ಗುಡಿಸಿದ್ರೆ ಕಸವಿರ್‍ಬಾರ್‍ದು, ಬಡಿಸಿದ್ರೆ ಹಸಿವಿರ್‍ಬಾರ್‍ದು

ಕೆಲಸ ಮಾಡುವ ಉತ್ತಮ ರೀತಿಯೊಂದನ್ನು ಹೇಳುವ ಕನ್ನಡ ಗಾದೆಮಾತು ಇದು. ಕಸ ಗುಡಿಸಿದರೆ ಸ್ವಲ್ಪವೂ ಕಸ ಇರದಂತೆ ಗುಡಿಸಬೇಕು ಮತ್ತು ಊಟ ಬಡಿಸುವಾಗ ಉಣ್ಣುವವರಿಗೆ ಹಸಿವು ಸ್ವಲ್ಪವೂ ಉಳಿಯದಂತೆ ಅಂದರೆ, ಅವರು ಹೊಟ್ಟೆ ತುಂಬ ಉಣ್ಣುವಂತೆ ಬಡಿಸಬೇಕು ಎನ್ನುವುದು ಇದರ ಮೇಲ್ನೋಟದ ಅರ್ಥ.

ಅ-ಹ-ಕಾರದ ಹಾಹಾಕಾರ

“ಹಿದನ್ನು ಏಗೆ ಹೊಪ್ಪುವುದು ಏಳು”. ಎರಡನೇ ಬಿಎಸ್ಸಿ ತರಗತಿಯ ನನ್ನೊಬ್ಬಳು ವಿದ್ಯಾರ್ಥಿನಿ ಪೂರ್ಣಿಮಾ ಕನ್ನಡ ತರಗತಿಯಲ್ಲಿ ಬೋರ್ಡಿನ ಮೇಲೆ ಬರೆದಿದ್ದನ್ನು ಓದಿದ್ದು ಹೀಗೆ! ಒಂದು ದಿನ ವಿದ್ಯಾರ್ಥಿನಿಯರಿಗೆ ಸರಿಯಾದ ಉಚ್ಚಾರ ಕಲಿಸಲು ಬೋರ್ಡಿನಲ್ಲಿ ಕೆಲವು ಪದ/ವಾಕ್ಯಗಳನ್ನು ಬರೆದು ಓದಿಸುತ್ತಿದ್ದಾಗ ನಡೆದ ಘಟನೆ ಇದು.

Accumulator

ಸಂಗ್ರಾಹಕ ಕೋಶ – ವಿದ್ಯುತ್ ಹರಿಸುವುದರ ಮೂಲಕ ವಿದ್ಯುದಂಶ(ಚಾರ್‍ಜ್)ವನ್ನು ನೀಡಬಹುದಾದ ವಿದ್ಯುತ್ ಕೋಶ ಅಥವಾ ಬ್ಯಾಟರಿ ಇದು.

Aclastic

ವಕ್ರಗೊಳಿಸದ ಗುಣ – ವಸ್ತುಗಳಲ್ಲಿರುವ ಒಂದು ಗುಣಲಕ್ಷಣ. ಒಂದು ವಸ್ತುವು ತನ್ನ ಮೇಲೆ ಬಿದ್ದಂತಹ ಬೆಳಕನ್ನು ವಕ್ರೀಭವನಕ್ಕೆ(ರಿಫ್ರ್ಯಾಕ್ಷನ್) ಒಳಪಡಿಸದ ಒಂದು ಗುಣವಿದು.

Activation

ವಿಕಿರಣ ಪ್ರಚೋದನೆ _ ಒಂದು ವಸ್ತುವಿನಲ್ಲಿ ವಿಕಿರಣ(ರೇಡಿಯೇಷನ್)ವನ್ನು ಪ್ರಚೋದಿಸುವ ಪ್ರಕ್ರಿಯೆ.

Page 4 of 4

Kannada Sethu. All rights reserved.