ಫಾಸಿಲ್ ಫ್ಯುಯೆಲ್ – ಪಳೆಯುಳಿಕೆ ಇಂಧನ – ಜನರು ಶಕ್ತಿಯ ಆಕರವಾಗಿ ಬಳಸುವ ಕಲ್ಲಿದ್ದಲು, ತೈಲ ಅಥವಾ ಜೈವಿಕ ( ಸಹಜ) ಅನಿಲದಂತಹ ಇಂಧನಗಳು. ಇವುಗಳು ಜೀವಿಗಳ ಅವಶೇಷಗಳಿಂದ ರೂಪುಗೊಂಡಿರುತ್ತವೆ. ಇವುಗಳಲ್ಲಿ ಅಧಿಕ ಪ್ರಮಾಣದ ಜಲಜನಕ ಅಥವಾ ಇಂಗಾಲ ಇರುತ್ತದೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಫ್ಯೂಕೋ ಪೆಂಡ್ಯುಲಮ್ – ಫ್ಯೂಕೋರ ಲೋಲಕ –
ಭೂಮಿಯ ಸುತ್ತುವಿಕೆಯಿಂದಾಗಿ ನಿಧಾನವಾಗಿ ತಿರುಗುವ ಮೇಲ್ಮೈ ಹೊಂದಿರುವ ಒಂದು ಸರಳ ಲೋಲಕ ಇದು. 1851 ರಲ್ಲಿ ಫ್ರೆಂಚ್ ಭೌತವಿಜ್ಞಾನಿಯಾದ ಜೀನ್ ಬರ್ನಾರ್ಡ್ ಲಿಯೋನ್ ಫ್ಯೂಕೋರು ಇದನ್ನು ಕಂಡುಹಿಡಿದರು. ಭೂಮಿಯ ಸುತ್ತುವಿಕೆಗೆ ಮೊದಲ ನೇರ ಸಾಕ್ಷಿ ಕೊಟ್ಟದ್ದು ಈ ಲೋಲಕ.
ಫೋರಿಯರ್ ಸೀರೀಸ್ – ಫೋರಿಯರ್ ಸರಣಿ – ನಿಯತಕಾಲಿಕ ಗುಣಕವನ್ನು ತ್ರಿಕೋನಮಿತಿಯ (ಟ್ರಿಗೋನೋಮೆಟ್ರಿ) ಗುಣಕಗಳಾಗಿ ವಿಸ್ತರಿಸಿ ಬರೆಯುವುದು. ಇದನ್ನು ಮೊದಲು ಫ್ರಾನ್ಸ್ ದೇಶದ ಗಣಿತಜ್ಞರಾದ ಜೆ.ಬಿ.ಜೆ. ಫೋರಿಯರ್ ( 1768 – 1830) ಅವರು ಸಂಕೀರ್ಣ ಅಲೆಯ ಸುಸಂಬದ್ಧ ಅಂಗಗಳನ್ನು ಕಂಡುಹಿಡಿಯಲು ಬಳಸಿದರು.
ಫೋರ್ತ್ ಡೈಮೆನ್ಶನ್ – ನಾಲ್ಕನೆಯ ಆಯಾಮ – ಅವಕಾಶ ಮತ್ತು ಸಮಯದ ನಿರಂತರತೆಯ ಒಂದು ಆಯಾಮ ಇದು. ಉದ್ದ, ಅಗಲ, ದಪ್ಪಗಳನ್ನು ಹೊರತು ಪಡಿಸಿದ ಒಂದು ಆಯಾಮ.
ಫ್ರೇಮ್ ಆಫ್ ರೆಫರೆನ್ಸ್ – ಪರಾಮರ್ಶನ ಚೌಕಟ್ಟು – ಇದು ನಿರ್ದೇಶಕ ಅಕ್ಷರೇಖೆಗಳ ಒಂದು ಚೌಕಟ್ಟು. ಇದರ ಸಹಾಯದಿಂದ ಸಮಯದೊಂದಿಗೆ ಬದಲಾಗುವ ವಸ್ತುವಿನ ಸ್ಥಾನವನ್ನು ಗುರುತಿಸಬಹುದು.
ಫ್ರಾನ್ ಹಾಫರ್ ಲೈನ್ಸ್ – ಫ್ರಾನ್ ಹಾಫರ್ ಗೆರೆಗಳು – ಸೂರ್ಯನ ಬೆಳಕಿನಿಂದ ಉಂಟಾಗುವ ವರ್ಣಪಟಲದಲ್ಲಿನ ಗಾಢ ಕಪ್ಪು ಗೆರೆಗಳು. ಈ ಗೆರೆಗಳ ತರಂಗಾಂತರಗಳನ್ನು, ತರಂಗಾಂತರಗಳೊಂದಿಗೆ ಬದಲಾಗುವ ಪರಿಮಾಣಗಳನ್ನು ಗುರುತಿಸಲು ಪರಾಮರ್ಶನ ಮಾನದಂಡಗಳಾಗಿ ಬಳಸುತ್ತಾರೆ. ಉದಾಹರಣೆಗೆ, ವಕ್ರೀಭವನ ಸ್ಥಿರಾಂಕಗಳು.
ಫ್ರೀ ಎನರ್ಜಿ – ಮುಕ್ತ ಶಕ್ತಿ – ಉಪಯುಕ್ತ ಕೆಲಸ ಮಾಡಲು ಒಂದು ವ್ಯವಸ್ಥೆಗೆ ಇರುವ ಸಾಮರ್ಥ್ಯ.
ಫ್ರೀ ಆಸ್ಸಿಲೇಷನ್ – ಮುಕ್ತ ಆವರ್ತನ – ಒಂದು ವ್ಯವಸ್ಥೆ ಅಥವಾ ವಸ್ತುವಿನ ಸಹಜ ಆವರ್ತನದಲ್ಲಿ ಇರುವ ಆಂದೋಲನ. ಲೋಲಕವೊಂದರ ಈ ಮುಕ್ತ ಆಂದೋಲನವು ಅದರ ಉದ್ದ ಮತ್ತು ದ್ರವ್ಯರಾಶಿಯನ್ನು ಅವಲಂಬಿಸಿರುತ್ತದೆ.
ಫ್ರೀ ಸರ್ಫೇಸ್ ಎನರ್ಜಿ – ಮುಕ್ತ ಮೇಲ್ಮೈ ಶಕ್ತಿ – ತೆರೆದುಕೊಂಡ ಒಂದು ಮೇಲ್ಮೈ ಯಲ್ಲಿನ ಏಕಘಟಕ ಪ್ರದೇಶವು ಹೊಂದಿರುವ ಶಕ್ತಿ.
ಫ್ರೀಝಿಂಗ್ – ಹೆಪ್ಪುಗಟ್ಟುವಿಕೆ – ದ್ರವ ಸ್ಥತಿಯಿಂದ ಘನ ಸ್ಥಿತಿಗೆ ಮಾರ್ಪಾಡಾಗುವ ಪ್ರಕ್ರಿಯೆ.
Like us!
Follow us!