Coercive force

ನಿರ್ಬಂಧಕ ಬಲ – ಅಯಸ್ಕಾಂತವಾಗಿರುವ ಒಂದು ವಸ್ತುವಿನಲ್ಲಿ ಉಳಿದುಕೊಂಡಿರುವ ಅಯಸ್ಕಾಂತತೆಯನ್ನು ತೆಗೆದುಹಾಕಲು ಪ್ರಯೋಗಿಸಬೇಕಾದ ವಿರುದ್ಧಗುಣದ ಅಯಸ್ಕಾಂತೀಯ ತೀಕ್ಷ್ಣತೆ.

Coefficient 

ಸಹಗುಣಕ – ಒಂದು ಗುಣಕ. ಇದು ಒಂದು ವಸ್ತುವಿನ ನಿರ್ದಿಷ್ಟ ಗುಣಲಕ್ಷಣವೊಂದರ ಅಳತೆಯಾಗಿದ್ದು, ಕೆಲವು ದತ್ತ ಸನ್ನಿವೇಶಗಳಲ್ಲಿ ಆ ವಸ್ತುವಿನ ಮಟ್ಟಿಗೆ ಒಂದು ಸ್ಥಿರಾಂಕವಾಗಿರುತ್ತದೆ.

Cockcroft-Walton accelerator

ಕಾಕ್‌ಕ್ರಾಫ್ಟ್-ವಾಲ್ಟನ್ ವೇಗವರ್ಧಕ – ಮೊಟ್ಟ ಮೊದಲು ಕಂಡುಹಿಡಿಯಲಾದ ಕಣವೇಗವರ್ಧಕವಿದು. ೧೯೩೨ರಲ್ಲಿ, ಬ್ರಿಟನ್ ಮತ್ತು ರ‍್ಲೆಂಡ್‌ನ ಭೌತವಿಜ್ಞಾನಿಗಳಾದ ಜಾನ್ ಡಾಗ್ಲಾಸ್  ಕಾಕ್‌ಕ್ರಾಫ್ಟ್  ಮತ್ತು ರ‍್ನೆಸ್ಟ್ ಸಿನ್‌ಟನ್ ವಾಲ್ಟನ್ ಕಂಡುಹಿಡಿದAಥದ್ದು. ಆಲ್ಫಾ ಕಣಗಳನ್ನು ಪಡೆಯಲೋಸುಗ ಪ್ರೋಟಾನುಗಳನ್ನು ಲಿಥಿಯಮ್ ಗುರಿವಸ್ತುವಿಗೆ ಢಿಕ್ಕಿ ಹೊಡೆಸಿ, ಇದರ ಮೂಲಕ ಮೊಟ್ಟ ಮೊದಲ ಬಾರಿಗೆ ಕೃತಕವಾಗಿ ಅಣುಬೀಜಕೇಂದ್ರ ಒಡೆಯುವಿಕೆಯನ್ನು ಸಾಧಿಸಲಾಯಿತು.  

Cobalt steel

ಕೋಬಾಲ್ಟ್ ಉಕ್ಕು –  ಅತಿವೇಗದ ಉಪಕರಣಗಳಲ್ಲಿ ಬಳಸುವ ಉಕ್ಕಿನ ಒಂದು ಮಿಶ್ರಲೋಹ ಇದು. ಕೋಬಾಲ್ಟ್, ಟಂಗ್‌ಸ್ಟನ್, ಕ್ರೋಮಿಯಂ ಮತ್ತು ವೆನೆಡಿಯಂಗಳನ್ನು ಹೊಂದಿರುವ ಉಕ್ಕಿನ ಈ ಮಿಶ್ರಲೋಹವು ತುಂಬ ಕಠಿಣವಾಗಿದ್ದರೂ ಬೇಗ ಮುರಿಯುವ ಗುಣ ಹೊಂದಿರುತ್ತದೆ.

Cloud chamber

ಮೋಡ ಕೋಣೆ ಅಥವಾ ಆವಿ ಪಂಜರ – ವಿಕಿರಣಕಾರೀ ಕಣಗಳ ಪಥಗಳನ್ನು ಕಾಣುವಂತೆ ಮಾಡಲು ಬಳಸುವ ಒಂದು ಉಪಕರಣ.

`ಬೆಟ್ಟಕ್ಕೆ ಮಣ್ಣು ಹೊತ್ತಂಗೆ’

ಕನ್ನಡದಲ್ಲಿ ಬಹಳವಾಗಿ ಬಳಕೆಯಾಗುವ ಗಾದೆಮಾತುಗಳಲ್ಲಿ ಇದೂ ಒಂದು. ಮಾಡುವ ಕೆಲಸವು ಯಾವುದೇ ಫಲ ನೀಡದಿದ್ದಾಗ ಜನರು ಈ ಗಾದೆಮಾತನ್ನು ಬಳಸುತ್ತಾರೆ. ವರ್ಷವಿಡೀ ಓದಿ ವಿದ್ಯಾರ್ಥಿಯೊಬ್ಬ ಅನುತ್ತೀರ್ಣನಾದಾಗ, ಅಥವಾ ಬಹಳ ಕಾಲ ಕಷ್ಟ ಪಟ್ಟರೂ ಅಂದುಕೊಂಡದ್ದನ್ನು ಸಾಧಿಸಲಾಗದಿದ್ದಾಗ `ಅಯ್ಯೋ, ಇಷ್ಟು ವರ್ಷ ಮಾಡಿದ್ದು ಬೆಟ್ಟಕ್ಕೆ ಮಣ್ಣು ಹೊತ್ತ ಹಾಗಾಯಿತು ನೋಡಿ’’ ಎನ್ನುತ್ತಾರೆ. ಪ್ರಕೃತಿಯಲ್ಲಿ ಸಹಜ ಬೆಟ್ಟವು ನಿರ್ಮಿತವಾಗಿರುವುದೇ ಮಣ್ಣಿನಿಂದ. ಅದಕ್ಕೆ ಹೊಸದಾಗಿ ಮಣ್ಣು ಹೊರುವುದರಿಂದ ಏನೂ ಪ್ರಯೋಜನವಿಲ್ಲ. ಒಟ್ಟಿನಲ್ಲಿ ನಿಷ್ಪ್ರಯೋಜಕವಾದ ಕೆಲಸವು ಹುಟ್ಟಿಸುವ ಹತಾಶ ಭಾವವನ್ನು ತುಂಬ ಚಿತ್ರಕವಾಗಿ […]

ಬುತ್ತಿ – ಈ ಪದದೊಳಗ ಎಷ್ಟು ವಿಶೇಷ ಐತಿ!

 `ನೆನಪು ಬಾಳಿನ ಬುತ್ತಿ’ ಎಂದಿದೆ ಒಂದು ಕವಿಮನಸ್ಸು. `ಹೇಳಿಕೊಟ್ಟ ಬುದ್ಧಿ, ಕಟ್ಟಿಕೊಟ್ಟ ಬುತ್ತಿ ಎಷ್ಟು ದಿನ ಬಂದೀತು?’ ಎನ್ನುತ್ತದೆ ಒಂದು ಕನ್ನಡ ಗಾದೆಮಾತು. ಬುತ್ತಿ ಎಂಬುದು ಕನ್ನಡದಲ್ಲಿ ಬಳಕೆಯಲ್ಲಿರುವ ಒಂದು ಪದ. ನಾಮಪದವಾದಾಗ ಅದಕ್ಕೆ “ಪ್ರಯಾಣ ಕಾಲಕ್ಕಾಗಿ ಕಟ್ಟಿ ಸಿದ್ಧಪಡಿಸಿದ ಮೊಸರನ್ನ, ಕಲಸನ್ನ ರೊಟ್ಟಿ ಮೊದಲಾದುದು’’ ಎಂಬ ಅರ್ಥಗಳಿವೆ ಅನ್ನುತ್ತದೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ನಿಘಂಟು. ಬುತ್ತಿ ಕ್ರಿಯಾಪದವಾದಾಗ ಆಟದಲ್ಲಿ ತೂರಿ ಬರುವ ಚಿಣ್ಣಿ, ಚೆಂಡು ಮೊದಲಾದುವನ್ನು ಹಿಡಿಯುವುದು ಎಂಬ ಅರ್ಥವಿದೆ. ಉತ್ತರ ಕರ್ನಾಟಕದ ಕೆಲವು […]

Closed system

ಮುಚ್ಚಿಕೊಂಡ ವ್ಯವಸ್ಥೆ – ತನ್ನಾಚೆಗೆ ಇರುವ ಪ್ರಪಂಚದ ಜೊತೆಗೆ ಯಾವುದೇ ಕೊಳುಕೊಡೆಯ ಅಂತರ್‌ಕ್ರಿಯೆಗಳನ್ನು ಇಟ್ಟುಕೊಳ್ಳದ ಒಂದು ವಸ್ತು ಅಥವಾ ಒಂದಕ್ಕಿಂತ ಹೆಚ್ಚು ವಸ್ತುಗಳ ಒಂದು ವ್ಯವಸ್ಥೆ. ಇವು ತಮ್ಮತಮ್ಮಲ್ಲಿ ಅಂತರ್‌ಕ್ರಿಯೆ ನಡೆಸಿದರೂ ಹೊರಪ್ರಪಂಚದ ಜೊತೆಗೆ ಯಾವ ಕ್ರಿಯೆಯನ್ನೂ ನಡೆಸುವುದಿಲ್ಲ.

Close packing

ಒತ್ತೊತ್ತಾದ ಜೋಡಣೆ – ಕನಿಷ್ಠ ಸ್ಥಳಾವಕಾಶದೊಳಗೆ ಹಿಡಿಸುವಂತೆ ಗೋಳಗಳನ್ನು ಒತ್ತೊತ್ತಾಗಿ ಜೋಡಿಸುವುದು.

Clinical thermometer

ವೈದ್ಯಕೀಯ ಉಷ್ಣತಾಮಾಪಕ – ದೇಹದ(ರಕ್ತದ) ಉಷ್ಣತೆಯನ್ನು ಅಳೆಯಲು ಬಳಸುವ ಉಷ್ಣತಾಮಾಪಕ. ಪಾದರಸವನ್ನು ಬಳಸಿ ಇದನ್ನು ತಯಾರಿಸುತ್ತಾರೆ.

Page 1 of 3

Kannada Sethu. All rights reserved.