ಋಣ ಧ್ರುವ ಅಥವಾ ಋಣ ವಿದ್ಯುತ್‌ಧ್ರುವ _ ತಾಪ ವಿದ್ಯುದಣು ಕವಾಟದಲ್ಲಿ (ಥರ್ಮಿಯಾನಿಕ್ ವಾಲ್ವ್) ಎಲೆಕ್ಟ್ರಾನುಗಳನ್ನು ಹೊರಸೂಸುವ ಆಕರ.
ಋಣಧ್ರುವ ಕಿರಣಗಳು – ವಿದ್ಯುತ್ ಸೂಸುವ ಒಂದು ನಳಿಗೆಯಲ್ಲಿ ಅತ್ಯಂತ ಕಡಿಮೆ ಒತ್ತಡ ಇದ್ದು, ಅದರ ವಿದ್ಯುತ್ ಧ್ರುವಗಳ ನಡುವೆ ಹೆಚ್ಚಿನ ಚಾಲಕ ಶಕ್ತಿಯನ್ನು ಕೊಟ್ಟಾಗ, ಋಣಧ್ರುವದಿಂದ ಹೊರಸೂಸುವಂತಹ ಎಲೆಕ್ಟ್ರಾನುಗಳ ಕಿರಣಗಳು.
ಋಣಧ್ರುವ ಕಿರಣ ಬಿಂಬದರ್ಶಕ – ವಿದ್ಯುತ್‌ಪ್ರವಾಹವನ್ನು ಅಥವಾ ವಿದ್ಯುದಂಶವನ್ನು ಒಂದು ಪ್ರತಿದೀಪಕ (ಫ್ಲೋರೋಸೆಂಟ್) ಪರದೆಯ ಮೇಲೆ ತೋರಿಸುವ ಒಂದು ಉಪಕರಣ.
ಧನ ವಿದ್ಯುದಣು – ಧನ ವಿದ್ಯುದಂಶವುಳ್ಳ ಒಂದು ಪರಮಾಣು.
ಕರ‍್ನಾಟ್‌ರ ಸಿದ್ಧಾಂತ – ಯಾವುದೇ ತಾಪಯಂತ್ರದ ಸಾಮರ್ಥ್ಯವು ಅದೇ ತಾಪಮಾನ ಶ್ರೇಣಿಯಲ್ಲಿ ಕೆಲಸ ಮಾಢುತ್ತಿರುವ, ಹಿಮ್ಮರಳಿಸಬಹುದಾದ ತಾಪಯಂತ್ರದ ಸಾಮರ್ಥ್ಯಕ್ಕಿಂತ ಹೆಚ್ಚಾಗಿರಲು ಸಾಧ್ಯ ಇಲ್ಲ.
ಸಂಗ್ರಾಹಕ ಸರಣಿ – ಒಂದಕ್ಕೊಂದು ಜೋಡಿಸಲ್ಪಟ್ಟ ವಿದ್ಯುತ್ ಸಂಗ್ರಾಹಕಗಳ ಸರಣಿ.
ಮೇಲ್ಮೈಯ ಕಠಿಣಗೊಳಿಸುವಿಕೆ – ಉಪಕರಣಗಳಲ್ಲಿ ಮತ್ತು ಕೆಲವು ಯಂತ್ರಭಾಗಗಳಲ್ಲಿ ಬಳಸುವುದಕ್ಕಾಗಿ ಉಕ್ಕಿನ ಮೇಲ್ಮೈಯನ್ನು ಕಠಿಣಗೊಳಿಸುವುದು.
ಕನ್ನಡಿಯುತ ದೂರದರ್ಶಕ – ತನ್ನ ಕೆಲಸ ಮಾಡಲು ಕನ್ನಡಿಯೊಂದನ್ನು ಬಳಸಿಕೊಳ್ಳುವ ಒಂದು ರೀತಿಯ ಪ್ರತಿಫಲಿಸುವ ದೂರದರ್ಶಕ.