ಕೆಲವು ಸಲ ನಾವು ಮಾಡಬೇಕಾದ ಮುಖ್ಯ ಕೆಲಸಕ್ಕಿಂತ ಅದರ ಜೊತೆಗಿರುವ ಅಡ್ಡ ಕೆಲಸಗಳೇ ಹೆಚ್ಚು ಶ್ರಮ, ಸಮಯ ತೆಗೆದುಕೊಳ್ಳುತ್ತವೆ. ಉದಾಹರಣೆಗೆ ನಾವು ಅಧ್ಯಾಪಕರು ತರಗತಿ ತೆಗೆದುಕೊಳ್ಳುವಾಗ ವಿದ್ಯಾರ್ಥಿಗಳು ಬಂದು ಕೂರುವುದು, ಸ್ಥಳವಿಲ್ಲ, ಬೆಂಚಿಲ್ಲ ಎಂದು ಗದ್ದಲ ಮಾಡುವುದು, ಸುಮ್ಮನೆ ಅತ್ತಿಂದಿತ್ತ ಇತ್ತಿಂದತ್ತ ತಾರಾಡುತ್ತಾ ಸ್ಥಳ ಹುಡುಕುವುದು ಮಾಡುತ್ತಿದ್ದರೆ ಪಾಠ ಶುರು ಮಾಡುವುದೇ ಕಷ್ಟವಾಗುತ್ತದೆ. ಅಮೂಲ್ಯವಾದ ಸಮಯವು ಹೀಗೆ ವ್ಯರ್ಥವಾದ ಗಲಗು ಗದ್ದಲಗಳಲ್ಲಿ ಹೋಗುವಾಗ ನಾವು ಅಧ್ಯಾಪಕರು ಈ ಗಾದೆಮಾತು ನೆನಪಿಸಿಕೊಂಡು ಪೇಚಾಡುತ್ತೇವೆ! ಈ ಗಾದೆಮಾತಿನಿಂದ ನಾವು ಕಲಿಯಬೇಕಾದ […]
ಕಾರಣ ತತ್ವ ಅಥವಾ ಕಾರ್ಯಕಾರಣ ತತ್ವ _ ಪ್ರತಿಯೊಂದು ಪರಿಣಾಮಕ್ಕೂ ಕೂಡ ಹಿಂದೆ ನಡೆದ ಘಟನೆ ಅಥವಾ ಘಟನೆಗಳು ಕಾರಣ ಅನ್ನುವ ಸಿದ್ಧಾಂತ.
ಕಾಚಿಯವರ ಚದುರುವಿಕೆಯ ಸಿದ್ಧಾಂತ – ಬಹುತೇಕ ಸಂಗತಿಗಳಲ್ಲಿನ ಬೆಳಕಿನ ಚದುರುವಿಕೆಯನ್ನು ಸಾಕಷ್ಟು ಕರಾರುವಾಕ್ಕಾಗಿ ವಿವರಿಸುವ ಒಂದು ಸಿದ್ಧಾಂತ.
ವಿದ್ಯುತ್ ಕೋಶ – ಎರಡು ವಿದ್ಯುತ್ ಧ್ರುವಗಳು ಮತ್ತು ಒಂದು ವಿದ್ಯುತ್ ವಾಹಕ ದ್ರಾವಣವುಳ್ಳ ಒಂದು ವ್ಯವಸ್ಥೆ. ಇದು ವಿದ್ಯುತ್ತನ್ನು ಉತ್ಪಾದಿಸುತ್ತದೆ.
ಸೆಲಿಷಿಯಸ್ ಅಳತೆಮಾನ – ಉಷ್ಣತೆಯನ್ನು ಅಳೆಯುವ ಒಂದು ಮೂಲಮಾನ ಪದ್ಧತಿ
ಸೆಂಟಿ – ೧/೧೦೦ ನ್ನು ಸೂಚಿಸುವ ಒಂದು ಪೂರ್ವಪದ.
ಕಂಬ ದೂರದರ್ಶಕ _ ವಿಂಗಡಣೆಯ ಗುರುತುಗಳನ್ನು ಮಾಡಿದಂತಹ ಕಂಬಕ್ಕೆ ಕಟ್ಟಿದ, ಮೇಲೆ ಕೆಳಗೆ ಚಲಸುವ ಸಾಮರ್ಥ್ಯವುಳ್ಳ ದೂರದರ್ಶಕ. ಕೆಲವು ಅಡಿಗಳ ಅಂತರದಲ್ಲಿ ಉಂಟಾಗುವ ಸ್ಥಾನಪಲ್ಲಟಗಳನ್ನು ಅಳೆಯಲು ಸಾಮಾನ್ಯವಾಗಿ ಇದನ್ನು ಬಳಸುತ್ತಾರೆ.