ನಮ್ಮ ಗ್ರಾಮಸ್ಥ ಜನಪದರು ಜನರ ಪರಸ್ಪರ ಹೊಂದಾಣಿಕೆ ಮತ್ತು ಸಹಬಾಳ್ವೆಗಾಗಿ ರೂಪಿಸಿರುವ ಒಂದು ಸುಂದರ ಅಭ್ಯಾಸವನ್ನು ಮೇಲಿನ ಗಾದೆಮಾತು ಹೇಳುತ್ತದೆ. ಪ್ರಕೃತಿ ನಮಗೆ ಕೊಟ್ಟ ಅತ್ಯಂತ ಆಹ್ಲಾದಕರ ಉಡುಗೊರೆಗಳೆಂದರೆ ಹೂವು ಮತ್ತು ಹಣ್ಣು. ಇವುಗಳ ಆನಂದವನ್ನು ಸವಿಯುವಾಗ ನಾವೊಬ್ಬರೇ ಸವಿಯದೆ ಸುತ್ತಮುತ್ತ ಇರುವ ಮನೆಮಂದಿ, ಬಳಗದವರು, ಸ್ನೇಹಿತರೊಂದಿಗೆ ಹಂಚಿಕೊAಡರೆ ಆ ಸವಿ ದುಪ್ಪಟ್ಟಾಗುತ್ತದೆ.. ಪರಸ್ಪರರ ಸೌಹಾರ್ದ ಮತ್ತು ಪ್ರೀತಿ ಭಾವಗಳನ್ನು ಈ ಹಂಚಿಕೊಳ್ಳುವ ಕ್ರಿಯೆಯು ಬೆಳೆಸುತ್ತದೆ. ಅದಕ್ಕೇ ನಾವು ಹೂವು, ಹಣ್ಣು ಅಥವಾ ನಮ್ಮ ಬಳಿ ಇರುವ ಇನ್ನೇನಾದರೂ ಸವಿಯಾದ ಸಂಗತಿಗಳನ್ನು ಒಂಟಿಯಾಗಲ್ಲದೆ ಜೊತೆಯಲ್ಲಿ ಸವಿಯಬೇಕು. ಪುಟ್ಟ ಮಕ್ಕಳಿಗೆ ಈ ಅಭ್ಯಾಸವನ್ನು ಮೊದಲಿಂದಲೂ ಕಲಿಸಿದರೆ ಮುಂದೆ ಅವರು ಜನರ ಜೊತೆ ಚೆನ್ನಾಗಿ ಹೊಂದಿಕೊಳ್ಳಲು ಕಲಿಯುತ್ತಾರೆ. ಉತ್ತಮ ಬದುಕನ್ನು ಬದುಕುವ ರೀತಿಯು ಇಂತಹ ಗಾದೆಮಾತುಗಳಲ್ಲಿ ಅಡಗಿರುತ್ತದೆ.

Kannada proverb: Hoovannu kottu mudi, hannannu hanchi thinnu(Share the flower you wear, and share the fruit you eat).

Flowers and fruits are undoubtedly the sweetest things nature offers us. The above Kannada proverb says that, share these nature’s gifts with others around you when you are enjoying them. A joy shared is a joy doubled. By sharing these goodies the goodwill and friendly feelings grow between the persons. We can see this practice of sharing, all around the villages of Karnataka. For young kids this is a lesson in maintaining good human relationships. This way proverbs help us to lead a good life.