Bands (Energy)

 (ಶಕಿ) ಪಟ್ಟಿಗಳು –  ಹರಳುರೂಪಿಯಾದ ಒಂದು ಘನವಸ್ತುವಿನಲ್ಲಿ ಎಲೆಕ್ಟ್ರಾನೊಂದಕ್ಕೆ ಇರಬಹುದಾದ ಶಕ್ತಿ ಮೌಲ್ಯಗಳು.

Atomic number

ಪರಮಾಣೀಯ ಸಂಖ್ಯೆ  ಒಂದು ಪರಮಾಣುವಿನ ಬೀಜಕೇಂದ್ರದಲ್ಲಿರುವ ಪ್ರೋಟಾನುಗಳ ಸಂಖ್ಯೆ. ಇದು ಆ ಬೀಜಕೇಂದ್ರವನ್ನು ಸುತ್ತುತ್ತಿರುವ ಎಲೆಕ್ಟ್ರಾನುಗಳ ಸಂಖ್ಯೆಗೆ ಸಮವಾಗಿರುತ್ತದೆ. 

Alpha  particle

ಆಲ್ಫಾ ಕಣ – ಕೆಲವು ವಿಕಿರಣ ವಸ್ತುಗಳು ಹೊರಚೆಲ್ಲುವ ಹೀಲಿಯಂ ಬೀಜಕೇಂದ್ರಗಳು.

Alternating current  circuit

ಪರ್ಯಾಯ ವಿದ್ಯುತ್ತಿನ ಮಂಡಲ – ಪರ್ಯಾಯ ವಿದ್ಯುತ್ತಿನ ಆಕರದಿಂದ ವಿದ್ಯುತ್ತನ್ನು ಪಡೆಯುವಂತಹ ವಿದ್ಯುನ್ಮಂಡಲ.

Alternator 

ಪರ್ಯಾಯ ವಿದ್ಯುದುತ್ಪಾದಕ : ಪರ್ಯಾಯ ವಿದ್ಯುತ್ತನ್ನು ಉತ್ಪಾದಿಸುವಂತಹ ಉಪಕರಣ.

ಬೆಟ್ಟ ಅಗೆದು ಇಲಿ ಹಿಡಿದಂಗೆ

ಕೆಲವು ಸಲ ನಾವು ಜೀವನದಲ್ಲಿ ತುಂಬ ಪರಿಶ್ರಮ ಹಾಕಿದರೂ ಪ್ರತಿಫಲವು ನಾವು ಎಣಿಸಿದಷ್ಟು ಬರುವುದಿಲ್ಲ. ಬೆಟ್ಟ ತುಂಬ ದೊಡ್ಡದು, ಅದನ್ನು ಅಗೆಯುವುದು ಸಾಮಾನ್ಯವಾದ ಮಾತಲ್ಲ. ಕೆಲವರು ಸಂಪತ್ತು, ನಿಧಿ ಸಿಗುತ್ತದೆ ಎಂಬ ಆಸೆಯಿಂದ ಬೆಟ್ಟವನ್ನು ಅಗೆಯುವುದುಂಟು. ಆದರೆ ಹಾಗೆ ಅಷ್ಟು ದೊಡ್ಡದಾಗಿರುವ ಬೆಟ್ಟವನ್ನು ಅಗೆದ ಮೇಲೆ ಸಿಕ್ಕಿದ್ದು ಒಂದು ಇಲಿ ಎಂದಾಗ ಅಗೆದವರಿಗೆ `ನಮ್ಮ ಶ್ರಮ ವ್ಯರ್ಥವಾಯಿತಲ್ಲ ಎಂಬ ಭಾವನೆ ಬರುವುದು ಸಹಜ. ಆದರೆ ಜಿವನದಲ್ಲಿ ಹೀಗಾಗುವುದು ಅಪರೂಪವೇನಲ್ಲ. ಆದುದರಿಂದ ನಾವು ಯಾವುದಾದರೂ ಕೆಲಸಕ್ಕೆ ಕೈ ಹಾಕುವಾಗ […]

ಹಳ್ಳಿ ಗಡಿಯಾರ, ಒಳ್ಳೆ ಆಹಾರ

ಗೆಳತಿಯೊಬ್ಬರು ಒಂದು ದಿನ ಹೀಗೇ ವಾಟ್ಯಾಪ್ಪಿನಲ್ಲಿ `ಹಳ್ಳಿ ಗಡಿಯಾರ ಒಳ್ಳೆ ಆಹಾರ ಎಂಬ ವಾಕ್ಯ ಕಳಿಸಿ `ಈ ಒಗಟು ಬಿಡಿಸುತ್ತೀರಾ? ಎಂದು ಕೇಳಿದರು. `ತಮಾಷೆಗೆ ಎಂದು ಕೂಡ ಪಾಪ ಸೇರಿಸಿದ್ದರು. ಸರಿ, ತಲೆಗೆ ಹುಳ ಬಿಟ್ಟಂತೆ ಆಗಿ ದಿನವೆಲ್ಲ ಯೋಚನೆ.

Azeotrope

ಬದಲಾಗದ ಬಂಧವುಳ್ಳದ್ದು – ಒಟ್ಟಿಗೆ ಕುದಿಯುವಾಗ ತಮ್ಮ ಬಂಧದಲ್ಲಿ ಯಾವುದೇ ವ್ಯತ್ಯಾಸ ತೋರದ ಎರಡು ದ್ರವಗಳ ಮಿಶ್ರಣ.

Attenuation

ಶಕ್ತಿಗುಂದುವಿಕೆ – ಒಂದು ವಸ್ತುವಿನೊಳಗೆ ಹಾದು ಹೋಗುವಾಗ ವಿಕಿರಣದ ಸಾಮರ್ಥ್ಯವು ಕಡಿಮೆಯಾಗುವುದು.

Aurora Borealis

ಉತ್ತರಧ್ರುವ ಅರುಣಜ್ಯೋತಿ – ಉತ್ತರಧ್ರುವದಲ್ಲಿ ಕಾಣಿಸುವ ಬಣ್ಣಬಣ್ಣದ ಬೆಳಕು (ಮುಖ್ಯವಾಗಿ ಕೆಂಪು ಮತ್ತು ಹಸಿರು)

Page 1 of 3

Kannada Sethu. All rights reserved.