ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Euler force

ಯೂಲರ್ ಫೋರ್ಸ್ – ಎರಡೂ ಪಕ್ಕಗಳಲ್ಲೂ ಎರಡು ಕಂಬಗಳ ಆಧಾರದ ಮೇಲೆ ನಿಂತಿರುವಂತಹ ತೊಲೆಯನ್ನು ಬಗ್ಗಿಸಲು ಬೇಕಾದ ನಿರ್ಣಾಯಕ ಬಲ.‌

Evaporation

ಎವಾಪೊರೇಷನ್ – ಆವಿಯಾಗುವಿಕೆ – ಘನ‌ ಅಥವಾ ದ್ರವ ಸ್ಥಿತಿಯಿಂದ ವಸ್ತುವು ಅನಿಲ ಸ್ಥಿತಿಗೆ ಬದಲಾಗುವ ಪ್ರಕ್ರಿಯೆ.

Exchange force 

ಎಕ್ಸ್ ಚೇಂಜ್ ಫೋರ್ಸ್ – ವಿನಿಮಯ ಬಲ – ಎರಡು ಅಣುಗಳ ನಡುವೆ ಕಣಗಳ ವಿನಿಮಯದಿಂದ ಉತ್ಪತ್ತಿಯಾಗುವ ಬಲ.‌ ಈ ಬಲದಿಂದಾಗಿ ಆ ಅಣುಗಳ ನಡುವೆ ಬಂಧವೊಂದು‌ ಸಾಧ್ಯವಾಗುತ್ತದೆ.

Excitation 

ಎಕ್ಸೈಟೇಷನ್ – ಉತ್ತೇಜನ‌ – ಒಂದು ಬೀಜಕೇಂದ್ರ/ ಎಲೆಕ್ಟ್ರಾನು/ ಅಣು/ವಿದ್ಯುದಂಶವು ಶಕ್ತಿಯನ್ನು ಪಡೆದುಕೊಂಡು ತಾನು ಇರುವ ಸಾಮಾನ್ಯ ಸ್ಥಿತಿಗಿಂತ ಹೆಚ್ಚು ಶಕ್ತಿಯ (ಕ್ವಾಂಟಂ -ಶಕ್ತಿ ಪೊಟ್ಟಣ) ಸ್ಥಿತಿಗೆ ಏರುವುದು.

Exciton 

ಎಕ್ಸೈಟಾನ್ – ಉತ್ತೇಜಿತ ಪರಮಾಣುವಿನಂತೆ ವರ್ತಿಸುವಂತಹ ಒಂದು ಎಲೆಕ್ಟ್ರಾನು‌ ಹಾಗೂ ಒಂದು ರಂಧ್ರಗಳ ಕಣಜೋಡಿ.

Exclusion principle ( Pauli’s )

ಎಕ್ಸ್ ಕ್ಲೂಷನ್ ಪ್ರಿನ್ಸಿಪಲ್ (ಪೌಲೀಸ್) –  (ಪೌಲಿಯವರ) ಬೇರೆಗೊಳಿಸುವ ಸಿದ್ಧಾಂತ – ಒಂದು ವ್ಯವಸ್ಥೆಯಲ್ಲಿನ‌ ಯಾವ ಎರಡು ಕಣಗಳೂ, ಉದಾಹರಣೆಗೆ ಒಂದು ಪರಮಾಣುವಿನಲ್ಲಿನ‌ ಎರಡು ಎಲೆಕ್ಟ್ರಾನುಗಳು ಏಕರೂಪಿಯಾದ (ಒಂದೇ ಅಂದರೆ ಅದದೇ) ಕ್ವಾಂಟಂ ಸಂಖ್ಯೆಗಳನ್ನು ಹೊಂದಿರಲು ಸಾಧ್ಯ ಇಲ್ಲ ಎಂಬ ಸಿದ್ಧಾಂತ ಇದು. 

Exhaust velocity 

ಎಕ್ಸ್ ಹಾಸ್ಟ್ ವೆಲಾಸಿಟಿ – ಹೊರಚಿಮ್ಮುವ ವೇಗ – ರಾಕೆಟ್ಟಿನಲ್ಲಿನ ಉರಿದ ಅನಿಲಗಳು ಹೊರಕ್ಕೆ ಚಿಮ್ಮುವ ವೇಗ.

Exitance 

ಎಕ್ಸಿಟೆನ್ಸ್ – ಕಾಂತಿ ಸೂಸುವಿಕೆ – ಒಂದು ಮೇಲ್ಮೈಯ ಏಕಘಟಕ ವಿಸ್ತೀರ್ಣದ ಪ್ರದೇಶವು ಹೊರಸೂಸುವ ಪ್ರಕಾಶಮಾನವಾದ ಅಥವಾ ಹೊಳೆಯುವ ಬೆಳಕು. ಮುಂಚೆ ಇದನ್ನು emittance (ಎಮಿಟೆನ್ಸ್) ಎಂದು ಕರೆಯುತ್ತಿದ್ದರು.

Exoergic

ಎಕ್ಸೋಎರ್ಜಿಕ್ – ಶಕ್ತಿದಾಯಕ  ಪ್ರಕ್ರಿಯೆ – ಶಕ್ತಿಯನ್ನು ಹೊರಸೂಸುವ ಬೀಜಕೇಂದ್ರದ ಪ್ರಕ್ರಿಯೆಯನ್ನು ಸೂಚಿಸುವ ಪದ.

Exosphere 

ಎಕ್ಸೋಸ್ಫಿಯರ್ – ಹೊರಗೋಳ – 400 ಕಿಲೋಮೀಟರುಗಳ ದೂರದಲ್ಲಿ ಇರುವಂತಹ, ಭೂಮಿಯ ಅತ್ಯಂತ ಹೊರಗಿರುವ ವಾತಾವರಣ ಪದರ.

Page 43 of 80

Kannada Sethu. All rights reserved.