Anisotropic 

ಅಸಮಗುಣಿ – ತನ್ನ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಭೌತಿಕ ಗುಣಲಕ್ಷಣಗಳನ್ನು ಹೊಂದಿರುವ ಒಂದು ವಸ್ತು ಅಥವಾ ಮಾಧ್ಯಮ.

Annihilation 

ಶೂನ್ಯೀಕರಣ – ಒಂದು ಕಣ ಮತ್ತು ಅದರ ವಿರುದ್ಧ ಕಣಗಳು ಒಂದಕ್ಕೊಂದು ಸಂಘರ್ಷಿಸಿದಾಗ ಉಂಟಾಗುವ ಸಂಪೂರ್ಣ ವಿನಾಶ.

Anode

ಧನ ವಿದ್ಯುದ್ವಾರ – ಎಲೆಕ್ಟ್ರಾನುಗಳನ್ನು ಆಕರ್ಷಿಸುವ ಧನಾತ್ಮಕ ವಿದ್ಯುತ್ ತುದಿಗೋಡೆ.

Antinode

ಕಂಪನ ಶಿಖರ – ಸ್ಥಿರವಾದ ಅಲೆವಿನ್ಯಾಸವೊಂದರಲ್ಲಿ ಗರಿಷ್ಠ ಕಂಪನ ಹೊಂದಿರುವ ಒಂದು ಬಿಂದು.

Antiparallel

ವಿರುದ್ಧ ಸಮಾನಾಂತರಿ – ಎರಡು ಸಮಾನಾಂತರ ರೇಖೆಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವಂಥದ್ದು.

ಹಾಕ್ಮಣೆ ನೂಕ್ಮಣೆ ಯಾಕ್ಮಣೆ

ಕನ್ನಡದ ಈ ಗಾದೆಮಾತು ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳಲ್ಲಿನ ಒಂದು ಸೂಕ್ಷ್ಮ ಅಂಶವನ್ನು ದಾಖಲಿಸುತ್ತದೆ. ಒಬ್ಬರ ಮನೆಗೆ ಅತಿಥಿಯಾಗಿ ಹೋದವರು, ಅತಿಥಿತನಕ್ಕೆ ಒಪ್ಪುವಂತೆ ಎಷ್ಟು ಕಾಲ ಇರಬೇಕೋ ಅಷ್ಟು ಕಾಲ ಮಾತ್ರ ಇದ್ದರೆ ಉಚಿತ. ಆದರೆ ಅದಕ್ಕಿಂತ ಹೆಚ್ಚು ಸಮಯ ಅತಿಥೇಯರ ಮನೆಯಲ್ಲಿದ್ದರೆ, ಅವರನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಎಂಬ ಕಟುಸತ್ಯವು ಇಲ್ಲಿ ಗೊತ್ತಾಗುತ್ತದೆ. ಪ್ರಾರಂಭದಲ್ಲಿ ಅತಿಥಿಗಳನ್ನು ಮಣೆಹಾಕಿ ಕೂರಿಸಿ ಉಪಚರಿಸಲಾಗುತ್ತದೆ.

 “ಆಯ್ತು. ಕನ್ನಡ ಕಲಿತರೆ ನಿಂಗೆ ಪಿಜ್ಝಾ ಟ್ರೀಟ್! ಸರೀನಾ?

೨೦೧೬ರ ಜೂನ್ ತಿಂಗಳಿರಬೇಕು. ನಮ್ಮ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಒಂದು ದಿನ ನನ್ನ ಸಹೋದ್ಯೋಗಿಯೊಬ್ಬರು ನಮ್ಮ ವಿಭಾಗಕ್ಕೆ ಬಂದರು. ಅವರ ಮುಖ ತುಸು ಚಿಂತಾಗ್ರಸ್ತವಾದಂತೆ ಕಂಡಿತು. “ನನ್ನ ಮಗಂಗೆ ಏನಾದ್ರೂ ಮಾಡಿ ಕನ್ನಡ ಹೇಳಿಕೊಡ್ಬೇಕಲ್ಲಾ ಮೇಡಂ. ಅವನು ಈಗ ಒಂಬತ್ತನೇ ತರಗತೀಲಿದಾನೆ. ಕೇಂದ್ರೀಯ ವಿದ್ಯಾಲಯದಲ್ಲಿ ಓದ್ತಾನೆ. ಅಲ್ಲಿ ಕನ್ನಡ ಇಲ್ಲ,*** ಹಿಂದಿ ಓದೋದು ಅವ್ನು. ನಿನ್ನೆ ನಮ್ಮೂರು ಮೈಸೂರಿಗೆ ರೈಲಲ್ಲಿ ಹೋಗಿದ್ವಿ.

Altitude

ಎತ್ತರ – ಸೂರ್ಯ ಅಥವಾ ಯಾವುದಾದರೂ ಆಕಾಶಕಾಯವು ಇರುವ ಎತ್ತರ..

Amalgam

ಪಾದರಸಮಿಶ್ರ ವಸ್ತು – ಪಾದರಸವಿರುವ ಮಿಶ್ರಲೋಹಕ್ಕೆ ಬಳಸುವ ಪದವಿದು.

Analyser 

ಸಮತಲಮಾಪಕ – ಒಂದು ಸಮತಲದಲ್ಲಿ ಧ್ರುವೀಕರಣಗೊಂಡ ಬೆಳಕಿನ ಧ್ರುವೀಕರಣದ ಸಮತಲವನ್ನು ಗೊತ್ತುಹಚ್ಚಲು ಬಳಸುವ ಒಂದು ಉಪಕರಣ.

Page 1 of 4

Kannada Sethu. All rights reserved.