ವಶ – ಕಣಗಳ ಒಂದು ವ್ಯವಸ್ಥೆಯು ತನ್ನದಾಗಿರದಿದ್ದ ಕಣವೊಂದನ್ನು ಹೊರಗಿನಿಂದ ಹೀರಿಕೊಳ್ಳುವ ಪ್ರಕ್ರಿಯೆಗಳಲ್ಲಿ ಯಾವುದಾದರೊಂದು ಪ್ರಕ್ರಿಯೆ.
ಕ್ಯಾರಟ್ – ಅ. ಚಿನ್ನದ ಶುದ್ಧತೆಯನ್ನು ಅಳೆಯುವ ಮೂಲಮಾನ. ಶುದ್ಧಚಿನ್ನವನ್ನು ೨೪ ಕ್ಯಾರಟ್‌ನದು ಎನ್ನುತ್ತಾರೆ.
ಇಂಗಾಲ ಚಕ್ರ –ಪರಮಾಣು ಬೀಜಕೇಂದ್ರಗಳ ನಡುವೆ ನಡೆಯುವ ರಾಸಾಯನಿಕ ಕ್ರಿಯೆಗಳ ಒಂದು ಸರಣಿ. ಜಲಜನಕ ಬೀಜಕೇಂದ್ರಗಳು ಹೀಲಿಯಂ ಬೀಜಕೇಂದ್ರವಾಗಲು ಸಂಯೋಗಗೊಳ್ಳುವಾಗ ಇಂಗಾಲವು ವೇಗವರ್ಧಕವಾಗಿ ವರ್ತಿಸುವಂತಹ ಕ್ರಿಯಾ ಸರಣಿ ಇದು.
ಇಂಗಾಲ ಕಾಲನಿರ್ಣಯ – ಜೀವಂತ ವಸ್ತುಗಳನ್ನು ಒಳಗೊಂಡ ಅದರಲ್ಲೂ ಭೂಮಿಯನ್ನು ಅಗೆಯುವುದರಿಂದ ದೊರೆಯುವ ಪಳೆಯುಳಿಕೆಗಳ ಕಾಲವನ್ನು ಕಂಡು ಹಿಡಿಯಲು ಬಳಸುವ ಒಂದು ವಿಧಾನ. ಜೀವಂತ ವಸ್ತುಗಳಲ್ಲಿರುವ ಇಂಗಾಲದ ಪರಮಾಣುವಿನ ವಿಕಿರಣ ಸೂಸುವ ಗುಣವನ್ನು ಆಧಾರವಾಗಿಟ್ಟುಕೊಂಡಂತಹ ವಿಧಾನ ಇದು.
ಇಂಗಾಲ ಧ್ವನಿವರ್ಧಕ – ಇಂಗಾಲದ ಹರಳುಗಳನ್ನು ಬಳಸಿಕೊಂಡು ತನ್ನ ಕೆಲಸ ಮಾಡುವಂತಹ ಒಂದು ಧ್ವನಿವರ್ಧಕ.
ಕಾಲುವೆ ಕಿರಣಗಳು – ಋಣಧ್ರುವದಲ್ಲಿ ಚಿಕ್ಕ ಚಿಕ್ಕ ತೂತುಗಳನ್ನು ಮಾಡುವ ಮೂಲಕ, ವಿಸರ್ಜನ ಕೊಳವೆಯಿಂದ ಪಡೆದುಕೊಳ್ಳಲಾಗುವ ಧನ ಅಯಾನುಗಳ ಪ್ರವಾಹಗಳು.
ಉಷ್ಣಮಾಪಕ – ತಾಪಶಕ್ತಿಯನ್ನು ಅಳೆಯಲು ಬಳಸುವ ಉಪಕರಣ.
ತನ್ನ ಒಂದು ಕಡೆಯಲ್ಲಿ ಜೋಡಿಸಲ್ಪಟ್ಟ ಹಾಗೂ ಇನ್ನೊಂದು ಕಡೆಯಲ್ಲಿ ಮುಕ್ತವಾಗಿರಲು ಬಿಟ್ಟಂತಹ ವೃತ್ತಾಕಾರದ ಅಥವಾ ಚೌಕಾಕಾರದ ತೊಲೆ. ಇದರ ಮುಕ್ತಭಾಗದ ಮೇಲೆ ಭಾರ ಬೀಳುತ್ತದೆ.