ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Hyperon

ಹೈಪರಾನ್ – ಹೈಪರಾನು – ತುಂಬ ಕಡಿಮೆ ಹೊತ್ತು ಅಸ್ತಿತ್ವದಲ್ಲಿರುವ ಒಂದು ಮೂಲಭೂತ ಕಣ. ಇದು ಬೇರ್ಯಾನುಗಳ ಪಟ್ಟಿಗೆ ಸೇರುತ್ತದೆ ಮತ್ತು ಸೊನ್ನೆಯಲ್ಲದ ವಿಲಕ್ಷಣತೆ (strangeness)ಯನ್ನು ಹೊಂದಿರುತ್ತದೆ.

Hypersonic

 ಹೈಪರ್ಸಾನಿಕ್ – ಶಬ್ದಾತೀತ – ಶಬ್ದಾತೀತ ಪ್ರವಾಹಗಳಿಗೆ ಸಂಬಂಧ ಪಟ್ಟದ್ದು. ಮಾಚ್ ( ದ್ರವಗಳ ವೇಗಕ್ಕೆ ಸಂಬಂಧಪಟ್ಟ ಒಂದು ಸಂಖ್ಯೆ) 5 ಅಥವಾ ಅದಕ್ಕಿಂತ ಹೆಚ್ಚಿನ ವೇಗಗಳಿಗೆ ಸಂಬಂಧಿಸಿರುತ್ತೆ.

Hypsometer

ಹಿಪ್ಸೋಮೀಟರ್ – ಕುದಿಬಿಂದು ಮಾಪಕ – ಒಂದು ದ್ರವದ ಕುದಿಬಿಂದುವನ್ನು ಅಳೆಯಲು ಬಳಸುವ ಉಪಕರಣ. ಆವಿಯ ಉಷ್ಣತೆಯಲ್ಲಿ ಉಷ್ಣಮಾಪಕಗಳ ಮೇಲೆ ಗುರುತುಗಳನ್ನು ಮಾಡಲು ಸಹ ಇದನ್ನು ಬಳಸುತ್ತಾರೆ.

Hysteresis

ಹಿಸ್ಟಿರಿಸಿಸ್ – ಉಳಿಕೆ ಪರಿಣಾಮ ( ವಿಲಂಬನ) – ಯಾವುದಾದರೊಂದು ಪರಿಣಾಮವುಂಟಾದಾಗ ಅದು ಮುಗಿದ ನಂತರವೂ ಉಳಿಯುವ ‘ಉಳಿಕೆ ವಿಷಯ’. ಉದಾಹರಣೆಗೆ, ಪ್ರಬಲ ಕಾಂತ ವಸ್ತುಗಳನ್ನು ಕಾಂತಗೊಳಿಸಿಯಾದ ಮೇಲೆ, ಆ ಕಾಂತತ್ವವನ್ನು ತೆಗೆದ ಮೇಲೂ ಅವುಗಳಲ್ಲಿ ಸ್ವಲ್ಪ ಕಾಂತೀಯತೆ ಉಳಿದಿರುತ್ತದೆ. ಇದನ್ನು ಉಳಿಕೆ ಪರಿಣಾಮ ಎನ್ನುತ್ತಾರೆ. 

Hysteresis loop

ಹಿಸ್ಟಿರಿಸಿಸ್ ಲೂಪ್ – ಉಳಿಕೆ ಪರಿಣಾಮ ( ವಿಲಂಬನ) ಸುತ್ತು – ಪ್ರಾರಂಭದಲ್ಲಿ ನಿಷ್ಕಾಂತಗೊಳಿಸಿದ ಪ್ರಬಲ ಕಾಂತವಸ್ತುವೊಂದನ್ನು ಕಾಂತಕ್ಷೇತ್ರ ವ್ಯತ್ಯಾಸಗಳ ಆವರ್ತನಗಳಿಗೆ ಒಳಪಡಿಸಿದಾಗ ಉಂಟಾಗುವ ಒಂದು‌ ಕಾಂತಮಂಡಲ.

Hysteresis loss

ಹಿಸ್ಟಿರಿಸಿಸ್ ಲಾಸ್ – ವಿಲಂಬನ ನಷ್ಟ – ವಿಲಂಬನ ಪರೊಣಾಮದಿಂದಾಗಿ ಉಂಟಾಗುವ ಶಕ್ತಿನಷ್ಟ.

Ice

ಐಸ್ – ಮಂಜುಗಡ್ಡೆ – ನೀರಿನ ಘನ ರೂಪ.

Ice point

ಐಸ್ ಪಾಯಿಂಟ್ – ಮಂಜುಗಟ್ಟುವ ಬಿಂದು – ಒಂದು ಪ್ರಮಾಣೀಕೃತ ಹವಾಮಾನೀಯ ಒತ್ತಡದಲ್ಲಿ ಮಂಜುಗಡ್ಡೆಯು ಕರಗುವ ಬಿಂದು. ಇದಕ್ಕೆ ೦(ಸೊನ್ನೆ) ಡಿಗ್ರಿ ಸೆಂಟಿಗ್ರೇಡ್ ಮೌಲ್ಯವನ್ನು ಕೊಟ್ಟಿದ್ದಾರೆ.

Iconoscope

ಐಕೋನೋಸ್ಕೋಪ್ – ಸಮಬಿಂಬ ದರ್ಶಕ – ಇದು ಒಂದು ರೀತಿಯ ದೂರದರ್ಶನ ಯಂತ್ರದ ಛಾಯಾಗ್ರಾಹಕ ಕೊಳವೆ‌. ಇದರಲ್ಲಿ ತುಂಬ ಹೆಚ್ಚು ವೇಗವನ್ನು ಹೊಂದಿರುವ ಎಲೆಕ್ಟ್ರಾನು ಕಿರಣಪುಂಜವು ಬೆಳಕಿಗೆ ಸ್ಪಂದಿಸುವ ಚಿತ್ರಸಮೂಹವನ್ನು ಹಾಯ್ದು ಬರುತ್ತದೆ‌‌. ಈ ಚಿತ್ರಸಮೂಹಕ್ಕೆ ವಿದ್ಯುತ್ ಸಂಗ್ರಹ ಮಾಡುವ ಸಾಮರ್ಥ್ಯ ಇರುತ್ತದೆ.

Ideal crystal

ಐಡಿಯಲ್ ಕ್ರಿಸ್ಟಲ್ – ಆದರ್ಶ ಸ್ಫಟಿಕ ಅಥವಾ ಆದರ್ಶ ಹರಳು – ಪರಿಪೂರ್ಣ ಹಾಗೂ ಅನಂತ ಎಂದು‌ ಪರಿಗಣಿಸಲಾದ ಹರಳು ರಚನೆ.

Page 70 of 80

Kannada Sethu. All rights reserved.