ನಾಕ್ ಆನ್ ಕೊಲಿಷನ್ – ನೂಕಿ ತಳ್ಳುವ ಢಿಕ್ಕಿ‌- ತುಂಬ ಹೆಚ್ಚಿನ ಶಕ್ತಿಯುಳ್ಳ ಕಣವು ಢಿಕ್ಕಿ ಹೊಡೆದದ್ದರಿಂದಾಗಿ‌ ಒಂದು ಮೂಲಭೂತ ಕಣ‌, ಅಥವಾ ಪರಮಾಣುವಿನ‌ ಬೀಜಕೇಂದ್ರವು ಚಲಿಸಲು ಪ್ರಾರಂಭಿಸಿದರೆ ಅಂತಹ ಢಿಕ್ಕಿಯನ್ನು ನೂಕಿ ತಳ್ಳುವ ಢಿಕ್ಕಿ ಎಂದು ಕರೆಯುತ್ತಾರೆ. ಎಲೆಕ್ಟ್ರಾನೊಂದು ತನ್ನ ಪಥದಿಂದ ತಳ್ಳಲ್ಪಡುವುದೂ ಇದೇ ಢಿಕ್ಕಿಯಿಂದ.