ಸಿಟ್ಟು. ಕೋಪ. ರೋಷ, ಕ್ರೋಧ, ರೊಚ್ಚು, ಕನಲುವಿಕೆ ….. ಯಾವ ಹೆಸರಿಂದ ಕರೆದರೇನು, ಈ ಭಾವದ ಪರಿಚಯ ಇಲ್ಲದ ಮನುಷ್ಯರೇ ಇಲ್ಲ. ನಮಗೇ ಕೋಪ ಬರುವ ಸಂದರ್ಭಗಳು ಅಥವಾ ಬೇರೆಯವರು ನಮ್ಮ ಮೇಲೆ ಕೋಪಗೊಂಡಾಗ ಅನುಭವಿಸುವ ಕಸಿವಿಸಿ, ನೋವು, ಭಯ ಇವೆಲ್ಲ ನಮಗೆ ಗೊತ್ತು. ಬದುಕಿನಲ್ಲಿ ತನಗೆ ಇಷ್ಟವಾಗದ ಸನ್ನಿವೇಶಗಳು ಬಂದರೆ ಮನುಷ್ಯ ಸಿಟ್ಟು ಮಾಡಿಕೊಳ್ಳುವುದು ಸಹಜ. ಆದರೆ ಸಿಟ್ಟು ಮಿತಿಮೀರಿದರೆ ಅದು ವಿನಾಶಕಾರಿ. ವ್ಯಕ್ತಿಗಳಿಗೆ ಮಿತಿಮೀರಿದ ಸಿಟ್ಟು ಬಂದಾಗ ಮನುಷ್ಯ ಸಂಬಂಧಗಳೇ ಮುರಿದು ಹೋಗಬಹುದು. ಅಂತಹ ರುದ್ರಾವತಾರದ ಸಮಯದಲ್ಲಿ ಮನುಷ್ಯರು ಬಯ್ಯಬಾರದ ಬಯ್ಗುಳ ಬಯ್ಯುವುದರಿಂದ ಹಿಡಿದು ಕೊಲೆ ಮಾಡುವ ತನಕ ಅತಿರೇಕದ ಕೆಲಸಗಳನ್ನು ಮಾಡುವ ಸಾಧ್ಯತೆ ಇದೆ. ಇಂತಹ ವಿಪರೀತ ಪ್ರಮಾಣದ ಸಿಟ್ಟು ಯಾರಿಗೂ ಒಳ್ಳೆಯುದಲ್ಲ. ಇದಕ್ಕಾಗಿಯೇ ನೋಡಿ, ಈ ಗಾದೆಮಾತು ಉತ್ತಮ ನಿದರ್ಶನ ನೀಡುವುದರೊಂದಿಗೆ ವಿಷಯವನ್ನು ಮನದಟ್ಟು ಮಾಡಿಸುತ್ತಿದೆ. ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡು, ನಂತರ ಶಾಂತ ಸ್ಥಿತಿಯಲ್ಲಿ ಅದನ್ನು ಮುಖಕ್ಕೆ ಏರಿಸಿದರೆ ಏರುತ್ತದೆಯೇ? ಇಲ್ಲ. ಹಾಗೆಯೇ ಸಿಟ್ಟಿನಲ್ಲಿ ಮಾಡಿದ ವಿನಾಶಕರ ಕೆಲಸಗಳ ಪರಿಣಾಮ ಮತ್ತೆ ಸರಿಪಡಿಸಲಾಗದಷ್ಟು ಗಂಭೀರವಾಗಿರುತ್ತದೆ. ಇದನ್ನು ಅರಿತು, ನಾವು ನಮ್ಮ ಸಿಟ್ಟನ್ನು ನಿಯಂತ್ರಿಸಿಕೊಳ್ಳುವುದನ್ನು ಕಲಿಯಬೇಕು.

Kannada Proverb: sittige koyda muugu shathige erthada? (If you cut the nose in anger, will it get back to face when you cool down?) Who has not experienced anger? Sometimes we have got angry with others and at other times, we have faced the wrath of others. When angry some people shout at others, some stop talking, some weep and some stomp their foot and walk away. Up to some point all these reactions might be bearable, but if things go out of control it can lead to problems. The worst is when people resort to manhandle others or destroy precious property in the vicinity. In extreme cases it can lead to murder too! This is why the wise ones advise us against anger. The above proverb depicts it with a good metaphor. If we cut the nose in anger will it get back to face when we cool down? No. Therefore let us be careful to keep our anger in limit.