ಕನ್ನಡ ಭಾಷೆಯ ಒಂದು ಪ್ರಸಿದ್ಧ ಗಾದೆಮಾತಿದು. ಕೋತಿ ಮನುಷ್ಯನ ಅತಿ ಹತ್ತಿರದ ಜೀವ ವಿಕಾಸದ ಕೊಂಡಿ ಎಂದು ನಾವು ಬಲ್ಲೆವು, ಅಲ್ಲವೇ( ವಾನರನಿಂದ ನರ, ಮಂಗನಿಂದ ಮಾನವ ಎಂಬು ನಾಣ್ಣುಡಿಗಳನ್ನು ಎಲ್ಲ ಕನ್ನಡಿಗರೂ ಕೇಳಿಯೇ ಇರುತ್ತಾರೆ). ಕೋತಿಯು ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ಬುದ್ಧಿವಂತ ಪ್ರಾಣಿಯಾದರೂ, ಅದು ಬಹು ಚಂಚಲ ಸ್ವಭಾವದ, ತಂಟೆಕೋರ ಪ್ರಾಣಿಯೂ ಹೌದು. ಒಂದು ನಿಮಿಷ ಸುಮ್ಮನಿರದೆ ತಾನಿರುವ ಮರದ ಎಲೆ, ಹಣ್ಣು, ಕಾಯಿ ತರಿಯುವುದು, ಕಾರಣ ಇರಲಿ, ಬಿಡಲಿ ಅತ್ತಿಂದಿತ್ತ, ಇತ್ತಿಂದತ್ತ ಹಾರುವುದು, ಬೇರೆ ಪ್ರಾಣಿ‌ಪಕ್ಷಿಗಳನ್ನು ಗುರ್ರಂದು ಕಿಚಾಯಿಸುವುದು – ಈ ಚೇಷ್ಟೆಗಳನ್ನೆಲ್ಲ‌ ಮಾಡುತ್ತಿರುತ್ತದೆ. ಅದಕ್ಕೇ ನೋಡಿ, ‘ಮಂಗಚೇಷ್ಟೆ’ ಎಂಬ ಪದವೇ ಇದೆ, ತೀರಾ ತಂಟೆ ಮಾಡುವ ಅವರ ನ ತೆಗಳಲು ಇದನ್ನು ಬಳಸುತ್ತಾರೆ. ಇದರ ಅತಿಚೇಷ್ಟೆಯನ್ನು ನೋಡಿ ಸಹವಾಸ ದೋಷದಿಂದ ಬೇರೆ ಪ್ರಾಣಿಗಳೂ ಇದರ ಕುಬುದ್ಧಿಯನ್ನು ಕಲಿಯಬಹುದು. ಇದಕ್ಕಾಗಿಯೇ ಕೋತಿಯ ಮತ್ತು ಕೋತಿಯಂತಹ ಚಂಚಲ ಸ್ವಭಾವದ ಮನುಷ್ಯರ ರೀತಿಯನ್ನು ವಿವರಿಸಲು ಈ ಗಾದೆಮಾತನ್ನು ಬಳಸುತ್ತಾರೆ. 

Kannada proverb – Kothi thanu kedodalde vanavannella kedusthu ( Monkey not only spoiled itself but it spoiled the whole forest). 

Monkey! Arguably it might one of the most intelligent animals, and of course it is the nearest evolutionary link to us, i.e. homo sapiens, but, it is a very distracted and a naughty animal. It unnecessarily disturbs other animals and birds,  keeps jumping around, breaks branches, removes flowers, buds etc. Seeing the commotion it makes other animals also can learn its disturbing and irritating manners. Therefore, if children or adults seem too cranky, naughty and mischievous, this proverb is used. Monkeys and monkey like people create ruckus around them and earn the wrath of their fellow beings