Lens

ಲೆನ್ಸ್ – ಮಸೂರ, ಬಾಗುಮೈ( ಯುಳ್ಳ) ಗಾಜು – ಬೆಳಕನ್ನು ಕೇಂದ್ರೀಕರಿಸುವ ಅಥವಾ ವಿಕೇಂದ್ರೀಕರಿಸುವ ಒಂದು ದೃಶ್ಯ ವಿಜ್ಞಾನೀಯ ಉಪಕರಣ ಅಥವಾ ಉಪಕರಣ ಭಾಗ.

Lenard tube

ಲೆನಾರ್ಡ್ ಟ್ಯೂಬ್ – ಲೆನಾರ್ಡ್ ಕೊಳವೆ – ಋಣ ವಿದ್ಯುದ್ವಾರಕ್ಕೆ ಇದಿರಾಗಿ ಋಣ ವಿದ್ಯುದ್ವಾರದ ಕಿರಣಗಳು ದಾಟಿ ಹೋಗಲು ಅನುಕೂಲವಾಗುವಂತೆ ಕಿಟಕಿಯೊಂದನ್ನು ಹೊಂದಿರುವ ವಿಸರ್ಜನಾ ಕೊಳವೆ.

Lenard rays

ಲೆನಾರ್ಡ್ ರೇಸ್ – ಲೇನಾರ್ಡ್ ಕಿರಣಗಳು – ಲೆನಾರ್ಡ್ ಕೊಳವೆಯ ಆಚೆಗೆ ಹೋಗಿರುವ ಋಣ ವಿದ್ಯುದ್ವಾರ ಕಿರಣಗಳು‌ ( ಫಿಲಿಪ್ ಎಡ್ಯುವರ್ಡ್ ಆಂಟನ್ ವಾನ್ ಲೆನಾರ್ಡ್ – ಋಣ ವಿದ್ಯುದ್ವಾರವನ್ನು ಕುರಿತು ಕೆಲಸ ಮಾಡಿದ್ದಕ್ಕಾಗಿ 1905 ರಲ್ಲಿ ನೊಬೆಲ್ ‌ಪ್ರಶಸ್ತಿ ಪಡೆದ ಜರ್ಮನಿ‌ ದೇಶದ ಭೌತವಿಜ್ಞಾನಿ : ಕಾಲ – 07-06-1862 ರಿಂದ 20-05-1947). 

Lee’s disc

ಲೀಸ್ ಡಿಸ್ಕ್ – ಲೀಯವರ ಬಿಲ್ಲೆ – ಕಡಿಮೆ ವಾಹಕತೆಯುಳ್ಳ ವಸ್ತುಗಳ ಉಷ್ಣವಾಹಕ ಸಾಮರ್ಥ್ಯವನ್ನು ಅಳೆಯಲು ಬಳಸುವ ಉಪಕರಣ. 

Leclanche Cell

ಲೆಕ್ಲಾಂಚೆ ಸೆಲ್ – ಲೆಕ್ಲಾಂಚೆ ಕೋಶ – ಒಂದು ಮೂಲರೂಪೀ ವಿದ್ಯುತ್ ಕೋಶ. ಫ್ರಾನ್ಸ್ ನ ಯಂತ್ರಜ್ಞಾನಿಯಾದ ಜಾರ್ಜ್ ಲೆಕ್ಲಾಂಚೆಯು 1866 ನೇ ವರ್ಷದಲ್ಲಿ ನಿರ್ಮಿಸಿದ್ದರಿಂದ ಇದಕ್ಕೆ ಅವನ ಹೆಸರನ್ನೇ ಇಡಲಾಗಿದೆ‌. ಇದರಲ್ಲಿ ಒದ್ದೆ ಮತ್ತು ಒಣ ಎಂದು ಎರಡು ರೂಪಗಳಿರುತ್ತವೆ‌.

ಕನ್ನಡ ಗಾದೆಮಾತು – ಜಾಣನಿಗೆ ಜಗಳವಿಲ್ಲ, ರಾಗಿಗೆ ರೋಗವಿಲ್ಲ. 

ಗ್ರಾಮೀಣ ಜನರ ಜೀವನಾನುಭವದಿಂದ ಹೊರಟ ವಿವೇಕವು ಅದೆಷ್ಟು ಸರಳ ಮತ್ತು ಸುಂದರ ನೋಡಿ. ಪೌಷ್ಟಿಕ ಆಹಾರ ರಾಗಿಯನ್ನು ತಿಂದವರಿಗೆ ರೋಗ ಬರುವುದಿಲ್ಲ, ಹಾಗೆಯೇ ಎಲ್ಲಿ ಮಾತಾಡಬೇಕು, ಹೇಗೆ, ಎಷ್ಟು‌ ಯಾವಾಗ ಮಾತಾಡಬೇಕು ಎಂದು ಗೊತ್ತಿರುವ ಜಾಣನು ಜಗಳ ಮಾಡುವುದಿಲ್ಲ‌ ; ಅನಗತ್ಯ ಕಿರಿಕಿರಿ ಇಲ್ಲದೆ ಅವನು‌ ಸನ್ನಿವೇಶಗಳನ್ನು ನಿಭಾಯಿಸುತ್ತಾನೆ. ಇದನ್ನು ಅರಿತು ನಾವು ಅನಗತ್ಯ ಜಗಳ ಮಾಡದೆ ನಮ್ಮ ಮಾನಸಿಕ ಆರೋಗ್ಯವನ್ನು ಮತ್ತು ಕಣ್ಣಿಗೆ ಅಂದವೆನಿಸುವ ಜಾಹೀರಾತು ಆಹಾರಗಳನ್ನು ತಿನ್ನದೆ ನಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಬೇಕು. ಅಲ್ಲವೆ? […]

 “ಹಾಂ…ಗೊತ್ತು ಮೇಡಂ. ತುಂಡಂಗಿ!”

 ಪ್ರತಿ ಕನ್ನಡ ತರಗತಿಯಲ್ಲೂ ಒಂದು ಹೊಸ ಪದ ಹಾಗೂ ಕನ್ನಡ ಸೂಕ್ತಿ ಬರೆಸಿ ತರಗತಿ ಪ್ರಾರಂಭಿಸುವುದು ನನ್ನ ಅಭ್ಯಾಸ‌.‌ ಇದರ ಭಾಗವಾಗಿ ಈಚೆಗೆ ಒಂದು ದಿನ ಮಹಾರಾಣಿ ಕಾಲೇಜಿನ ನನ್ನ  ಒಂದು ತರಗತಿಯಲ್ಲಿ ‘ತೊಂಡಂಗಿ’ ಎಂಬ ಪದ ಬರೆದೆ‌. ಈ‌ ಪದದ ಅರ್ಥ ಜಿರಳೆ ಎಂದು.  ಹೆಣ್ಣು ಮಕ್ಕಳು ಮಾತ್ರ ಇದ್ದ ಒಂದು ಪದವಿ ತರಗತಿ ಅದು. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಜಿರಳೆಯನ್ನು ನೋಡಿದರೆ ಅಸಹ್ಯ ಪಟ್ಟು ಮಾರು ದೂರ ಎಗರುತ್ತಾರಲ್ಲವೆ? ಅದನ್ನು ನೆನೆದು ನಾನು ತಮಾಷೆಗೆ […]

Lead – acid accumulator

ಲೆಡ್ ಆಸಿಡ್ ಅಕ್ಯುಮುಲೇಟರ್ –   ಸೀಸ – ಆಮ್ಲ ಸಂಗ್ರಾಹಕ ಕೋಶ – ವಾಹನಗಳ ವಿದ್ಯುತ್ ಸಂಗ್ರಾಹಕ ಕೋಶಗಳಲ್ಲಿ ಬಳಸುವಂತಹ ಒಂದು ರೀತಿಯ ವಿದ್ಯುತ್ ಸಂಗ್ರಾಹಕ ಕೋಶ ಇದು. ಇದರಲ್ಲಿ ಸೀಸದ ಹಾಳೆಗಳನ್ನು ವಿದ್ಯುದ್ವಾರಗಳಾಗಿ ಮತ್ತು  ದುರ್ಬಲ ಗಂಧಕಾಮ್ಲವನ್ನು ವಿದ್ಯುತ್ ವಿಭಜಕ ಕೋಶವಾಗಿ  ಬಳಸುತ್ತಾರೆ.

Leakage flux

ಲೀಕೇಜ್ ಫ್ಲಕ್ಸ್ – ಸೋರಿಕೆ ಶಕ್ತಿಪ್ರವಾಹ – ಕಾಂತೀಯ ವಿದ್ಯುನ್ಮಂಡಲವು ಇರುವಂತಹ ವಿದ್ಯುತ್ ಯಂತ್ರಗಳಲ್ಲಿ ಮತ್ತು ಪರಿವರ್ತಕಗಳಲ್ಲಿ‌ ನಷ್ಡವಾಗುವಂತಹ ವಿದ್ಯುತ್ ಪ್ರವಾಹ ಇದು‌.

Leakage current

ಲೀಕೇಜ್ ಕರೆಂಟ್ – ಸೋರಿಕೆ ವಿದ್ಯುತ್ – ವಿದ್ಯುತ್ ಸಾಮರ್ಥ್ಯವು ಒಂದು ವಿದ್ಯುತ್ ನಿರೋಧಕದ ಸಂಪರ್ಕಕ್ಕೆ ಬಂದಾಗ, ತುಲನೆಯಲ್ಲಿ ಕಡಿಮೆ ಪ್ರಮಾಣದ ಹಾಗೂ‌ ಇಂಥದ್ದೇ ದಾರಿ ಎಂದಿಲ್ಲದೆ ಹರಿಯುವ ಒಂದಿಷ್ಟು ವಿದ್ಯುತ್ತು ಇದು.

Page 1 of 3

Kannada Sethu. All rights reserved.