Atomic number

ಪರಮಾಣೀಯ ಸಂಖ್ಯೆ  ಒಂದು ಪರಮಾಣುವಿನ ಬೀಜಕೇಂದ್ರದಲ್ಲಿರುವ ಪ್ರೋಟಾನುಗಳ ಸಂಖ್ಯೆ. ಇದು ಆ ಬೀಜಕೇಂದ್ರವನ್ನು ಸುತ್ತುತ್ತಿರುವ ಎಲೆಕ್ಟ್ರಾನುಗಳ ಸಂಖ್ಯೆಗೆ ಸಮವಾಗಿರುತ್ತದೆ. 

Alpha  particle

ಆಲ್ಫಾ ಕಣ – ಕೆಲವು ವಿಕಿರಣ ವಸ್ತುಗಳು ಹೊರಚೆಲ್ಲುವ ಹೀಲಿಯಂ ಬೀಜಕೇಂದ್ರಗಳು.

Alternating current  circuit

ಪರ್ಯಾಯ ವಿದ್ಯುತ್ತಿನ ಮಂಡಲ – ಪರ್ಯಾಯ ವಿದ್ಯುತ್ತಿನ ಆಕರದಿಂದ ವಿದ್ಯುತ್ತನ್ನು ಪಡೆಯುವಂತಹ ವಿದ್ಯುನ್ಮಂಡಲ.

Alternator 

ಪರ್ಯಾಯ ವಿದ್ಯುದುತ್ಪಾದಕ : ಪರ್ಯಾಯ ವಿದ್ಯುತ್ತನ್ನು ಉತ್ಪಾದಿಸುವಂತಹ ಉಪಕರಣ.

Azeotrope

ಬದಲಾಗದ ಬಂಧವುಳ್ಳದ್ದು – ಒಟ್ಟಿಗೆ ಕುದಿಯುವಾಗ ತಮ್ಮ ಬಂಧದಲ್ಲಿ ಯಾವುದೇ ವ್ಯತ್ಯಾಸ ತೋರದ ಎರಡು ದ್ರವಗಳ ಮಿಶ್ರಣ.

Attenuation

ಶಕ್ತಿಗುಂದುವಿಕೆ – ಒಂದು ವಸ್ತುವಿನೊಳಗೆ ಹಾದು ಹೋಗುವಾಗ ವಿಕಿರಣದ ಸಾಮರ್ಥ್ಯವು ಕಡಿಮೆಯಾಗುವುದು.

Aurora Borealis

ಉತ್ತರಧ್ರುವ ಅರುಣಜ್ಯೋತಿ – ಉತ್ತರಧ್ರುವದಲ್ಲಿ ಕಾಣಿಸುವ ಬಣ್ಣಬಣ್ಣದ ಬೆಳಕು (ಮುಖ್ಯವಾಗಿ ಕೆಂಪು ಮತ್ತು ಹಸಿರು)

Autoclave

ಕ್ರಿಮಿನಾಶಕ ಪಾತ್ರೆ – ಹೆಚ್ಚಿನ ಉಷ್ಣತೆ ಮತ್ತು ಒತ್ತಡದಲ್ಲಿ ಕ್ರಿಮಿಗಳನ್ನು ನಾಶ ಮಾಡುವ ಗಟ್ಟಿಯಾದ ಪಾತ್ರೆ.

Avalanche

ವಿದ್ಯುದಣು ಸುಗ್ಗಿ – ಕೇವಲ ಒಂದೇ ಬಾರಿಯ ವಿದ್ಯುದಣುಗೊಳಿಸುವಿಕೆಯಿಂದ ವಿಪುಲ ಸಂಖ್ಯೆಯ ವಿದ್ಯುದಣುಗಳು ಸೃಷ್ಟಿಯಾಗುವ ಪ್ರಕ್ರಿಯೆ.

Axis

ಅಕ್ಷರೇಖೆ – ಒಂದು ವಸ್ತು ಅಥವಾ ವ್ಯವಸ್ಥೆಯು ಯಾವ ರೇಖೆಯ ಸುತ್ತ ಸುತ್ತುತ್ತದೋ ಆ ರೇಖೆ. 

Page 1 of 2

Kannada Sethu. All rights reserved.