ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Fermi level 

ಫರ್ಮಿ ಲೆವೆಲ್ – ಫರ್ಮಿ ಮಟ್ಟ – ಪರಮಶೂನ್ಯದಲ್ಲಿ ವಾಸ್ತವ್ಯವು‌ ಸಾಧ್ಯವಾಗಬಹುದಾದ ಅತಿ ಹೆಚ್ಚಿನ ಮಟ್ಟ. ‌ಇದು ವಾಹಕಗಳಲ್ಲಿ ವಾಹಕತಾ ಪಟ್ಟಿಯಲ್ಲಿ, ಅವಾಹಕಗಳಲ್ಲಿ ಅಂಚಿನ ಪಟ್ಟಿಯಲ್ಲಿ ಮತ್ತು ಅರೆವಾಹಕಗಳಲ್ಲಿ ನಿಷೇಧಿತ ಬಿರುಕುಪಟ್ಟಿಯಲ್ಲಿ ಇರುತ್ತದೆ.

Fermi-Dirac statistics

ಫರ್ಮಿ‌ ಡೆರಾಕ್ ಸ್ಟ್ಯಾಟಿಸ್ಟಿಕ್ಸ್ – ಫರ್ಮಿ ಡೆರಾಕ್ ಸಂಖ್ಯಾಶಾಸ್ತ್ರ – ಸಂಖ್ಯಾಶಾಸ್ತ್ರದ ಒಂದು ‌ಶಾಖೆ ಇದು. ಇದನ್ನು ಏಕರೂಪೀ ಕಣಗಳ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಬಳಸುತ್ತಾರೆ. ಎನ್ರಿಕೊ ಫರ್ಮಿ ಮತ್ತು ಪಿ.ಎ.ಎಂ. ಡೆರಾಕ್ ಅವರ ನೆನಪಿನಲ್ಲಿ ಈ ಹೆಸರು.

Fermions

ಫರ್ಮಿಯಾನ್ಸ್ –  ಫರ್ಮಿಯಾನುಗಳು – ಫರ್ಮಿ ಡೆರಾಕ್ ಅಂಕಿಅಂಶಗಳನ್ನು ಪಾಲಿಸುವ ಕಣಗಳು.

Fermium

ಫರ್ಮಿಯಂ- ಫರ್ಮಿಯಂ – ಒಂದು ಯುರೇನಿಯಮೋತ್ತರ( ಟ್ರ್ಯಾನ್ಸ್ ಯುರೇನಿಕ್ -ನಿಯತಕಾಲಿಕ ಕೋಷ್ಟಕದಲ್ಲಿ ಯುರೇನಿಯಂನ‌ ನಂತರ ಬರುವ) ಮೂಲವಸ್ತು. ಇದರ ಪರಮಾಣು ಸಂಖ್ಯೆ 100.

Ferrimagnetism 

ಫೆರ್ರಿ ಮ್ಯಾಗ್ನೆಟಿಸಂ‌ – ದುರ್ಬಲ ಅಯಸ್ಕಾಂತತೆ – ಕೆಲವು ವಸ್ತುಗಳಲ್ಲಿ ಅಸಮಾನ ಕಾಂತೀಯ ತಿರುಗುಬಲಗಳು ಪರ್ಯಾಯ ವಿರುದ್ಧ ನೆಲೆಯಲ್ಲಿ ನೆಲೆ ನಿಂತಿದ್ದು, ಇವುಗಳ ಒಟ್ಟು ಫಲಿತವು ದುರ್ಬಲ ಅಯಸ್ಕಾಂತ ಗುಣವನ್ನು ಉಂಟುಮಾಡುತ್ತದೆ. ಇಂತಹ ವಸ್ತುಗಳನ್ನು ದುರ್ಬಲ ಅಯಸ್ಕಾಂತಗುಣೀಯ ವಸ್ತುಗಳು ಎನ್ನುತ್ತಾರೆ.

Ferrites 

ಫೆರೈಟ್ಸ್ – ದುರ್ಬಲ ಕಾಂತಗಳು – ಇವು ಕಬ್ಬಿಣಯುತ ಸಂಯುಕ್ತವಸ್ತುಗಳ ಒಂದು ಗುಂಪು. ಇವುಗಳಿಗೆ ದುರ್ಬಲ ಆದರೆ ಶಾಶ್ವತ ಅಯಸ್ಕಾಂತ ಗುಣ ಇರುತ್ತದೆ‌. 

Ferroelecticals 

ಫೆರ್ರೋಎಲೆಕ್ಟ್ರಿಕಲ್ಸ್ – ವಿದ್ಯುತ್ ಕಾಂತಗಳು – ಪ್ರಬಲ ಅಯಸ್ಕಾಂತ ವಸ್ತುಗಳು ಹೊಂದಿರುವ ವಿದ್ಯುತ್ತೀಯ ಗುಣಲಕ್ಷಣಗಳನ್ನು ಹೊಂದಿರುವ ಅವಾಹಕ ವಸ್ತುಗಳು.

Ferromagnetism

ಫೆರ್ರೋಮ್ಯಾಗ್ನೆಟಿಸಂ – ಪ್ರಬಲ‌ ಅಯಸ್ಕಾಂತತೆ – ಕಬ್ಬಿಣ, ಕೊಬಾಲ್ಟ್ ಮತ್ತು ನಿಕ್ಕಲ್ ನಂತಹ ಕೆಲವು ವಸ್ತುಗಳು ಹೆಚ್ಚಿನ ಪ್ರಮಾಣದ ಕಾಂತೀಯತೆಯನ್ನು ಹೊಂದಿರುತ್ತವೆ‌, ಅಂದರೆ, ಬಹಳ ಬೇಗ ಕಾಂತಗಳಾಗುವ ಗುಣವುಳ್ಳ ವಸ್ತುಗಳು ಇವು.  ಇಂತಹ ವಸ್ತುಗಳನ್ನು ಪ್ರಬಲ ಅಯಸ್ಕಾಂತೀಯತೆ ಹೊಂದಿರುವವು ಅನ್ನಲಾಗುತ್ತದೆ.

Fertile material

ಫರ್ಟೈಲ್ ಮೆಟೀರಿಯಲ್ – ಫಲದಾಯೀ ವಸ್ತು – ನ್ಯೂಟ್ರಾನುಗಳನ್ನು ಹೀರಿಕೊಳ್ಳುವ ಮೂಲಕ ವಿದಳನಗೊಳ್ಳುವ ವಸ್ತುಗಳಾಗಿ ಬದಲಾಗುವಂತಹ ವಸ್ತಗಳು‌.

Fibre optics

ಫೈಬರ್ ಆಪ್ಟಿಕ್ಸ್  – ಗಾಜಿನ ನಾರಿನ ಬೆಳಕು ವಿಜ್ಞಾನ – ಬೆಳಕನ್ನು ಪ್ರಸಾರ ಮಾಡಲು ಪಾರದರ್ಶಕವಾದ ಗಾಜಿನ/ಬೇರೆ ವಸ್ತುವಿನ ನಾರನ್ನು ಬಳಸುವುದು‌.

Page 46 of 80

Kannada Sethu. All rights reserved.