ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Expansion, thermal 

ಎಕ್ಸ್ಪಾನ್ಶನ್, ಥರ್ಮಲ್ – ತಾಪಮಾನೀಯ ವಿಸ್ತರಣೆ ಅಥವಾ ಉಷ್ಣತಾ ವಿಸ್ತರಣೆ – ಉಷ್ಣತೆಯು ಹೆಚ್ಚಾದಾಗ  ಘನ, ದ್ರವ ಅಥವಾ ಅನಿಲರೂಪದ ವಸ್ತು, ಗಾತ್ರಗಳು ಹೆಚ್ಚುವ ಪ್ರಕ್ರಿಯೆ.

Expansivity 

ಎಕ್ಸ್ಪಾನ್ಸಿವಿಟಿ – ವಿಸ್ತರಣಾ  ಸಾಮರ್ಥ್ಯ – ಒಂದು ವಸ್ತುವಿನ ತಾಪಮಾನವನ್ನು ಹೆಚ್ಚಿಸಿದಾಗ ಅದು ಎಷ್ಟು ಹಿಗ್ಗುತ್ತದೆ ಎಂಬುದರ ಅಳತೆ.

Extensometer

ಎಕ್ಸ್ಟೆನ್ಸೋಮೀಟರ್ – ವಿಸ್ತರಣಾ ಮಾಪಕ – ವಿಸ್ತರಣಾ ಮಾಪಕ – ರೇಖಾತ್ಮಕ ಬಲಪ್ರಯೋಗದಿಂದ ಉಂಟಾಗುವ ವಿಸ್ತರಣೆಯನ್ನು ( ಎಳೆತವನ್ನು) ಅಳೆಯುವ ಉಪಕರಣ.

Eye

ಐ – ಕಣ್ಣು ( ನೇತ್ರ) – ಒಂದು ಪ್ರಜ್ಞೇಂದ್ರಿಯ –  ದೃಶ್ಯಬಿಂಬಗಳನ್ನು ಉತ್ಪತ್ತಿ ಮಾಡಿ ತತ್ಸಂಬಂಧೀ ನರಸಂಕೇತಗಳನ್ನು ಮೆದುಳಿಗೆ ಕಳಿಸುವ ಸಾಮರ್ಥ್ಯವು ಈ ಇಂದ್ರಿಯಕ್ಕೆ ಇರುತ್ತದೆ.

Eye lens

ಐ ಲೆನ್ಸ್ – ನೇತ್ರ ಮಸೂರ – ಮಸೂರಗಳ ಸಂಯೋಜನೆಯಲ್ಲಿ ಕಣ್ಣಿಗೆ ಅತ್ಯಂತ ಹತ್ತಿರ ಇರುವ ಮಸೂರ.

F.M.(Frequency Modulation)

ಎಫ್.ಎಂ – (ಫ್ರೀಕ್ವೆನ್ಸಿ ಮಾಡ್ಯುಲೇಷನ್) – ಪ್ರಸಾರವಾಗಬೇಕಾಗಿರುವ ಶ್ರವ್ಯ ಅಥವಾ ದೃಶ್ಯ ಅಲೆಗೆ ಅನುಗುಣವಾಗಿ ಒಯ್ಯಕ ಅಲೆಯ ಆವರ್ತನವನ್ನು ನಿಯಂತ್ರಿಸುವ ಕ್ರಿಯೆ.

Factorial 

 ಫ್ಯಾಕ್ಟೋರಿಯಲ್ – ಆದಿಗುಣಕ‌ – ಒಂದು ದತ್ತ ಸಂಖ್ಯೆ ಹಾಗೂ ಅದರ ಕೆಳಗಿರುವ ಎಲ್ಲ ಪೂರ್ಣಾಂಕಗಳ ಗುಣಲಬ್ಧ. ಸಾಮಾನ್ಯವಾಗಿ ಇದನ್ನು‌N! ಎಂದು ಬರೆಯುತ್ತಾರೆ. 

Fall out

ಫಾಲ್ ಔಟ್ – ವಿಕಿರಣ ಪಾತ – ಅಣು ಸ್ಥಾವರಗಳು ಸ್ಫೋಟಗೊಂಡಾಗ ವಾತಾವರಣಕ್ಕೆ ಬಂದು ಸೇರಿಕೊಳ್ಳುವ ವಿಕಿರಣ ವಸ್ತುಕಣಗಳು.‌ ಇವು‌ ಮನುಷ್ಯನ ಹಾಗೂ ಪ್ರಾಣಿಗಳ ದೇಹಕ್ಕೆ ತುಂಬ ಅಪಾಯವನ್ನುಂಟುಮಾಡುತ್ತವೆ.

Far infrared 

ಫಾರ್ ಇನ್ ಫ್ರಾರೆಡ್ – ತುಟ್ಟತುದಿಯ ಅಧೋಕೆಂಪು -ವಿದ್ಯುತ್ಕಾಂತೀಯ ವರ್ಣಪಟಲದಲ್ಲಿನ ಅಧೋಕೆಂಪು ಅಲೆಪ್ರದೇಶದ ಅತ್ಯಂತ ಉದ್ದದ ತರಂಗಾಂತರವುಳ್ಳ ಭಾಗಗಳು.

Far point

ಫಾರ್ ಪಾಯಿಂಟ್ –  ತುಟ್ಟತುದಿಯ ಬಿಂದು –   ಕಣ್ಣಿನ ಅಕ್ಷಿಪಟಲದ ಮೇಲೆ ಬಿಂಬವು ರೂಪುಗೊಳ್ಳಲು ಸಾಧ್ಯ ಇರುವ ಅತ್ಯಂತ ದೂರದ ಬಿಂದು ಇದು.

Page 44 of 76

Kannada Sethu. All rights reserved.