ಫ್ಯಾರಡ್( F) – ಫ್ಯಾರಡ್( F) – ವಿದ್ಯುತ್ ಸಾಮರ್ಥ್ಯದ ಎಸ್.ಐ.ಮೂಲಮಾನ. ಭೌತವಿಜ್ಞಾನಿ ಮೈಕೆಲ್ ಫ್ಯಾರಡೆಯ( ಕಾಲ 1791-1867) ನೆನಪಿನಲ್ಲಿ ಇಟ್ಟ ಹೆಸರು ಇದು.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಫ್ಯಾರಡೆ ಡಿಸ್ಕ್ – ಫ್ಯಾರಡೆ ತಟ್ಟೆ ಅಥವಾ ಫ್ಯಾರಡೆ ಫಲಕ – ನೇರ ವಿದ್ಯುತ್ತನ್ನು ಉತ್ಪಾದಿಸುವ ಒಂದು ಉಪಕರಣ ಇದು. ಏಕಧ್ರುವ ವಿದ್ಯುದುತ್ಪಾದಕ. ಇದರಲ್ಲಿ, ಈ ಉದ್ದೇಶಕ್ಕಾಗಿ, ಕಾಂತಕ್ಷೇತ್ರದಲ್ಲಿ ಸುತ್ತುತ್ತಿರುವ ಲೋಹದ ತಟ್ಟೆಯೊಂದನ್ನು ಬಳಸುತ್ತಾರೆ.
ಫ್ಯಾರಡೆ ಎಫೆಕ್ಟ್ – ಫ್ಯಾರಡೆ ಪರಿಣಾಮ- ಕಾಂತಕ್ಷೇತ್ರದಲ್ಲಿರುವಂತಹ ಒಂದು ಅವಾಹಕ ಮಾಧ್ಯಮವೊಂದರಲ್ಲಿ ವಿಕಿರಣದ ಧ್ರುವೀಕರಣದ ಮೇಲ್ಮೈಯ ಸುತ್ತುವಿಕೆ.
ಫಾಸ್ಟ್ ನ್ಯೂಟ್ರಾನ್ – ವೇಗದ ನ್ಯೂಟ್ರಾನು – ಅಣುಬೀಜಕೇಂದ್ರದ ವಿದಳನದಿಂದ ಉತ್ಪತ್ತಿಯಾದ ಹೆಚ್ಚಿನ ಶಕ್ತಿ ಹೊಂದಿರುವ ನ್ಯೂಟ್ರಾನು.
ಫಾಸ್ಟ್ ರಿಯಾಕ್ಟರ್ – ವೇಗದ ಅಣುಸ್ಥಾವರ – ವೇಗ ನಿರೋಧಕವನ್ನು ಬಳಸದಿರುವ ಅಥವಾ ತುಸು ಪ್ರಮಾಣದಲ್ಲಷ್ಟೇ ಬಳಸುವ ಅಣುಸ್ಥಾವರ.
ಫೆಟೀಗ್ – ವೈಫಲ್ಯ ( ಮುರಿದು ಬೀಳುವಿಕೆ ) – ಮತ್ತೆ ಮತ್ತೆ ಬೀಳುವ ಒತ್ತಡದಿಂದಾಗಿ ಒಂದು ವಸ್ತುವು ಮುರಿದು ಬಿದ್ದು ತನ್ನ ಕೆಲಸದಲ್ಲಿ ವಿಫಲಗೊಳ್ಳುವುದು.
ಫೀಡ್ ಬ್ಯಾಕ್ – ಹಿಮ್ಮರಳಿಕೆ – ಒಂದು ಉಪಕರಣ( ಉದಾ : ಶಕ್ತಿ ವರ್ಧಕ)ದಿಂದ ಹೊರಬೀಳುವ ಶಕ್ತಿಯ ಒಂದು ಭಾಗವನ್ನು ಮೂಲ ಆಕಾರಕ್ಕೆ ಹಿಮ್ಮರಳಿಸುವುದು.
ಫರ್ಮಿ ಅನಿಲ ಮಾದರಿ – ಇದು ಪರಮಾಣು ಬೀಜಕೇಂದ್ರದ ಒಂದು ವಿನ್ಯಾಸ ಮಾದರಿ. ಇದರಲ್ಲಿ ನ್ಯೂಟ್ರಾನು ಮತ್ತು ಪ್ರೋಟಾನುಗಳನ್ನು ಫರ್ಮಿ-ಡೆರಾಕ್ ಸಂಖ್ಯಾಶಾಸ್ತ್ರವನ್ಜು ಪಾಲಿಸುವ ಮತ್ತು ಬೀಜಕೇಂದ್ರದ ಅಳತೆಯ ಘನಾಕೃತಿಯೊಳಗೆ, ಹೊರಗೆ ಬರದಂತೆ ಬಂಧಿಸಿ ಇಡಲ್ಪಟ್ಟ ಸ್ವತಂತ್ರ ಕಣಗಳು ಎಂದು ನೋಡಲಾಗುತ್ತದೆ.
ಫರ್ಮಿ ಲೆವೆಲ್ – ಫರ್ಮಿ ಮಟ್ಟ – ಪರಮಶೂನ್ಯದಲ್ಲಿ ವಾಸ್ತವ್ಯವು ಸಾಧ್ಯವಾಗಬಹುದಾದ ಅತಿ ಹೆಚ್ಚಿನ ಮಟ್ಟ. ಇದು ವಾಹಕಗಳಲ್ಲಿ ವಾಹಕತಾ ಪಟ್ಟಿಯಲ್ಲಿ, ಅವಾಹಕಗಳಲ್ಲಿ ಅಂಚಿನ ಪಟ್ಟಿಯಲ್ಲಿ ಮತ್ತು ಅರೆವಾಹಕಗಳಲ್ಲಿ ನಿಷೇಧಿತ ಬಿರುಕುಪಟ್ಟಿಯಲ್ಲಿ ಇರುತ್ತದೆ.
ಫರ್ಮಿ ಡೆರಾಕ್ ಸ್ಟ್ಯಾಟಿಸ್ಟಿಕ್ಸ್ – ಫರ್ಮಿ ಡೆರಾಕ್ ಸಂಖ್ಯಾಶಾಸ್ತ್ರ – ಸಂಖ್ಯಾಶಾಸ್ತ್ರದ ಒಂದು ಶಾಖೆ ಇದು. ಇದನ್ನು ಏಕರೂಪೀ ಕಣಗಳ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಬಳಸುತ್ತಾರೆ. ಎನ್ರಿಕೊ ಫರ್ಮಿ ಮತ್ತು ಪಿ.ಎ.ಎಂ. ಡೆರಾಕ್ ಅವರ ನೆನಪಿನಲ್ಲಿ ಈ ಹೆಸರು.