ಪಟ್ಟಿಪಟ್ಟಿ ವರ್ಣಪಟಲ – ಹೀರಿಕೊಂಡ ಅಥವಾ ಹೊರಗೆ ಬಿಟ್ಟ ವಿಕಿರಣದಿಂದಾಗಿ ಪಟ್ಟಿಪಟ್ಟಿಯಾಗಿ ತೋರಿಬರುವ ವರ್ಣಪಟಲ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಪಟ್ಟಿ ವಿಸ್ತಾರ ಒಂದು ಉಪಕರಣದ ಆಕರ್ಷಣ ತಂತಿಯು ಸರಾಗವಾಗಿ ಸ್ವೀಕರಿಸಬಲ್ಲ ಅಥವಾ ನಿರ್ವಹಿಸಬಲ್ಲ ಆವರ್ತನಗತಿ(ಫ್ರೀಕ್ವೆನ್ಸಿ)ಗಳು ಅಥವಾ ತರಂಗಾಂತರ(ವೇವ್‌ಲೆಂಗ್ತ್)ಗಳ ಒಂದು ಕಟ್ಟು.
(ಶಕಿ) ಪಟ್ಟಿಗಳು – ಹರಳುರೂಪಿಯಾದ ಒಂದು ಘನವಸ್ತುವಿನಲ್ಲಿ ಎಲೆಕ್ಟ್ರಾನೊಂದಕ್ಕೆ ಇರಬಹುದಾದ ಶಕ್ತಿ ಮೌಲ್ಯಗಳು.
ವಾಯುಭಾರ ಮಾಪಕ ವಾತಾವರಣದ ಒತ್ತಡವನ್ನು ಅಳೆಯುವ ಉಪಕರಣ.
ವಿದ್ಯುತ್ ಸಂಗ್ರಾಹಕ – ಹಲವು ವಿದ್ಯುತ್‌ಕೋಶಗಳನ್ನು ಒಂದು ಸರಣಿಯಲ್ಲಿ ಜೋಡಿಸಿರುವಂತಹ ವ್ಯವಸ್ಥೆ.
ಕಿರಣಪುಂಜ ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುವ ಆದರೆ ಸದಾ ಕಾಲ ಸಮಾನಾಂತರವಾಗಿಯೇನೂ ಇರದ ಬೆಳಕಿನ ಅಥವಾ ಇನ್ನಿತರ ವಿಕಿರಣಗಳ ಕಿರಣಸಮೂಹ.
ನಿಯತ ಹೊಡೆತ ಎರಡು ಭಿನ್ನ ಆವರ್ತನಗತಿಗಳಿರುವ ಎರಡು ಅಲೆಗಳು ಒಟ್ಟಿಗೆ ಸೇರಿದಾಗ ಶಬ್ಧದ(ಅಥವಾ ಬೇರೆ) ಅಲೆಗಳ ತೀಕ್ಷ್ಣತೆಯಲ್ಲಿ ಉಂಟಾಗುವ ನಿಯತವಾದ ಏರುಪೇರು.
ಬಗ್ಗಿಸುವ ತಿರುಗುಬಲ – ವಸ್ತುವೊಂದನ್ನು ಬಗ್ಗುವಂತೆ ಮಾಡುವ ಬಲ ಅಥವಾ ಒಂದು ತೊಲೆಯ ಒಂದು ಬದಿಯ ಮೇಲೆ ವರ್ತಿಸುವ ಎಲ್ಲ ಬಲಗಳ ಮೊತ್ತ.
ಬೆಕ್ವೆರಲ್ ಕಿರಣಗಳು – ಯುರೇನಿಯಂ ಸಂಯುಕ್ತಗಳು ತಾವಾಗಿ ತಾವೇ ಸಹಜವಾಗಿ ಹೊರಸೂಸುವ ಆಲ್ಫಾ, ಬೀಟಾ ಮತ್ತು ಗಾಮಾ ಕಿರಣಗಳು.
ಬೀಟಾ ಕ್ಷಯ – ಪರಮಾಣು ಬೀಜಕೇಂದ್ರವು ಎಲೆಕ್ಟ್ರಾನಿನಂತಹ ಕಣವೊಂದನ್ನು ಹೊರಚೆಲ್ಲುತ್ತಾ ಕ್ಷಯಗೊಳ್ಳುವ ಒಂದು ರೀತಿಯ ವಿಕಿರಣ ಪ್ರಕ್ರಿಯೆ.
								
 Like us!
 Follow us!