ಈ ಗಾದೆಮಾತು ನಮಗೊಂದು ಎಚ್ಚರಿಕೆ ನೀಡುತ್ತದೆ. ಅದೇನೆಂದರೆ, ನಾವು ಜೀವನದಲ್ಲಿ ಸೋಮಾರಿಗಳಾಗಬಾರದು ಎಂಬ ಎಚ್ಚರಿಕೆ ಅದು. ನಮ್ಮ ಜೀವನೋಪಾಯಕ್ಕಾಗಿ ನಮ್ಮಲ್ಲಿರುವ ಕುಡಿಕೆಯಲ್ಲಿನ ಅಂದರೆ ಸಂಗ್ರಹಿತ ಹಣವನ್ನೇ ಬಳಸುತ್ತಿರಬಾರದು, ಹಾಗೆ ಬಳಸಿದರೆ ಅದು ಬಹಳ ಬೇಗ ಖರ್ಚಾಗಿ ಹೋಗಿ ನಾವು ಬೀದಿಗೆ ಬೀಳುವ ಪರಿಸ್ಥಿತಿ ಬಂದುಬಿಡುತ್ತದೆ. ಕುಳಿತು ತಿನ್ನುವವರು ಅಂದರೆ ದುಡಿಯದೆ ಸೋಮಾರಿಗಳಾಗಿ ಜೀವಿಸುವವರು ಎಂದು ಅರ್ಥ. ಇಂತಹವರ ಹತ್ತಿರ ಎಷ್ಟೇ ಹಣಸಂಗ್ರಹ ಇದ್ದರೂ, ಸಂಪಾದಿಸದೆ ಬರೇ ಖರ್ಚು ಮಾಡುವುದರಿಂದ ಅದು ನೀರಿನಂತೆ ಖರ್ಚಾಗಿ ಹೋಗಿ, ಅವರು ಭಿಕ್ಷೆ ಬೇಡುವ ಸ್ಥಿತಿಗೆ ಬಲುಬೇಗ ಬಂದುಬಿಡುತ್ತಾರೆ. ಇದೂ ಅಲ್ಲದೆ ಹಣದುಬ್ಬರ ಸಹ ನಮ್ಮಲ್ಲಿರುವ ಹಣದ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಸಂಗ್ರಹಿತ ಹಣವನ್ನು ಖರ್ಚು ಮಾಡುವ ವಿಷಯದಲ್ಲಿ ನಾವು ಬಹಳ ಜಾಗರೂಕರಾಗಿರಬೇಕು.
Kannada proverb – Kulithu thindre kudike honnu saaldu ( If you lazily sit and devour, your saved money in the pot will not be enough).
This proverb of Kannada is a good piece of advice on our spending habits. If we do not keep refilling our pot of money by earning, however large it is we will spend away all the money in it eventually. Even if we have a lot of saved money, inflation will reduce its value. A person who is lazy and does not do any kind of work to earn his or her money, will become penniless and pushed to streets to beg sooner or later. This is why our ancestors warned us about spending our life doing nothing, earning nothing and depend only on saved money or ancestoral property, which was supposed to be a saving grace on a rainy day or in emergencies. We do well to understand this financial advice.