ಸಿಗಲಿಲ್ಲ ಗುರಿಯಿಟ್ಟ ಕನ್ನಡ ಫಲ; ಆದರೆ `ಕೊರೋನಾ ಬೆಂಬಲ ಸಿಕ್ಕಿ ದಾರಿ ತೋರಿತಲ್ಲ!

“ಮೇಡಂ, ನನ್ ಮಗಂಗೆ ಯಾರ ಹತ್ರ ಆದ್ರೂ ಹೇಳಿ ಪಿಯುಸಿ ಕನ್ನಡ ಪರೀಕ್ಷೆ ಪಾಸ್ ಮಾಡ್ಸೋಕೆ ಆಗುತ್ತಾ? ಬೇರೆಲ್ಲಾದ್ರಲ್ಲೂ ಪಾಸಾಗಿ ಕನ್ನಡದಲ್ಲಿ ಫೇಲಾಗಿಬಿಟ್ಟಿದಾನೆ. ಇದೊಂದರಿಂದ ಅವ್ನು ಡಿಗ್ರಿ ಓದೋಕೆ ಆಗ್ತಿಲ್ಲ. ಎಷ್ಟು ದುಡ್ಡು ಖರ್ಚಾದ್ರೂ ಪರವಾಗಿಲ್ಲ, ಏನಾದ್ರೂ ಮಾಡಿ ಮೇಡಂ, ಸುಮಾರು ಎರಡು ವರ್ಷಗಳ ಹಿಂದೆ ಒಂದು ಬೆಳಿಗ್ಗೆ, ತುಸು ಕೆಂಪಾಗಿದ್ದ ತಮ್ಮ ಕಣ್ಣುಗಳನ್ನು ಕಿರಿದುಗೊಳಿಸಿ ವಿನಂತಿಸಿದರು,

Atom

ಪರಮಾಣು – ಒಂದು ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸಬಲ್ಲಷ್ಟು ಪ್ರಮಾಣದಲ್ಲಿರುವಂತಹ ಮೂಲವಸ್ತುವಿನ ಅತಿ ಚಿಕ್ಕ ಭಾಗ.

Aperture

ಕ್ಯಾಮೆರಾಕಿಂಡಿ – ಒಂದು ಛಾಯಾಗ್ರಾಹಕ ಯಂತ್ರ(ಕ್ಯಾಮೆರಾ)ದ ಮಸೂರದಲ್ಲಿ ಬೆಳಕನ್ನು ಒಳಗೆ ಬಿಟ್ಟುಕೊಳ್ಳುವ ಕಿಂಡಿ. ಎಷ್ಟು ಬೆಳಕು ಒಳಗೆ ಬರುತ್ತದೆ ಎಂಬುದು ಈ ಮಸೂರದ ವ್ಯಾಸವನ್ನು ಅವಲಂಬಿಸಿರುತ್ತದೆ.

Aphelion

 ದೂರಬಿಂದು – ಒಂದು ಗ್ರಹ, ಧೂಮಕೇತು ಅಥವಾ ಕೃತಕ ಉಪಗ್ರಹದ ಕಕ್ಷೆಯಲ್ಲಿ ಸೂರ್ಯನಿಂದ ಗರಿಷ್ಠ ದೂರದಲ್ಲಿರುವ ಬಿಂದು.

Aqueous humour

ಕಣ್ಣು ದ್ರವ – ಕಣ್ಣಿನಲ್ಲಿ ಕಣ್ಣುಗುಡ್ಡೆಯ ಹಿಂದಿನ ಪಾರದರ್ಶಕ ಭಾಗ ಮತ್ತು ಮಸೂರದ ನಡುವೆ ಇರುವ ದ್ರವ.

Aspirator

ನಿರ್ವಾತಕಾರಕ – ನಿರ್ವಾತ ರೇಚಕ(ಪಂಪು)ಗಳಲ್ಲಿ, ಭಾಗಶಃ ನಿರ್ವಾತವನ್ನುಂಟು ಮಾಡಲು ಬಳಸುವ ಉಪಕರಣ.

ಒಳ್ಳೇದನ್ನ ಕೂಗ್ಹೇಳು, ಕೆಟ್ಟದ್ದನ್ನ ಕಿವೀಲ್ಹೇಳು.

ಕನ್ನಡ ಭಾಷೆಯ ಈ ಗಾದೆಮಾತು ಉತ್ತಮ ನಡವಳಿಕೆಯೊಂದರ ಕಡೆ ನಮ್ಮ ಗಮನ ಸೆಳೆಯುತ್ತದೆ. ನಮ್ಮ ಸಹಜೀವಿಗಳೊಂದಿಗೆ ಒಡನಾಡುವಾಗ ನಾವು ನೆನಪಿಡಬೇಕಾದ ಒಂದು ಮಾತು ಇದು. ಕುಟುಂಬದಲ್ಲಿ, ಉದ್ಯೋಗ ಸ್ಥಳದಲ್ಲಿ, ಸಮಾರಂಭಗಳಲ್ಲಿ ನಮ್ಮ ಸಹಚರರು ಕೆಲವೊಮ್ಮೆ ಪ್ರಶಂಸನೀಯವಾದ ಕೆಲಸಗಳನ್ನು, ಇನ್ನೊಮ್ಮೆ ಅಷ್ಟೇನೂ ಪ್ರಶಂಸನೀಯವಲ್ಲದ ಕೆಲಸಗಳನ್ನು ಮಾಡಬಹುದು.

ಮಗುವಿನ್ ಹೆಸ್ರು ಗಣಿಕಾ ಅಂತ ಇಟ್ಟಿದೀವಿ ಮೇಡಂ. ಚೆನ್ನಾಗಿದ್ಯಾ?

ಕೆಲವು ಸಲ ಕನ್ನಡ ಅಧ್ಯಾಪಕರನ್ನು ಬಂಧುಮಿತ್ರರು ತಮ್ಮ ಮಕ್ಕಳಿಗೆ, ಅಥವಾ ಹೊಸದಾಗಿ ಕಟ್ಟಿದ ಮನೆಗೆ ಹೆಸರು ಸೂಚಿಸಲು ಕೇಳುವುದುಂಟು. `ಮಗುವಿನ ಜಾತಕದಲ್ಲಿ ಇಂತಹ ಅಕ್ಷರ ಬಂದಿದೆ, ಯಾವುದಾದರೂ ಚೆನ್ನಾಗಿರೋ ಹೆಸರು ಹೇಳಿ ಅಂತ ಕೇಳುವುದು, ಕನ್ನಡ ಅಧ್ಯಾಪಕರು ತಮಗೆ ತಿಳಿದ ಮೂಲಗಳಿಂದ ಹೆಸರುಗಳನ್ನು ಹುಡುಕಿ ಕೊಡುವುದು ಇವು ಸಾಮಾನ್ಯವಾಗಿ ನಡೆಯುವ ವಿದ್ಯಮಾನಗಳು.

Page 3 of 3

Kannada Sethu. All rights reserved.