ಕನ್ನಡ ಭಾಷಾಬಳಕೆಯ ಸಂದರ್ಭದಲ್ಲಿ ಅನೇಕ ಸಲ ಬಳಕೆಯಾಗುವ ಗಾದೆ ಮಾತಿದು.‌ ಕಪ್ಪೆಗಳು ಸದಾ ಕುಪ್ಪಳಿಸುವ, ನೆಗೆಯುತ್ತಿರುವ ಚಂಚಲ ಜೀವಿಗಳಾದದ್ದರಿಂದ ಅವುಗಳನ್ನು ತೂಗಲು ಅಥವಾ ಇನ್ನು ಯಾವುದೇ ಉದ್ದೇಶದಿಂದಲಾಗಲೀ ಒಂದು ತಕ್ಕಡಿ ತಟ್ಟೆಯಲ್ಲಿ ಕೂರಿಸಲು ಸಾಧ್ಯ ಆಗುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಒಂದು ಕಪ್ಪೆಯನ್ನಿಟ್ಟರೆ ಇನ್ನೊಂದು ಕಪ್ಪೆ ಹೊರಗೆ ಎಗರುತ್ತದೆ. ಇದೇ ರೀತಿಯಲ್ಲಿ ದೊಡ್ಡ ಕೂಡುಕುಟುಂಬಗಳು ಪ್ರವಾಸಕ್ಕೆ ಹೊರಟಾಗ, ಯಾವುದಾದರೂ ಕಾರ್ಯಕ್ರಮವನ್ನು ಆಯೋಜಿಸಲು ಜನ ಒಟ್ಟು ಸೇರುವಾಗ, ಭಿನ್ನ ಭಿನ್ನ ಹಿನ್ನೆಲೆಯ ಜನರು ಸೇರಿ ಒಟ್ಟಾಗಿ ಏನಾದರೂ ಮಾಡಲು ಪ್ರಯತ್ನ ಪಡುವಾಗ ಆ ಸಮಿತಿಯ ಅಥವಾ ತಂಡದ ನಾಯಕರಿಗೆ ಜನರನ್ನು ಒಟ್ಟು ಸೇರಿಸುವಾಗ ಬರುವ ಕಷ್ಟಗಳ ಸನ್ನಿವೇಶಗಳಲ್ಲಿ  ಕನ್ನಡಿಗರಿಗೆ ಈ ಗಾದೆಮಾತು ನೆನಪಾಗುತ್ತದೆ. 

Kannada proverb – Kappena takkadeeli hakida haage – ( putting frogs on weighing plate). Frogs are known to be very active amphibians. Therefore if a  bunch of frogs are kept on a balance plate or some place they will soon start jumping. If one frog sits, another jumps and another, another…. So this goes on and on and on….. Even in human interactions it is very difficult to make proactive teams. If one person stays another will come out…still another one may not turn up all all. In such situations, the abovesaid proverb is remembered and uttered by kannadigas.