ಯಾರಲ್ಲಿ ನಮಗೆ ಸಲಿಗೆ ಇದೆಯೋ, ಯಾರು ನಮಗಾಗಿ ಅಯ್ಯೋ ಅನ್ನುತ್ತಾರೋ ಅವರ ಬಳಿ ನಮ್ಮ‌ ಗೋಳಾಟ, ದೂರಾಟ ಹೆಚ್ಚು. ಉದಾಹರಣೆಗೆ, ತಾವು ಒಬ್ಬರೇ ಇದ್ದಾಗ ಅಥವಾ ಅಪರಿಚಿತರೊಂದಿಗೆ ಇದ್ದಾಗ ತಮ್ಮ ಕೆಲಸ ತಾವೇ ಮಾಡಿಕೊಳ್ಳುವವರ ವರ್ತನೆಯು ತಮ್ಮ ತಾಯಿಯನ್ನು ಕಂಡರೆ ಇದ್ದಕ್ಕಿದ್ದಂತೆ ಬದಲಾಗಿಬಿಡಬಹುದು.‌ “ಅಮ್ಮ, ನಂಗೆ ತಲೆ ನೋಯ್ತಿದೆ, ಕಾಫಿ ಮಾಡಿಕೊಡು”, ” ಅಮ್ಮ, ನಂಗೆ ಮೈಕೈ ನೋವು, ನಾ ಸ್ವಲ್ಪ ಮಲಗ್ತೀನಿ, ರಾತ್ರಿಗೆ ನೀನೇ ಅಡಿಗೆ ಮಾಡ್ಬಿಡೇ” ಎನ್ನುತ್ತ ಚಿಕ್ಕ ಮಕ್ಕಳ ಹಾಗೆ ಅಮ್ಮನನ್ನು ಅವಲಂಬಿಸಬಹುದು ಅವರು.‌ ಅಮ್ಮ ತಮ್ಮ ಬಗ್ಗೆ ಸಹಾನುಭೂತಿ ತೋರಿಸಿಯೇ ತೋರಿಸುತ್ತಾಳೆ ಎಂಬ ಖಾಚಿತ್ಯ ಇರುವುದರಿಂದ,  ಇರುವುದಕ್ಕಿಂತ ಹೆಚ್ಚು ಅಸಹಾಯಕತೆಯನ್ನು ಮನುಷ್ಯರು ವ್ಯಕ್ತಪಡಿಸುವುದುಂಟು.‌ ಅದಕ್ಕಾಗಿಯೇ ಹಿರಿಯರು ಈ ಗಾದೆಮಾತನ್ನು ಮಾಡಿರಬೇಕು – ತಾಯಿ ಕಂಡ್ರೆ ತಲೆಬೇನೆ.‌ 

Kannada proverb – Thaayi kandre thalebene (He gets head ache when he meets his mother).

We human beings sometimes behave in a very curious way. When we are sure that some loved one has sympathy and empathy for us, we act more helpless than we actually are! With our mothers this ‘helpless and dependent’ behavior goes to the peak. We act like small kids who need to be pampered. May be, it is the child in us which acts out when we see our mothers or mother figures. Seeing this behaviour of humans, it looks like, our wise ancestors thought of this proverb.