ಕರ್ನೆಲ್ – ಪರಮಾಣು ತಿರುಳು – ತನ್ನ ಎಲ್ಲಾ ಅಂಚಿನೆಲಕ್ಟ್ರಾನುಗಳನ್ನು ಕಳೆದುಕೊಂಡ ಪರಮಾಣುಗಳನ್ನು ಪರಮಾಣು ತಿರುಳು ಎನ್ನುತ್ತಾರೆ.
ಕನ್ನಡ ಕನ್ನಡಿ
ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.
ಕರ್ ಎಫೆಕ್ಟ್ – ಕರ್ ಪರಿಣಾಮ – ಒಂದು ಪ್ರಬಲವಾದ ವಿದ್ಯುತ್ ಕ್ಷೇತ್ರದಲ್ಲಿಟ್ಟಾಗ ಕೆಲವು ಸಮವರ್ತಿ ವಸ್ತುಗಳು ಇಮ್ಮಡಿ ವಕ್ರೀಭವನದ ಪರಿಣಾಮವನ್ನು ಪ್ರದರ್ಶಿಸುತ್ತವೆ. ಉದಾ:- ಬೆನ್ ಝೀನ್. ಈ ಪರಿಣಾಮವು ವಿದ್ಯುತ್ ಕ್ಷೇತ್ರದ ದ್ವಿಘಾತಕ್ಕೆ ಸಮಾನುಪಾತದಲ್ಲಿರುತ್ತದೆ. ಸ್ಕಾಟ್ಲೆಂಡ್ ನ ಜಾನ್ ಕರ್ ಎಂಬ ವಿಜ್ಞಾನಿಯು ಹತ್ತೊಂಬತ್ತನೆಯ ಶತಮಾನದಲ್ಲಿ ಕಂಡುಹಿಡಿದ ಪರಿಣಾಮ ಇದು.
ಕರ್ ಮ್ಯಾಗ್ನೆಟೋ ಆಪ್ಟಿಕ್ ಎಫೆಕ್ಟ್ – ಕರ್ ಕಾಂತ ದೃಶ್ಯಬೆಳಕು ಪರಿಣಾಮ – ವಿದ್ಯುತ್ ಕಾಂತವೊಂದರ ಉಜ್ಜಿ ಹೊಳಪುಗೊಳಿಸಿದ ಧ್ರುವವೊಂದರ ಮೂಲಕ ಪ್ರತಿಫಲಿತವಾದಾಗ, ತಾನು ಬೀಳುತ್ತಿರುವ ಮೇಲ್ಮೈಯಲ್ಲಿ ಅಥವಾ ಅದಕ್ಕೆ ಲಂಬವಾಗಿ ಧ್ರುವೀಕೃತವಾಗುವಂತಹ ಬೆಳಕು ಅಂಡಾಕಾರದಲ್ಲಿ ಧ್ರುವೀಕೃತಗೊಳ್ಳುತ್ತದೆ.
ಕಿಲೋಟಾನ್ ವೆಪನ್ – ಕಿಲೋಟಾನ್ ಆಯುಧ – ಸಾವಿರ ಟನ್ ‘ಟಿ ಎನ್ ಟಿ'( ಟ್ರೈ ನೈಟ್ರೋ ಟಾಲಿನ್) ಸ್ಫೋಟ ಸಾಮರ್ಥ್ಯವುಳ್ಳ ಒಂದು ಅಣುಶಕ್ತಿ ಆಯುಧ.
ಕಿಲೋವ್ಯಾಟ್ ಅವರ್ ( ಸಿಂಬಲ್ kWh) – ಕಿಲೋವ್ಯಾಟ್ ಅವರ್ ( ಸಂಕಥೆತ kWh) – ವಿದ್ಯುಚ್ಛಕ್ತಿ ಯ ವ್ಯಾಪಾರೀ ಮೂಲಮಾನ. ಇದು 1 ಗಂಟೆಗೆ 1000 ವ್ಯಾಟ್ ಗಳನ್ನು ಬಳಸಿಕೊಳ್ಳುವುದಕ್ಕೆ ಸಮ.
ಕೈನ್ ಮ್ಯಾಟಿಕ್ ವಿಸ್ಕಾಸಿಟಿ ( ಸಿಂಬಲ್ V ) – ಚಲನಾತ್ಮಕ ಸ್ನಿಗ್ಧತೆ ( ಚಲನಾತ್ಮಕ ಜಿಡ್ಡುಗುಣ ( ಸಂಕೇತ – V ) – ಒಂದು ದ್ರವದ ಸಾಂದ್ರತೆಗೂ ಅದರ ಜಿಡ್ಡುಗುಣಕ್ಕೂ ಇರುವ ಅನುಪಾತ.
ಕೈನ್ ಮ್ಯಾಟಿಕ್ಸ್ – ಚಲನ ಶಾಸ್ತ್ರ (ಗತಿ ವಿಜ್ಞಾನ) – ಯಂತ್ರ ಚಲನಶಾಸ್ತ್ರದ ಒಂದು ಶಾಖೆ. ಇದು, ಚಲನೆಗೆ ಕಾರಣವಾಗುವ ಬಲಗಳನ್ನು ಪರಿಗಣಿಸುವ ಗೋಜಿಗೆ ಹೋಗದೆ ವಸ್ತುಗಳ ಚಲನೆಯ ಬಗ್ಗೆ ಅಧ್ಯಯನ ಮಾಡುತ್ತದೆ.
ಕೈನ್ ಸ್ಕೋಪ್ – ಚಲಚಿತ್ರ ದರ್ಶಕ – ದೂರದರ್ಶನದ ಚಿತ್ರಕೊಳವೆ.
ಕೈನೆಟಿಕ್ ಎಫೆಕ್ಟ್ – ಕೈನೆಟಿಕ್ ಎಫೆಕ್ಟ್ – ಚಲನಾತ್ಮಕ ಪರಿಣಾಮ – ಉಷ್ಣಚಲನಾನಿಯಮಗಳಿಗೊಂತ ಹೆಚ್ಚಾಗಿ ರಾಸಾಯನಿಕ ಕ್ರಿಯೆಯ ವೇಗವನ್ನು ( ಗತಿಯನ್ನು ) ಅವಲಂಬಿಸುವ ರಾಸಾಯನಿಕ ಪರಿಣಾಮ.
Like us!
Follow us!