ಸೀಳು – ಹರಳುಗಳು ತಮ್ಮಲ್ಲಿನ ಪರಮಾಣುಗಳ ಮೇಲ್ಮೈಯುದ್ದಕ್ಕೂ ಸೀಳಿಕೊಳ್ಳುವುದು. ನಯವಾದ ಮೇಲ್ಮೈಯ ರೂಪಣೆಗೆ ಈ ಸೀಳಿಕೆ ಅಗತ್ಯವಾಗಿರುತ್ತದೆ.
ಶಾಸ್ತ್ರೀಯ ಭೌತಶಾಸ್ತ್ರ – ಸುಮಾರು ೧೯ನೇ ಶತಮಾನದ ಕೊನೆಯ ತನಕ ಅನುಸರಿಸಲ್ಪಟ್ಟ ಸೈದ್ಧಾಂತಿಕ ಭೌತಶಾಸ್ತ್ರ. ಕ್ವಾಂಟಂ ಸಿದ್ಧಾಂತ(೧೯೦೦) ಮತ್ತು ವಿಶೇಷ ಸಾಪೇಕ್ಷತಾ ಸಿದ್ಧಾಂತದ ಉಗಮದ ತನಕ ಇದನ್ನೇ ಸಂಪೂರ್ಣವಾಗಿ ಅನುಸರಿಸಲಾಗುತ್ತಿತ್ತು.
ಕ್ಲಾರ್ಕ್ ವಿದ್ಯುತ್‌ಕೋಶ – ಪಾದರಸವನ್ನು ಬಳಸುತ್ತಿದ್ದ ಒಂದು ಬಗೆಯ ವಿದ್ಯುತ್ಕೋಶವಿದು. ಮುಂಚೆ, ವಿದ್ಯುತ್ ಚಾಲಕ ಬಲ(ಎಲೆಕ್ಟ್ರಾಮೋಟಿವ್ ಫೋರ್ಸ್)ದ ಆಕರವಾಗಿ ಇದನ್ನೇ ವ್ಯಾಪಕವಾಗಿ ಬಳಸುತ್ತಿದ್ದರು. ಇದನ್ನು ೧೮೭೩ರಲ್ಲಿ ಇಂಗ್ಲೆಂಡಿನ ಯಂತ್ರಜ್ಞಾನಿಯಾದ ಜೋಸಿಯಾ ಲ್ಯಾಟಿಮರ್ ಕ್ಲಾರ್ಕ್ರು ಕಂಡುಹಿಡಿದರು.
ವೃತ್ತಾಕಾರ ಧ್ರುವೀಕರಣ – ವಿದ್ಯುತ್ಕಾಂತೀಯ ಕಿರಣಗಳ ಒಂದು ರೀತಿಯ ಧ್ರುವೀಕರಣವಿದು. ಇದರಲ್ಲಿ ಕಿರಣವು ಮುಂದೆ ಮುಂದೆ ಚಲಿಸುತ್ತಿದ್ದಂತೆ ಧ್ರುವೀಕರಣದ ಮೇಲ್ಮೆöÊಯು ಅಕ್ಷದ ಸುತ್ತ ಒಂದೇ ಸಮನೆ ಸುತ್ತುತ್ತಿರುತ್ತದೆ.
ವೃತ್ತಪಥ ಚಲನೆ(ಸುತ್ತು ಚಲನೆ) – ಒಂದು ರೀತಿಯ ನಿಯತಕಾಲಿಕ ಅಥವಾ ವೃತ್ತಾಕಾರದ ಚಲನೆ. ಇದು ಸಾಧ್ಯವಾಗಲು ಒಂದು ಧನಾತ್ಮಕ ಕೇಂದ್ರಮುಖೀ ಬಲವೊಂದು ವಸ್ತುವಿನ ಮೇಲೆ ವರ್ತಿಸಬೇಕು.
ವೃತ್ತಾಕಾರೀ ಅಳತೆ – ಕೋನಗಳನ್ನು ರೇಡಿಯನ್ ಎಂಬ ಮೂಲಮಾನದಲ್ಲಿ ಅಳೆಯುವುದು. ಇದರ ಅರ್ಥವೇನೆಂದರೆ, ತ್ರಿಜ್ಯ(ರೇಡಿಯಸ್)ವೊಂದರ ಉದ್ದವನ್ನು ತೆಗೆದುಕೊಂಡು ಅದನ್ನು ವೃತ್ತಾಕಾರದಲ್ಲಿ ಸುತ್ತಿಟ್ಟರೆ ಉಂಟಾಗುವ ಕೋನದ ಅಳತೆ.
ಮಂಡಲ(ವಿದ್ಯುನ್ಮಂಡಲ) – ವಿದ್ಯುತ್‌ವಾಹಕ ಪಥವೊಂದನ್ನು ನಿರ್ಮಿಸುವ ವಿದ್ಯುತ್ ಉಪಕರಣ ಭಾಗಗಳ ಒಂದು ಸಂಯೋಜನೆಯಿದು.