೆ ಇರುತ್ತವೆ.
ಎಲಿಮೆಂಟ್ಸ್, ಮ್ಯಾಗ್ನೆಟಿಕ್ – ಕಾಂತೀಯ ಪರಿಮಾಣಗಳು – ಯಾವುದೇ ಒಂದು ಸ್ಥಳಬಿಂದುವಿನಲ್ಲಿ ಭೂಮಿಯ ಕಾಂತಕ್ಷೇತ್ರವನ್ನು ಸಂಪೂರ್ಣವಾಗಿ ನಿರೂಪಿಸಿ ನಿರ್ಧರಿಸುವ ಮೂರು ಪರಿಮಾಣಗಳು. ಅವೆಂದರೆ, 1. ಕಾಂತೀಯ ಬಾಗು, 2. ಇಳಿಜಾರಿನ ಕೋನ, 3. ಅಡ್ಡರೇಖೆಯ ತೀಕ್ಷ್ಣತೆ.
ಎಲಿಪ್ಸಾಯ್ಡ್ – ಅಂಡಾಕೃತಿ ಘನ- ಮೂರು ಆಯಾಮಗಳ ಒಂದು ಘನಾಕೃತಿ ಇದು, ಮೊಟ್ಟೆಯಂತೆ ಇರುತ್ತೆ.
ಎಲಿಪ್ಟಿಕಲ್ ಪೋಲರೈಸೇಷನ್ – ಇದು ವಿದ್ಯುತ್ ಕಾಂತೀಯ ವಿಕಿರಣದ ಒಂದು ರೀತಿಯ ಧ್ರುವೀಕರಣ. ಒಟ್ಟಿಗೆ ಸಾಗುತ್ತಿರುವ ಆದರೆ 90 ಡಿಗ್ರಿಗಳ ಗತಿವ್ಯತ್ಯಾಸವುಳ್ಳ ಮತ್ತು ಸಮಾನವಲ್ಲದ ಅಲೆಯೆತ್ತರ ಹೊಂದಿರುವ ಎರಡು ಮೇಲ್ಮೈ ಧ್ರುವೀಕೃತ ವಿಕಿರಣಗಳನ್ನು ಒಳಗೊಂಡದ್ದು ಎಂದು ನಾವಿದನ್ನು ಪರಿಗಣಿಸಬಹುದು.
ಎಮೆನೇಷನ್ – ಜನ್ಮಿತ ಅಥವಾ ಜನಿತ – ರೇಡಾನ್ ನ ಕೆಲವು ಸಮರೂಪಿಗಳಿಗೆ ಮುಂಚೆ ಇಟ್ಟಿದ್ದ ಹೆಸರು. ಇವುಗಳ ಜನಕ ರೇಡಿಯಂ. ಈ ಮೂಲವಸ್ತುವಿನ ಆಲ್ಫಾ ವಿಘಟನೆಯಿಂದ ಈ ಸಮರೂಪಿಗಳು ಜನಿಸುತ್ತವೆ.
ಎಮಿಷನ್ ಸ್ಪೆಕ್ಟ್ರಮ್ - ಹೊರಸೂಸುವಿಕೆಯ ವರ್ಣಪಟಲ – ಬೆಳಕಿನ ಆಕರವೊಂದರಿಂದ ಹೊರ ಬರುತ್ತಿರುವ ಬೆಳಕನ್ನು ಅದು ಬರುತ್ತಿದ್ದಂತೆಯೇ ವರ್ಣಪಟಲ ದರ್ಶಕ
( ಸ್ಪೆಕ್ಟ್ರೋಸ್ಕೋಪ್)ದಿಂದ ಪರಿಶೀಲಿಸಿದಾಗ ಕಂಡುಬರುವ ವರ್ಣಪಟಲ.
Like us!
Follow us!