ಕನ್ನಡವನ್ನು ಪ್ರೀತಿಸುವ ಉಳಿಸಿ ಬೆಳೆಸುವ ಆಸೆ ಇರುವ ಯಾರೇ ಆದರೂ ಅದನ್ನು ಸಬಲಗೊಳಿಸುವ ಬಗ್ಗೆ ಯೋಚಿಸುತ್ತಾರೆ. ಬಹುಶಃ ನಮ್ಮ ಭಾಷೆಯನ್ನು ಸಬಲಗೊಳಿಸುವ ಒಂದು ಮಾರ್ಗ ಅಂದರೆ ಬೇರೆ ಬೇರೆ ಜ್ಞಾನಶಿಸ್ತುಗಳಲ್ಲಿ ಆಗುತ್ತಿರುವ ನೂತನ ಸಂಶೋಧನೆಗಳನ್ನು ಕನ್ನಡದಲ್ಲಿ ಬರೆಯಲು ಸಾಧ್ಯವಾಗುವಂತೆ ಅದನ್ನು ಸಜ್ಜುಗೊಳಿಸುವುದು. ಉದಾಹರಣೆಗೆ, ಗಣಕ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಮಾನವ ನಿರ್ಮಿತ ಬುದ್ಧಿಮತ್ತೆ, ಅರ್ಥ ಶಾಸ್ತ್ರ, ತತ್ವಶಾಸ್ತ್ರ ನಿರ್ವಹಣಾ ಶಾಸ್ತ್ರ ಮುಂತಾದ ಎಲ್ಲ ಶಾಸ್ತ್ರಗಳಲ್ಲೂ ಪ್ರತ್ಯೇಕ ಕನ್ನಡ ಪದಕೋಶಗಳನ್ನು, ಆಕ್ಸ್ ಫರ್ಡ್ ಪದಕೋಶಗಳ ಮಾದರಿಯಲ್ಲಿ ತಯಾರು ಮಾಡಿದರೆ ಕನ್ನಡವು ಶ್ರೀಮಂತಗೊಳ್ಳುತ್ತದೆ. ಯಾರು ಯಾವುದೇ ವಿಷಯದಲ್ಲಿ ಗಂಭೀರ ಲೇಖನವನ್ನು ಬರೆಯಲು ಅವರಿಗೆ ಒಂದು ಉತ್ತಮ ಕನ್ನಡ ಪದಕೋಶ ಸಿಗುವ ಸನ್ನಿವೇಶ ಉಂಟಾಗಬೇಕು.
ಈ ವಿಷಯದಲ್ಲಿ ವಿಶ್ವವಿದ್ಯಾಲಯಗಳು, ಸಂಶೋಧಕರು, ಅಧ್ಯಾಪಕರು, ಭಾಷಾ ವಿಜ್ಞಾನಿಗಳು ಹೆಚ್ಚು ಗಮನ ವಹಿಸುವ ಅವಶ್ಯಕತೆ ಇದೆ.
Like us!
Follow us!