Blue shift

ನೀಲಿ ಸರಿತ – ನಮ್ಮ ಹತ್ತಿರ ಬರುತ್ತಿರುವ ಆಕಾಶಕಾಯದ ವರ್ಣಪಟಲವು ಚಿಕ್ಕ ತರಂಗಾಂತರಗಳ ಕಡೆಗೆ ಸರಿಯುವುದು.

Boiling

 ಕುದಿಯುವಿಕೆ – ನಿರ್ದಿಷ್ಟ ಉಷ್ಣತೆಯೊಂದರಲ್ಲಿ (ಕುದಿಬಿಂದು)        ದ್ರವವೊಂದು ಅನಿಲವಾಗಿ ಬದಲಾಗುವ ಕ್ರಿಯೆ. ಯಾವಾಗ ಸಂತುಷ್ಟ ಆವಿಯ ಒತ್ತಡವು ಹೊರಗಿನ ಒತ್ತಡಕ್ಕೆ ಸಮನಾಗುತ್ತದೋ ಆಗ ಕುದಿಯುವಿಕೆ ಉಂಟಾಗುತ್ತದೆ.

Boiling water reactor

ಕುದಿನೀರಿನ ಸ್ಥಾವರ – ನೀರನ್ನು ತಂಪುಕಾರಕವಾಗಿ ಮತ್ತು ಮಿತಕಾರಕ(ನ್ಯೂಟ್ರಾನುಗಳ ವೇಗವನ್ನು ಕಡಿಮೆ ಮಾಡುವಂಥದ್ದು)ವಾಗಿ ಬಳಸುವಂತಹ ಅಣುಸ್ಥಾವರ.

Bomb caloriemeter 

ಸಿಡಿಗುಂಡು ಉಷ್ಣತಾಮಾಪಕ – ದಹನಕ್ರಿಯೆಯಲ್ಲಿನ (ಉದಾಹರಣೆಗೆ ಇಂಧನ ಮತ್ತು ಆಹಾರಗಳ ದಹನಕ್ರಿಯೆ) ಉಷ್ಣತೆಯನ್ನು ಅಳೆಯಲು ಬಳಸುವ, ಪಾತ್ರೆಯಂತಹ ಒಂದು ಉಪಕರಣ.

Boolian algebra

ಬೂಲಿಯನ್ ಬೀಜಗಣಿತ – ಜಾರ್ಜ್ ಬೂಲ್ ಎಂಬ ಗಣಿತಜÐರು 19ನೇ ಶತಮಾನದ ಮಧ್ಯಭಾಗದಲ್ಲಿ ರೂಪಿಸಿದ ಒಂದು ರೀತಿಯ ತರ್ಕವ್ಯವಸ್ಥೆ. ಇದು ತಾರ್ಕಿಕ ಸಂಬಂಧಗಳನ್ನು ನಿರ್ವಹಿಸಲು ಗಣಿತ ವಿಧಾನಗಳನ್ನು ನೀಡುತ್ತದೆ. ಗಣಕಯಂತ್ರದ 0 ಮತ್ತು 1ರ ಎರಡಂಕಿ ಭಾಷೆಯಲ್ಲಿ ಇದನ್ನು ವ್ಯಾಪಕವಾಗಿ ಬಳಸುತ್ತಾರೆ. 

ಎಲ್ಲರ ಮನೆ ದೋಸೆನೂ ತೂತೇ.

ಯಾರ ಮನೆಯಲ್ಲಿ ದೋಸೆ ಮಾಡಿದರೂ ಅದು ಬೇಯುವಾಗ ಅದರಲ್ಲಿ ಗಾಳಿಯ ಕಾರಣದಿಂದ ತೂತುಗಳು ಆಗಿಯೇ ಆಗುತ್ತವೆ. ನಮ್ಮ ಮನೆಯ ದೋಸೆಯಲ್ಲಿ ತೂತು ಇಲ್ಲ ಎನ್ನಲಾಗುವುದೇ? ಹಾಗೆಯೇ ಸಮಸ್ಯೆಗಳು, ಬಿಕ್ಕಟ್ಟುಗಳು, ಭಿನ್ನಾಭಿಪ್ರಾಯ-ಜಗಳಗಳು ಮನುಷ್ಯರು ಕೂಡಿ ಜೀವಿಸುವ ಎಲ್ಲ ಸಂದರ್ಭ, ಸನ್ನಿವೇಶಗಳಲ್ಲೂ ಇರುತ್ತವೆ.

“ಓ, ಸಂಪೂರ್ಣಾನ? ಶೂನ್ಯ ನೋಡಿ’’!!

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಿಂದ ರಾಜಾಜಿನಗರದ ಪ್ರವೇಶದ್ವಾರ (ಎಂಟ್ರೆನ್ಸ್)ಕ್ಕೆ ಹೋಗುವ ರಸ್ತೆಯಲ್ಲಿ ಒಂದು ಪೆಟ್ರೋಲ್ ಬಂಕ್ ಇದೆ. ಒಂದು ಬೆಳಿಗ್ಗೆ ನಾನು ಹೊಂಡಾ ಆಕ್ಟಿವಾ ಎಂಬ ನಾಮಧೇಯದ ನನ್ನ ದ್ವಿಚಕ್ರ ರಥದ ಹೊಟ್ಟೆ ತುಂಬಿಸಲು ಅಲ್ಲಿಗೆ ಹೋಗಿದ್ದೆ. ಸಾಲಲ್ಲಿ ನಿಂತಿದ್ದವಳು ನನ್ನ ಸರದಿ ಬಂದಾಗ ಪೆಟ್ರೋಲು ಹಾಕುವ ಹುಡುಗನಿಗೆ `ಪೂರ್ತಿ ಟ್ಯಾಂಕ್ ಹಾಕಪ್ಪ’ ಎಂದೆ.

Black body

ಕಪ್ಪು ವಸ್ತು – ತನ್ನ ಮೇಲೆ ಬೀಳುವ ಎಲ್ಲ ಬೆಳಕನ್ನೂ ಸಂಪೂರ್ಣವಾಗಿ ಹೀರಿಕೊಳ್ಳುವ ವಸ್ತು.

Black hole

ಕಪ್ಪು ಕುಳಿ – ಬಾಹ್ಯಾಕಾಶದಲ್ಲಿರುವ ಒಂದು ವಸ್ತು ಇದು. ತನ್ನದೇ ಗುರುತ್ವಶಕ್ತಿಗಳ ಅಡಿಯಲ್ಲಿ ಕುಸಿದಂತಹ ವಸ್ತು. ಇದು ಎಷ್ಟರ ಮಟ್ಟಿಗೆ ಕುಸಿದಿರುತ್ತದೆಂದರೆ ಇದರ ವಿಮೋಚನಾ ವೇಗವು ಬೆಳಕಿನ ವೇಗಕ್ಕೆ ಸಮನಾಗಿರುತ್ತದೆ (ವಿಮೋಚನಾ ವೇಗ = ಒಂದು ವಸ್ತುವಿನ ಗುರುತ್ವಾಕರ್ಷಣೆಯಿಂದ ಇನ್ನೊಂದು ವಸ್ತುವು ತಪ್ಪಿಸಿಕೊಂಡು ಹೋಗಲು ಹೊಂದಿರಬೇಕಾದ ಕನಿಷ್ಠ ವೇಗ).

Black light

ಕಪ್ಪು ಬೆಳಕು – ಇದು ವಿದ್ಯುತ್ಕಾಂತೀಯ ಅದೃಶ್ಯ ವಿಕಿರಣ(ಬೆಳಕು). ಇದು ಹೊಳಪಿನ ಕಾಂತಿ ಬೀರಬಲ(ಫ್ಲೋರೋಸೆಂಟ್) ವಸ್ತುಗಳ ಮೇಲೆ ಬಿದ್ದಾಗ ಅವು ಕಣ್ಣಿಗೆ ಕಾಣುವ ಬೆಳಕನ್ನು ಸೂಸುವಂತೆ ಮಾಡುತ್ತದೆ.  

Page 1 of 3

Kannada Sethu. All rights reserved.