ಇದು ಕನ್ನಡದ ಒಂದು ಪ್ರಸಿದ್ಧ ಗಾದೆಮಾತು. ಸಾಮಾನ್ಯವಾಗಿ ಮನುಷ್ಯರು ತಾವು ಮಾಡುವ ತಪ್ಪುಗಳಿಗೆ ಕುರುಡಾಗಿರುತ್ತಾರೆ. ತಾವು ಮಾಡುವುದು ಸರಿ ಎಂಬ ಭಾವ ಸದಾ ಅವರಲ್ಲಿ ಇರುತ್ತದೆ. ಇನ್ನೊಬ್ಬರ ತಪ್ಪನ್ನು ಬೇಗ ಕಂಡುಹಿಡಿಯುವ ಜನರು ತಮ್ಮ ತಪ್ಪನ್ನು ಬೇಗ ಅರ್ಥ ಮಾಡಿಕೊಳ್ಳುವುದಿಲ್ಲ. ಹೇಗೆ ನಮ್ಮ ಬೆನ್ನು ನಮಗೆ ಕಾಣುವುದಿಲ್ಲವೋ ಹಾಗೆ ನಮ್ಮ ತಪ್ಪು ನಮಗೆ ಅರ್ಥವಾಗುವುದಿಲ್ಲ ಎಂಬುದು ಈ ಗಾದೆ ಮಾತಿನ ಅರ್ಥ. ಮನುಷ್ಯ ದೇಹದ ರಾಚನಿಕ ಅಂಶವೊಂದನ್ನು ಗಮನಿಸಿ ಮನುಷ್ಯ ಸ್ವಭಾವದ ಬಗ್ಗೆ ಅನುಭವಜನ್ಯ ಒಳನೋಟವನ್ನು ಕೊಡುವುದು ಈ ಗಾದೆ ಮಾತಿನ ವಿಶೇಷತೆಯಾಗಿದೆ.

Kannada proverb – Thanna bennu thanage kaanalla(One cannot see his own back).

It is a biological fact that a human being cannot see his own back, because our bodies are designed this way. The above famous Kannada proverb uses this biological fact to give us some insight about one particular human attribute. One seldom sees and realizes his own mistake. People are quick to point out the mistakes in others, but when it comes to their own mistakes they go blind. It is a truth we realize in our everyday life.