ಕ್ಯಾಪ್ ಲೈನ್ – ಕ್ಯಾಪ್ ಲೈನ್ – ಕಾಂತೀಯ ಬಲರೇಖೆಗಳ ಒಂದು ಮೂಲಮಾನ. ಇದು 6000 ಮಾಕ್ಸ್ವೆಲ್ ಗಳಿಗೆ ಸಮ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಕ್ಯಾಥರೋಮೀಟರ್ -ಉಷ್ಣವಾಹಕತಾ ಮಾಪಕ – ಎರಡು ಅನಿಲಗಳ ಉಷ್ಣವಾಹಕತೆಗಳನ್ನು ಆ ಅನಿಲಗಳು ಸುತ್ತುವರಿದಿರುವಂತಹ ಕಾದ ಸುರುಳಿಗಳು ಕಳೆದುಕೊಳ್ಳುವ ಉಷ್ಣತೆಗಳನ್ನು ತುಲನೆ ಮಾಡುವ ಮೂಲಕ ಅಳೆಯುವಂತಹ ಒಂದು ಉಪಕರಣ.
ಕೇಸರ್ – ಅಲೆಯ ಸಂಖ್ಯೆಯ ಮೂಲಮಾನವಾಗಿ ಸ್ವೀಕೃತವಾದ ಒಂದು ಹೆಸರು. ಒಂದು ಸೆಂಟಿಮೀಟರ್ ನಲ್ಲಿ ಇರುವಂತಹ ಅಲೆಗಳ ಸಂಖ್ಯೆ ಇದು.
ಕೀಪರ್ – ಕಾಂತರಕ್ಷಕ – ಶಾಶ್ವತ ಅಯಸ್ಕಾಂತವೊಂದನ್ನು ಬಳಸದೆ ಇಟ್ಟಿದ್ದಾಗ ಅದರ ಧ್ರುವಗಳನ್ನು ಬೆಸೆಯಲು ಬಳಸುವಂತಹ ಮೃದುಕಬ್ಬಿಣದ ಒಂದು ತುಂಡು. ಇದು ಕಾಂತಶಕ್ತಿಯ ಸೋರುವಿಕೆಯನ್ನು ತಡೆಯುವುದರ ಮೂಲಕ ಅಯಸ್ಕಾಂತೀಕರಣವನ್ನು ರಕ್ಷಿಸಿಟ್ಟಿರುತ್ತದೆ.
ಕೆಲ್ವಿನ್ ಬ್ಯಾಲೆನ್ಸ್ – ಕೆಲ್ವಿನ್ ತ್ರಾಸ – ವಿದ್ಯುತ್ ಚಲನಾ ಅಮ್ಮೀಟರ್, ವೋಲ್ಟ್ ಮೀಟರ್ ಅಥವಾ ವ್ಯಾಟ್ ಮೀಟರ್. ಇದರಲ್ಲಿ ವಿದ್ಯುತ್ ಕಾಂತೀಯ ಬಲಗಳು ಚಲಿಸುತ್ತಿರುವ ಭಾರದಿಂದಾಗಿ ಗುರುತ್ವಕ್ಕೆ ಸಂಬಂಧಿಸಿದಂತೆ ಸಮತೋಲನಗೊಳಿಸಲ್ಪಡುತ್ತವೆ.
ಕೆಲ್ವಿನ್ ಎಫೆಕ್ಟ್ – ಕೆಲ್ವಿನ್ ಪರಿಣಾಮ – ಒಂದು ವಾಹಕದ ತಂತಿಯುದ್ದಕ್ಕೂ ಇರುವಂತಹ ತಾಪಮಾನದ ಏರಿಳಿತ ಶ್ರೇಣಿಯು ಆ ತಂತಿಯುದ್ದಕ್ಕೂ ವಿದ್ಯುತ್ ಸಾಮರ್ಥ್ಯದ ಏರಿಳಿತ ಶ್ರೇಣಿಯನ್ನುಂಟುಮಾಡುತ್ತದೆ.
ಕೆಲ್ವಿನ್ ಸ್ಟೇಟ್ ಮೆಂಟ್( ಸೆಕೆಂಡ್ ಲಾ ಆಫ್ ಥರ್ಮೋಡೈನಮಿಕ್ಸ್) –
ಕೆಲ್ವಿನ್ ರ ಹೇಳಿಕೆ – ( ಉಷ್ಣಚಲನಾ ಶಾಸ್ತ್ರದ ಎರಡನೆಯ ನಿಯಮ) – ಶುದ್ಧಾಂಗ ಪರಿಪೂರ್ಣವಾದ ಒಂದು ತಾಪಯಂತ್ರವನ್ನು ನಿರ್ಮಿಸಲು ಸಾಧ್ಯವಿಲ್ಲ( ಉಷ್ಣತೆಯ ನಷ್ಟವು ಇದಕ್ಕೆ ಕಾರಣ).
ಕೆಲ್ವಿನ್, ಸಿಂಬಲ್ K – ಕೆಲ್ವಿನ್, ಸಂಕೇತ K – ಉಷ್ಣಚಲನೆಯ ತಾಪಮಾನದ ಎಸ್.ಐ. ಮೂಲಮಾನ ಇದು. ನೀರಿನ ತ್ರಿಬಿಂದು*ವಿನ 273.16 ರಲ್ಲಿ ಒಂದು ಭಾಗಕ್ಕೆ ಸಮ ಇದು. ಲಾರ್ಡ್ ಕೆಲ್ವಿನ್ ಎಂಬ ಬ್ರಿಟಿಷ್ ಗಣಿತಜ್ಞರ ನೆನಪಿನಲ್ಲಿ ಇಟ್ಟ ಹೆಸರು.
*ನೀರಿನ ತ್ರಿಬಿಂದು = ನೀರಿನ ಘನ, ದ್ರವ ಹಾಗೂ ಅನಿಲ ಸ್ಥಿತಿಗಳು ಸಮತೋಲನದಲ್ಲಿರುವಂತಹ ಒಂದು ಬಿಂದು.
ಕೆನೋಟ್ರಾನ್ – ಕೆನೋಟ್ರಾನು – ಹೆಚ್ಚಿನ ನಿರ್ವಾತವುಳ್ಳ ಒಂದು ದ್ವಿದ್ವಾರ. ಇದನ್ನು ಪ್ರಬಲ ಪರಿವರ್ತಕವಾಗಿ ಕೆಲಸ ಮಾಡುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುತ್ತದೆ.
ಕೆಪ್ಲೇರಿಯನ್ ಟೆಲಿಸ್ಕೋಪ್ – ಕೆಪ್ಲರ್ ದೂರದರ್ಶಕ – ಅತ್ಯಂತ ಸರ್ವೇಸಾಮಾನ್ಯವಾದ ವಕ್ರೀಭವನ ದೂರದರ್ಶಕ ಇದು( ಎರಡು ಮಸೂರಗಳನ್ನು ಹೊಂದಿರುತ್ತದೆ).
Like us!
Follow us!