ಹಳ್ಳಿಗರ ಬಾಯಲ್ಲಿ ಆಗಾಗ ಕೇಳಿ ಬರುವ ಗಾದೆಮಾತಿದು. ವಯಸ್ಸಾದವರು, ತಮಗೆ ಸಾವು ಸನ್ನಿಹಿತವಾಗಿದೆ ಎಂಬ ಭಾವನೆ ಬಂದಾಗ ಬಳಸುವ ಮಾತು. ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಹಸಿರು ಕಾಡುಗಳು ವಿಪುಲವಾಗಿದ್ದಾಗ ಯಾರಾದರೂ ಸತ್ತರೆ ಅವರ ದೇಹವನ್ನು ಊರಿನ ಪಕ್ಕದಲ್ಲಿದ್ದ ಕಾಡಿನಲ್ಲಿ ಹೂಳುತ್ತಿದ್ದರು ಅಥವಾ ಸುಡುತ್ತಿದ್ದರು. ಹೀಗಾಗಿ ಈ ಗಾದೆಯು ಬಳಕೆಗೆ ಬಂದಿರಬೇಕು. ಈಗ ಕಾಡುಗಳು ಕಡಿಮೆ ಆಗುತ್ತಿವೆ, ಹೆಣಗಳನ್ನು ಸುಡಲು ಸ್ಮಶಾನಗಳ ಪರಿಕಲ್ಪನೆ ಬಂದಿದೆ. ಆದರೂ ರೂಢಿಯಿಂದ ಈ ಮಾತು ಒಂದು ದಿನಬಳಕೆ ಮಾತಾಗಿ ಹಾಗೆಯೇ ಉಳಿದು ಬಂದಿದೆ, ಹಾಗೂ ತನ್ನ ಒಳಾರ್ಥವನ್ನು ಹೇಳುವಲ್ಲಿ ಸಫಲವಾಗುತ್ತದೆ. ಗಾದೆಗಳ ಸರ್ವಕಾಲಿಕ ಪ್ರಸ್ತುತತೆ ಅಂದರೆ ಇದಲ್ಲವೇ?

Kannada proverb – Ooru hogu annuththe, kaadu baa annuthhe – (Village tells me to go away, forest is calling me).

This is a famous Kannada proverb used often by the elderly. In olden days when forest cover was abundant in villages, dead bodies were either buried or burnt in the nearby forest. Therefore, this is a symbolic way of suggesting that a person has attained the age which is nearing death. Nowadays though villages have lost the greenery near them, this proverb used just by practice, but nevertheless it conveys the intended meaning. That is the timeless beauty of proverbs.