ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Hot cathode tube

ಹಾಟ್ ಕ್ಯಾಥೋಡ್ ಟ್ಯೂಬ್ – ಬಿಸಿ ಋಣವಿದ್ಯುದ್ವಾರ ಕೊಳವೆ ಅಥವಾ ಬಿಸಿ‌ ಕ್ಯಾಥೋಡು – ವಿದ್ಯುತ್ ಹರಿವಿಗಾಗಿ ಬೇಕಾಗುವಂತಹ ಎಲೆಕ್ಟ್ರಾನುಗಳನ್ನು, ಕಾಯಿಸಿದ ಒಂದು ಭಾಗದಿಂದ ಸರಬರಾಜು ಮಾಡುವ ವ್ಯವಸ್ಥೆಯುಳ್ಳ  ಒಂದು ವಿದ್ಯುತ್ (ಹರಿವಿನ) ಕೊಳವೆ‌.

Hot laboratory

ಹಾಟ್ ಲ್ಯಾಬೊರೇಟರಿ – ಸುಡು ಪ್ರಯೋಗಾಲಯ – ವಿಕಿರಣ ವಸ್ತುಗಳಿಗೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ರಯೋಗಾಲಯ. ‌ಈ ಲೋಹಗಳ ರಾಸಾಯನಿಕ ಕ್ರಿಯಾತ್ಮಕತೆಯು (ರಿಯಾಕ್ಟಿವಿಟಿ) ತುಂಬಾ ಹೆಚ್ಚಿನ ಮಟ್ಟದಲ್ಲಿರುತ್ತದೆ.

Hot spot 

ಹಾಟ್ ಸ್ಪಾಟ್ – ಗರಿಷ್ಠ ತಾಪ ಬಿಂದು – ತನ್ನ ಸುತ್ತಮುತ್ತಲ ಪ್ರದೇಶಗಳಿಗೆ ಹೋಲಿಸಿದರೆ ತುಂಬ ಹೆಚ್ಚು ತಾಪಮಾನವುಳ್ಳ ಒಂದು ಪ್ರದೇಶ.

Hot wire gauge

ಹಾಟ್ ವೈರ್ ಗಾಜ್ – ಬಿಸಿತಂತಿಯ ಅಳತೆ ಉಪಕರಣ – ಒಂದು ಅನಿಲವು ಬಿಸಿತಂತಿಯನ್ನು ತಣ್ಣಗಾಗಿಸುವುದನ್ಬು ಅವಲಂಬಿಸಿ‌, ಒತ್ತಡವನ್ನು ಅಳೆಯುವ ಉಪಕರಣ.

Hot wire microphone

ಹಾಟ್ ವಯರ್ ಮೈಕ್ರೋಫೋನ್ – ಧ್ವನಿಶಕ್ತಿ ಮಾಪಕ – ಶಬ್ಧದ ಅಲೆಗಳ ಎತ್ತರ ಮತ್ತು ತೀಕ್ಷ್ಣತೆಯನ್ನು ಅಳೆಯಲು ಬಳಸುವಂತಹ ಉಪಕರಣ. ಇದರಲ್ಲಿ ವಿದ್ಯುತ್ತಿನ ಮೂಲಕ  ಕಾಯಿಸಲಾದ ಒಂದು ತಂತಿಗೆ ಶಬ್ಧದ ಅಲೆಗಳನ್ನು ಹಾಯಿಸಿದಾಗ ಅದರ ಪ್ರತಿರೋಧವು ಕಡಿಮೆಯಾಗುವುದನ್ನು ಅವಲಂಬಿಸಿ‌, ಶಬ್ಧದ ತೀಕ್ಷ್ಣತೆಯನ್ನು ಅಳೆಯಲಾಗುತ್ತದೆ.

Hum

ಹಮ್ಮ್ – ಗುಂಯ್ ಎಂಬ ಸದ್ದು – ವಿದ್ಯುತ್ ಬಲವರ್ಧಕವು ನೀಡುವ ಹೊರಹರಿವಿನಲ್ಲಿ ( ಔಟ್ ಪುಟ್) ಉಂಟಾಗುವ ಬಾಹ್ಯ, ಪರ್ಯಾಯ ವಿದ್ಯುತ್ ಪ್ರವಾಹಗಳು‌. ಇವುಗಳ ಮೂಲವು ನಮ್ಮ ಗಮನದಲ್ಲಿರುವ ಉಪಕರಣಕ್ಕೆ ಜೋಡಿಸಲಾದ ಒಂದು ಉಪಕರಣ ಅಥವಾ ಅದಕ್ಕೆ ಹತ್ತಿರದಲ್ಲಿ ಇರಿಸಿರುವ ವಿದ್ಯುನ್ಮಂಡಲಗಳಲ್ಲಿ ಇರುತ್ತದೆ.

Humidity

ಹ್ಯೂಮಿಡಿಟಿ – ತೇವಾಂಶ – ಗಾಳಿಯಲ್ಲಿರುವ ನೀರಿನ ಆವಿಯ ಅಂಶದ ಅಳತೆ ಇದು. ‘ಪರಮ ತೇವಾಂಶ’ವನ್ನು ವಾಯುವಿನ ಏಕಘಟಕ ಪರಿಮಾಣದಲ್ಲಿರುವ ನೀರಿನ ಆವಿಯ ಪ್ರಮಾಣವೆಂದು ನಿರೂಪಿಸಲಾಗುತ್ತದೆ.

Huygen’s construction

ಹೈಗನ್ಸ್ ಕನ್ಸಟ್ರಕ್ಷನ್ – ಹೈಗನ್ ರ (ಅಲೆ)ನಿರ್ಮಿತಿ – ಈಗಾಗಲೇ ಇರುವ ಅಲೆಯೊಂದರಿಂದ ಅದರ ನಂತರ ಏಳುವ ಮತ್ತೊಂದು ಅಲೆಯನ್ನು ನಿರ್ಮಿಸುವ ಒಂದು ವಿಧಾನ. ಹೈಗನ್ ರ ಸಿದ್ಧಾಂತವು ಅಲೆಗಳ ಅಡ್ಡ ಹಾಯುವಿಕೆ( ಇಂಟರ್ ಫರೆನ್ಸ್) ಮತ್ತು ಹಬ್ಬುವಿಕೆ ( ಡಿಫ್ರ್ಯಾಕ್ಷನ್)ಗಳಿಗೆ  ಉತ್ತಮವಾದ ವಿವರಣೆಯನ್ನು ನೀಡುತ್ತದೆ.

Huygen’s principle

ಹೈಗನ್ಸ್ ಪ್ರಿನ್ಸಿಪಲ್ – ಹೈಗನ್ಸ್ ರ ಸಿದ್ಧಾಂತ – ಒಂದು ಅಲೆಯ ಮೇಲಿನ ಪ್ರತಿಯೊಂದು ಬಿಂದುವನ್ನು ಸಹ ಅದರಿಂದ ಹುಟ್ಟುವ ಆನುಷಂಗಿಕ ( ಪುಟ್ಟ ಹೊಸ) ಅಲೆಗಳ ಕೇಂದ್ರವೆಂಬಂತೆ ಪರಿಗಣಿಸಬಹುದು‌. ಈ ಹೊಸ ಆನುಷಂಗಿಕ ಅಲೆಗಳ ಅಡ್ಡಹಾಯುವಿಕೆಯ ಫಲಿತವಾಗಿ ಹುಟ್ಟುವ ಅಲೆಗಳು ಮೂಲ ಅಲೆಗಳ ತರಹವೇ ಇರುತ್ತವೆ‌.

Hybrid I C

ಹೈಬ್ರಿಡ್ ಐ ಸಿ – ಮಿಶ್ರ ವಿದ್ಯುನ್ಮಂಡಲ – ಒಂದು ಆಧಾರದ ಮೇಲೆ ( ಸಿಲಿಕಾನ್ ಚಿಪ್ಪು), ಒಂದು  ಅಥವಾ ಅದಕ್ಕಿಂತ ಹೆಚ್ಚು ಭಾಗಗಳನ್ನು ಏರಿಸಿದ  ಅಥವಾ ಜೋಡಿಸಿದ ವಿದ್ಯುನ್ಮಂಡಲ.

Page 67 of 77

Kannada Sethu. All rights reserved.