ಯಾರ ಮನೆಯಲ್ಲಿ ದೋಸೆ ಮಾಡಿದರೂ ಅದು ಬೇಯುವಾಗ ಅದರಲ್ಲಿ ಗಾಳಿಯ ಕಾರಣದಿಂದ ತೂತುಗಳು ಆಗಿಯೇ ಆಗುತ್ತವೆ. ನಮ್ಮ ಮನೆಯ ದೋಸೆಯಲ್ಲಿ ತೂತು ಇಲ್ಲ ಎನ್ನಲಾಗುವುದೇ? ಹಾಗೆಯೇ ಸಮಸ್ಯೆಗಳು, ಬಿಕ್ಕಟ್ಟುಗಳು, ಭಿನ್ನಾಭಿಪ್ರಾಯ-ಜಗಳಗಳು ಮನುಷ್ಯರು ಕೂಡಿ ಜೀವಿಸುವ ಎಲ್ಲ ಸಂದರ್ಭ, ಸನ್ನಿವೇಶಗಳಲ್ಲೂ ಇರುತ್ತವೆ. ಬಡವರು, ಶ್ರೀಮಂತರು, ದೇಶ, ಭಾಷೆ, ವಿದ್ಯಾವಂತರು, ಅವಿದ್ಯಾವಂತರು, ಮಕ್ಕಳು, ವೃದ್ಧರು – ಈ ಎಲ್ಲ ಭೇದಗಳನ್ನೂ ಮೀರಿ ಈ ಮನುಷ್ಯ ಸನ್ನಿವೇಶವು ಉಪಸ್ಥಿತವಿರುತ್ತದೆ. ಜನ ತೋರಿಕೆಗೆ ತಮ್ಮ ಮನೆಯಲ್ಲಿ ಎಲ್ಲ ಸರಿಯಿದೆ ಎಂದು ನಟಿಸಿದರೂ ಎಲ್ಲರಿಗೂ ಮೇಲಿನ ಗಾದೆ ಮಾತಿನ ಸತ್ಯ ಗೊತ್ತಿರುತ್ತದೆ.

Kannada proverb – ellara mane dosenu thoothe (Dosa – pancake like dish of South India – is porous in all the homes).

Whenever anyone cooks dosa irrespective of the place it is cooked, it gets pores because of the air movement, while cooking. This is universal. Just like this, some disagreements, misunderstandings and quarrels are part of family life. Sometimes people might paint a rosy picture of their homes and families, that it is flawless. But common sense says that all homes are almost same when it comes to good and bad aspects. So this proverb points to this commonplace occurrence with the example of a culinary observation, a wise one indeed!