Capacitance

ವಿದ್ಯುತ್ ಸಾಮರ್ಥ್ಯ – ವಾಹಕಗಳ ನಡುವೆ ವಿದ್ಯುತ್ ಅಂತಃಸಾಮರ್ಥ್ಯದ ವ್ಯತ್ಯಾಸವಿದ್ದಾಗ ವಿದ್ಯುತ್ ವಾಹಕಗಳು ಹಾಗೂ ನಿರೋಧಕಗಳ ಒಂದು ವ್ಯವಸ್ಥೆಗಿರುವ ವಿದ್ಯುತ್ ಸಂಗ್ರಹದ ಸಾಮರ್ಥ್ಯ.

ಹೂವನ್ನು ಕೊಟ್ಟು ಮುಡಿ, ಹಣ್ಣನ್ನು ಹಂಚಿ ತಿನ್ನು.

ನಮ್ಮ ಗ್ರಾಮಸ್ಥ ಜನಪದರು ಜನರ ಪರಸ್ಪರ ಹೊಂದಾಣಿಕೆ ಮತ್ತು ಸಹಬಾಳ್ವೆಗಾಗಿ ರೂಪಿಸಿರುವ ಒಂದು ಸುಂದರ ಅಭ್ಯಾಸವನ್ನು ಮೇಲಿನ ಗಾದೆಮಾತು ಹೇಳುತ್ತದೆ. ಪ್ರಕೃತಿ ನಮಗೆ ಕೊಟ್ಟ ಅತ್ಯಂತ ಆಹ್ಲಾದಕರ ಉಡುಗೊರೆಗಳೆಂದರೆ ಹೂವು ಮತ್ತು ಹಣ್ಣು. ಇವುಗಳ ಆನಂದವನ್ನು ಸವಿಯುವಾಗ ನಾವೊಬ್ಬರೇ ಸವಿಯದೆ ಸುತ್ತಮುತ್ತ ಇರುವ ಮನೆಮಂದಿ, ಬಳಗದವರು, ಸ್ನೇಹಿತರೊಂದಿಗೆ ಹಂಚಿಕೊAಡರೆ ಆ ಸವಿ ದುಪ್ಪಟ್ಟಾಗುತ್ತದೆ.

ಕನ್ನಡದ ಡಿಜಿಟಲ್ ನವೋದಯ

ಕನ್ನಡದ ಡಿಜಿಟಲ್ ನವೋದಯ’ ಎಂಬ ಪದಗುಚ್ಛವೇ ರೋಮಾಂಚ ಹುಟ್ಟಿಸುವಂಥದ್ದು. ಕನ್ನಡವನ್ನು ಪ್ರೀತಿಸುವ ಯಾರೇ ಆದರೂ ಅದು ಕಾಲಕ್ಕೆ ತಕ್ಕಂತೆ ಬದಲಾಗಬೇಕು, ಮತ್ತು ನವೀಕರಣಗೊಳ್ಳಬೇಕು ಎಂದು ಒಪ್ಪುತ್ತಾರೆ. ಎಲ್ಲ ಜೀವಂತ ಭಾಷೆಗಳಂತೆ ಕನ್ನಡವೂ ಕಾಲದ ಕರೆಗೆ ಓಗೊಟ್ಟು ಬದಲಾಗುತ್ತಾ, ಹೊಸದಾಗುತ್ತಾ ಬಂದಿದೆ. ಮಾಹಿತಿ ತಂತ್ರಜ್ಞಾನ ಯುಗದ ಅಂತರ್ಜಾಲ ಪ್ರಪಂಚದಲ್ಲಿ ಕನ್ನಡ ಪಡೆದಿರುವ ಹೊಸ ರೂಪ ಅಂದರೆ ಅದು ಡಿಜಿಟಲ್ ರೂಪ.

Capillarity 

ಕೂದಲಗಲದಲ್ಲಿ ಚಲನೆ – ಕೂದಲಿನಷ್ಟು ಕಡಿಮೆ ವ್ಯಾಸವುಳ್ಳ ಅತಿ ತೆಳುವಾದ ಕೊಳವೆಗಳಲ್ಲಿ ದ್ರವಗಳು ಏರುವುದನ್ನು ಅಥವಾ ಇಳಿಯುವುದನ್ನು ವಿವರಿಸಲು ಬಳಸುವ ಪದ. 

ಸಿಟ್ಟಿಗೆ ಕೊಯ್ದ ಮೂಗು ಶಾಂತಿಗರ‍್ತದ?

ಸಿಟ್ಟು. ಕೋಪ. ರೋಷ, ಕ್ರೋಧ, ರೊಚ್ಚು, ಕನಲುವಿಕೆ ….. ಯಾವ ಹೆಸರಿಂದ ಕರೆದರೇನು, ಈ ಭಾವದ ಪರಿಚಯ ಇಲ್ಲದ ಮನುಷ್ಯರೇ ಇಲ್ಲ. ನಮಗೇ ಕೋಪ ಬರುವ ಸಂದರ್ಭಗಳು ಅಥವಾ ಬೇರೆಯವರು ನಮ್ಮ ಮೇಲೆ ಕೋಪಗೊಂಡಾಗ ಅನುಭವಿಸುವ ಕಸಿವಿಸಿ, ನೋವು, ಭಯ ಇವೆಲ್ಲ ನಮಗೆ ಗೊತ್ತು.

`ಕಾಂಚಾಣ್ಣ’ಳು  ಕನ್ನಡ ಬರವಣಿಗೆ ಕಲಿತದ್ದು!

ಪದವಿ ತರಗತಿಗಳಲ್ಲಿ ಹೊಸ ತಂಡ ಬಂದ ಮೊದಲ ದಿನ ಇನ್ನೂ ಅಧಿಕೃತ (ಕಾಲೇಜಿನ ಕಛೇರಿ ಮೂಲಕ ಬರುವಂಥದ್ದು) ಪ್ರವೇಶಾತಿ ಪಟ್ಟಿ ಬಂದಿಲ್ಲದಿರುವುದರಿಂದ, ಹಾಜರಾಗಿರುವ ವಿದ್ಯಾರ್ಥಿನಿಯರಿಂದಲೇ ಒಂದು ಹಾಳೆಯಲ್ಲಿ ಹೆಸರು ಬರೆಸಿಕೊಳ್ಳುವ ಬಗ್ಗೆ ಹಿಂದಿನ ಕನ್ನಡ ಪ್ರಸಂಗವೊಂದರಲ್ಲಿ ಬರೆದಿದ್ದೆ. ವಿದ್ಯಾರ್ಥಿನಿಯರು ಹೆಸರು ಬರೆಯುವ ರೀತಿಯಲ್ಲೇ ನಮಗೆ ಅವರ ಕನ್ನಡ ಬರವಣಿಗೆಯ ಗುಣಮಟ್ಟದ ಅರಿವು ತಕ್ಕ ಮಟ್ಟಿಗೆ ಆಗುತ್ತದೆ.

Cable

ರಕ್ಷಿತ ವಿದ್ಯುತ್ ತಂತಿ – ವಿದ್ಯುತ್ ಹರಿಯುವ ಒಂದು ತಂತಿಯನ್ನು ವಾಹಕದ ಒಂದು ಪದರ, ಅದರ ಮೇಲೆ ವಿದ್ಯುತ್ ರಕ್ಷಕದ ಒಂದು ಹೊದಿಕೆ ಹಾಕಿ ಭದ್ರ ಮಾಡಿರುವುದು.

Calorie 

 ಕ್ಯಾಲೊರಿ – ಒಂದು ಗ್ರಾಂ ನೀರಿನ ಉಷ್ಣತೆಯನ್ನು ಒಂದು ಡಿಗ್ರಿ ಸೆಂಟಿಗ್ರೇಡ್‌ಗೆ ಏರಿಸಲು ಬೇಕಾದ ತಾಪದ ಪ್ರಮಾಣ. ಹಳೆಯ ಕಾಲದ ಈ ಮೂಲಮಾನವನ್ನು ಈಗ ಜೌಲ್ ಎಂಬ ಹೊಸ ಮೂಲಮಾನದಿಂದ ಸ್ಥಳಾಂತರಿಸಲಾಗಿದೆ.

Camera   

ಛಾಯಾಚಿತ್ರಗ್ರಾಹಕ – ಛಾಯಾಚಿತ್ರಗಳನ್ನು ತೆಗೆಯಲು ಅಥವಾ ಚಲನಚಿತ್ರ ಬಿಂಬಗಳನ್ನು ಪ್ರಕಟಪಡಿಸಲು ಬಳಸುವ ಒಂದು ದೃಶ್ಯೋಪಕರಣ

Canada balsam

ಕೆನಡಾ ಅಂಟು ಅಥವಾ ಗೋಂದು(ಗುಗ್ಗಳ) – ಗಾಜಿನಂತೆ ಕಾಣುವ ಹಳದಿ ಬಣ್ಣದ ಒಂದು ಅಂಟು ಪದಾರ್ಥ. ಸೂಕ್ಷದರ್ಶಕದಲ್ಲಿ ನೋಡಲಾಗುವ ವಸ್ತುಗಳನ್ನು ನೋಡುತಟ್ಟೆಗೆ ಏರಿಸುವಾಗ ಇದನ್ನು ಬಳಸುತ್ತಾರೆ. ಉತ್ತರ ಅಮೆರಿಕಾದ ಕಾಡುಗಳಲ್ಲಿ ಸಿಗುವ ಮರದಿಂದ ಇದನ್ನು ಪಡೆಯಲಾಗುವುದರಿಂದ ಈ ವಸ್ತುವಿಗೆ ಈ ಹೆಸರು ಬಂದಿದೆ.

Page 2 of 4

Kannada Sethu. All rights reserved.