ಬದುಕಿನ ವಿಪರ್ಯಾಸವೊಂದನ್ನು ತುಂಬ ಚಿತ್ರಕವಾಗಿ ಹೇಳುವ ಒಂದು ಜನಪ್ರಿಯ ಗಾದೆ ಮಾತಿದು. ಅಗಿದೇ ತಿನ್ನಬೇಕಾದ ಅಂದರೆ ಹಾಗೇ ನುಂಗಲಾಗದ  ಕಡಲೆಬೀಜವನ್ನು ತಿನ್ನಲು ಹಲ್ಲು ಬೇಕೇ ಬೇಕು. ಜೀವನ ಕೆಲವು ಸಲ ಹೇಗಿರುತ್ತದೆ ಅಂದರೆ ಕಡಲೆ ತಿನ್ನಲು ಶಕ್ತಿ ಇರುವ ಹಲ್ಲು ಇದ್ದಾಗ ಕಡಲೆಯೇ ನಮ್ಮ ಬಳಿ ಇರುವುದಿಲ್ಲ. ಮತ್ತು ಬೇಕಾದಷ್ಟು ಕಡಲೆಯನ್ನು ಕೊಳ್ಳುವ ಅಥವಾ ಇಟ್ಟುಕೊಳ್ಳುವ ಸಾಮರ್ಥ್ಯ ಬಂದಾಗ ಹಲ್ಲೇ ಇರುವುದಿಲ್ಲ, ಅವು ಅಷ್ಟರಲ್ಲಿ ಉದುರಿ ಹೋಗಿರುತ್ತವೆ!  ಎಂತಹ ವಿಚಿತ್ರವಲ್ಲವೇ ಇದು!? ಜೀವನದ ಸುಖ, ಸೌಲಭ್ಯಗಳನ್ನು ಅನುಭವಿಸುವ ವಿಷಯದಲ್ಲಿ ಕೆಲವು ಸಲ ಹೀಗಾಗಬಹುದು; ನಮಗೆ ಅವುಗಳನ್ನು ಸವಿಯುವ ಸಾಮರ್ಥ್ಯ ಇದ್ದಾಗ ಅವು ನಮ್ಮ ಬಳಿ ಇರುವುದಿಲ್ಲ, ಅವು ನಮ್ಮ ಬಳಿ ಇದ್ದಾಗ ಅವನ್ನು ಸವಿಯುವ ಸಾಮರ್ಥ್ಯ ನಮಗಿರುವುದಿಲ್ಲ! ಬದುಕಿನಲ್ಲಿ ಯಾಕೆ ಹೀಗಾಗುತ್ತದೆ ಎಂಬುದಕ್ಕೆ ಯಾರೂ ವಿವರಣೆ ನೀಡಲಾರರೇನೋ. ಬಹುಶಃ ಕವಿ ಶ್ರೀ ಗೋಪಾಲಕೃಷ್ಣ ಅಡಿಗರು ತಮ್ಮ ಒಂದು ಕವಿತೆಯಲ್ಲಿ ಹೇಳಿದ್ದು ನಿಜ, ‘ಇದು ಬಾಳು ನೋಡು ಇದು ತಿಳಿದೆನೆಂದರೂ ತಿಳಿದ ಧೀರನಿಲ್ಲ’.  

Kannada proverb – Hallidre kadale illa, kadale idre hallilla (When there are teeth there are no ground nuts, and when there are ground nuts there are no teeth!)

This popular proverb of Kannada explains a paradox of life very effectively. It is obvious that we need strong teeth to relish ground nuts. But there are times in life that though we have strong teeth, we may not be in a position to procure ground nuts and on the other hand, when we do have the capacity to possess ground nuts we may not have teeth! This can be a metaphor for many of life’s providences. Why so? No one can explain. May be all we can say is “life is like that”! (“Life is like that’’ is a famous column’s name in the good old English magazine `Reader’s Digest’.)