ಲೋಕದೊಂದಿಗೆ ನಾವು ವ್ಯವಹರಿಸುವಾಗ ನಮ್ಮ ಸುಖದುಃಖಗಳನ್ನು ಯಾರೊಂದಿಗೆ, ಎಷ್ಟರ ಮಟ್ಟಿಗೆ, ಯಾವಾಗ, ಹೇಗೆ ಹಂಚಿಕೊಳ್ಳುತ್ತೇವೆ ಎಂಬುದರ ಬಗ್ಗೆ ಲಕ್ಷ್ಯ ಕೊಡಬೇಕಾಗುತ್ತದೆ. ಸದಾಕಾಲ ತಮ್ಮ ಗೋಳುಗಳನ್ನು ಹೇಳುತ್ತಾ ಇರುವವರ ಬಗ್ಗೆ ಜನರು ಗೌರವ ಕಳೆದುಕೊಂಡು ಅವರ ಮಾತುಗಳಿಗೆ ಗಮನ ಕೊಡುವುದನ್ನು ನಿಲ್ಲಿಸಿಬಿಡುತ್ತಾರೆ – “ಅಯ್ಯೋ, ಅವರದ್ದು ದಿನಾ ಇದ್ದಿದ್ದೇ ಬಿಡು. ಒಂದಲ್ಲ ಒಂದು ವಿಷಯಕ್ಕೆ ಗೋಳಾಡ್ತಾನೇ ಇರ್ತಾರೆ. ದಿನಾ ಸಾಯೋರಿಗೆ ಅಳರ್ಯಾರು!’’ ಎನ್ನುತ್ತಾರೆ. ಈ ಗಾದೆಮಾತು ಎಷ್ಟು ಪರಿಣಾಮಕಾರಿಯಾದ ಉಕ್ತಿಯೆಂದರೆ ಸಾವು ಎನ್ನುವುದು ವ್ಯಕ್ತಿಗೆ ದಿನಾ ಬರುವಂತಹದ್ದಲ್ಲ ಎಂಬ ಗಂಭೀರ ವಾಸ್ತವಾಂಶವನ್ನು ಆಧಾರವಾಗಿ ಇರಿಸಿಕೊಂಡು ತನ್ನ ತರ್ಕವನ್ನು ಕಟ್ಟಿದೆ. ಈ ಗಾದೆಮಾತನ್ನು ನಾವು ನೆನಪಿಟ್ಟುಕೊಂಡರೆ ಹೊರಪ್ರಪಂಚದೊಂದಿಗಿನ ನಮ್ಮ ವರ್ತನೆ, ವ್ಯವಹಾರ, ಮಾತುಕತೆಗಳು ಸಮತೋಲನದಲ್ಲಿರುತ್ತವೆ.
Kannada proverb – Dina sayorige aloryaryru? (Who will weep for the one who dies daily!?).
This is a proverb with a very pungent kind of diction but which teaches a valuable lesson to us. If we keep on pouring out our problems and woes to people all the time, after some time they become insensitive towards us. No one will have the patience to listen to an adult crybaby day in and day out. The people around such crybabies might think that `who will cry for the one who dies daily!?’. Therefore in adult life we need to be choosy about the place, time and the persons with whom we share our heart, especially our problems.