ಕನ್ನಡದ ಈ ಗಾದೆಮಾತು ಮನುಷ್ಯನ ಮನಸ್ಸಿನ ಕಡೆಗೆ ಒಂದು ಒಳನೋಟ ಬೀರುತ್ತದೆ. ಆಕಾಶಕ್ಕೆ ಹೇಗೆ ಅಳತೆಯಿಲ್ಲವೋ ಹಾಗೆಯೇ ಮನುಷ್ಯನ ಆಸೆಗೆ ಮಿತಿಯಿಲ್ಲ. ಮಿತಿಯಿಲ್ಲದ ಆಸೆ ಮನುಷ್ಯನನ್ನು ವಿನಾಶಗಳ ಸರಮಾಲೆಗೆ ಸಿಕ್ಕಿಸುತ್ತದೆ. ದುರಾಸೆ ಪಟ್ಟ ದರ‍್ಯೋಧನ, ಚಿನ್ನದ ಮೊಟ್ಟೆ ಕೊಡುತ್ತದೆಂಧು ತನ್ನ ಸಂಪತ್ತಿನ ಮೂಲವಾದ ಬಾತುಕೋಳಿಯನ್ನೇ ಕೊಂದ ರೈತ ಹಾಗೂ ತಾನು ಮುಟಿದ್ದೆಲ್ಲ ಚಿನ್ನವಾಗಬೇಕೆಂಬ ವರ ಬೇಡಿ ಕೊನೆಗೆ ಅನ್ನವೂ ಚಿನ್ನವಾಗಿ ಅದನ್ನು ತಿನ್ನಲಾರದೆ ಒದ್ದಾಡಿದ ಮಿದಾಸನ ಕಥೆಗಳು ನಮಗೆ ಎಚ್ಚರಿಕೆಯ ಗಂಟೆಗಳಾಗಬೇಕು. ನಮ್ಮ ಮನಸ್ಸು ಅತಿಯಾಸೆಗೆ ಅಡಿಯಾಳಾಗದಂತೆ […]
ರಾಸಾಯನಿಕ ಅಂತಃಸಾಮರ್ಥ್ಯ – ಒಂದು ಮಿಶ್ರಣದಲ್ಲಿನ ಒಂದು ವಸ್ತುವಿನ ರಾಸಾಯನಿಕ ಅಂತಃಸಾಮರ್ಥ್ಯ.
ರಾಸಾಯನಿಕ ತೇವಾಂಶಮಾಪಕ – ಒಂದು ಅನಿಲ ಅಥವಾ ಗಾಳಿಯ ತೇವಾಂಶವನ್ನು ಅಳೆಯಲು ಬಳಸುವ ಉಪಕರಣ.
ಮುಖ್ಯ ಕಿರಣ – ಒಂದು ವಸ್ತುವಿನಿಂದ ಹೊರಟು ನಮ್ಮ ಕಣ್ಣುಪಾಪೆಯ ಮಧ್ಯಭಾಗಕ್ಕೆ ತಲುಪುವ ಕಿರಣಪುಂಜದಲ್ಲಿನ ಮಧ್ಯದಲ್ಲಿರುವ ಒಂದು ಪ್ರಾತಿನಿಧಿಕ ಕಿರಣ
ಚಿ-ಮೆಸಾನು – ಪರಮಣುವಿನೊಳಗೆ ಇರುವ ಒಂದು ಸಣ್ಣ ಕಣ. ಇದು ಬೋಸಾನುಗಳ ಗುಂಪಿಗೆ ಸೇರುತ್ತದೆ.
ಮೈಕ್ರೋಚಿಪ್ಪು – ತುಂಬ ಪುಟ್ಟದಾಗಿರುವ ಒಂದು ಅರೆವಾಹಕ. ಇದು ಸಂಕಲಿತ ವಿದ್ಯುನ್ಮಂಡಲದ ಟ್ರಾನ್ಸ್ಮೀಟರನ್ನು ಅಥವಾ ನಿರೋಧಕವನ್ನು ಒಳಗೊಂಡಿರುತ್ತದೆ.
ವಿದ್ಯುದಂಶ ಸಾಂದ್ರತೆ – ವಸ್ತುವೊಂದರ ಏಕಮಾನ ಉದ್ದದಲ್ಲಿ ಅಥವಾ ಏಕಮಾನ ವಿಸ್ತೀರ್ಣದಲ್ಲಿ, ಅದರ ಏಕಮಾನ ಪರಿಮಾಣದಲ್ಲಿ ಇರುವಂತಹ ವಿದ್ಯುದಂಶ.