ಈಚೆಗೆ ಗೆಳತಿಯೊಬ್ಬಳ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಕೊಡುವುದೆಂದು ಯೋಚಿಸುತ್ತಿದ್ದಾಗ ಬಿದಿರಿ ಕಲಾಕೃತಿಯೊಂದನ್ನು ಕೊಡಬಹುದಲ್ಲ ಅನ್ನಿಸಿತು. ಸರಿ, ಅದು ನಮ್ಮ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯ(ಜನಪ್ರಿಯವಾಗಿ ಕರೆಯುವಂತೆ ಎಂಜಿ ರೋಡ್) ಕಾವೇರಿ ಕರಕುಶಲ ಮಳಿಗೆಯಲ್ಲಿ ಸಿಗಬಹುದೆಂಬ ಭಾವನೆಯಿಂದ ಅಲ್ಲಿಗೆ ಹೋದೆ. ಗಂಧದ ಮರದ ವಸ್ತುಗಳು, ಮೈಸೂರು ವರ್ಣಚಿತ್ರಗಳು, ಲೋಹದ ವಿಗ್ರಹಗಳು, ಚೆನ್ನಪಟ್ಟಣದ ಗೊಂಬೆಗಳು ಮುಂತಾದ ಕರ್ನಾಟಕ ರಾಜ್ಯಮೂಲದ ಸುಂದರ ವಸ್ತುಗಳನ್ನು ಕೊಳ್ಳಬಹುದಾದ ಸ್ಥಳ ಅದು. ಕರ್ನಾಟಕ ಸರ್ಕಾರದ ಒಡೆತನವುಳ್ಳ ಈ ಮಳಿಗೆಯು, ಬೆಂಗಳೂರಿನ ಒಂದು ಮುಖ್ಯ ಕರಕುಶಲಕಲಾಕೃತಿಗಳ ಮಾರಾಟ […]
ಸಂಯೋಜಿತ ಲೋಲಕ – ತನ್ನ ಮೂಲಕ ಹಾಯ್ದುಹೋಗುವ ಅಡ್ಡರೇಖಾ ಅಕ್ಷದ ಉದ್ದಕ್ಕೂ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಸಮರಸದ ಚಲನೆಯನ್ನು ಮಾಡಲು ಸಾಮರ್ಥ್ಯವಿರುವ ಘನವಸ್ತು.
ಸಂಯೋಜಿತ ದೂರದರ್ಶಕ – ದೂರದರ್ಶಕ ಎಂದರೆ ಚಿಕ್ಕವಸ್ತುವೊಂದರ ದೊಡ್ಡ ಬಿಂಬವನ್ನು ರೂಪಿಸಲು ಬಳಸುವಂತಹ ಒಂದು ಉಪಕರಣ. ಸಂಯೋಜಿತ ದೂರದರ್ಶಕವು ವಸ್ತುಬಿಂಬವನ್ನು ದೊಡ್ಡದಾಗಿಸಲು ಎರಡು ಮಸೂರಗಳನ್ನು ಅಥವಾ ಎರಡು ವ್ಯವಸ್ಥೆಗಳನ್ನು ಬಳಸುತ್ತದೆ. ಇದರಲ್ಲಿ ಎರಡನೆಯ ಮಸೂರ ವ್ಯವಸ್ಥೆಯು ಮೊದಲನೆಯದು ರೂಪಿಸಿದ ನಿಜಬಿಂಬವನ್ನು ದೊಡ್ಡದಾಗಿಸುತ್ತದೆ.
ಉಪಾಂಗ ದಿಶಾಯುತಗಳು – ಒಂದು ದಿಶಾಯುತದ ಅಂಗಭಾಗಗಳಾಗಿದ್ದು ಆ ದಿಶಾಯುತ ಮಾಡುವ ಪರಿಣಾಮವನ್ನೇ ತಾವೂ ಮಾಡುವ ಪೂರಕ ದಿಶಾಯುತಗಳು.
ಪೂರಕ ಬಣ್ಣಗಳು – ಪರಸ್ಪರ ಬೆರೆತಾಗ ಬಿಳಿಬಣ್ಣವನ್ನು ಕೊಡುವ ಎರಡು ಬೇರೆ ಬೇರೆ ಬಣ್ಣಗಳು. ಈ ಜೋಡಿಯ ಸಂಖ್ಯೆ ಅನಂತ.
ದಿಕ್ಸೂಚಿ – ಕಾಂತೀಯ ಬಲಕ್ಷೇತ್ರದ ದಿಕ್ಕನ್ನು ಸೂಚಿಸಲು ಬಳಸುವ ಉಪಕರಣ ಇದು. ಇದರೊಳಗೆ ಮುಕ್ತವಾಗಿ ಓಲಾಡುತ್ತಿರುವ ಅಯಸ್ಕಾಂತವೊಂದು ಭೂಮಿಯೊಳಗಿನ ಅಯಸ್ಕಾಂತವನ್ನು ಅನುಸರಿಸಿ ಉತ್ತರ ದಿಕ್ಕನ್ನು ಸೂಚಿಸುತ್ತದೆ. ಇದರಿಂದಾಗಿ ಈ ಉಪಕರಣವನ್ನು ಭೂಸಂಚಾರ ಅಥವಾ ಜಲಸಂಚಾರದಲ್ಲಿ ದಿಕ್ಕನ್ನು ಖಚಿತ ಪಡಿಸಿಕೊಳ್ಳಲು ವ್ಯಾಪಾಕವಾಗಿ ಬಳಸುತ್ತಾರೆ.
ವಿನಿಮಯಕ – ಇದು ಏಕಮುಖೀ ವಿದ್ಯುತ್ತು ಹರಿಯುವ ವಿದ್ಯುತ್‌ಚಾಲಕ ಅಥವಾ ವಿದ್ಯುಜ್ಜನಕ ಯಂತ್ರದ ಒಂದು ಇದು ಭಾಗ. ಇದು ಯಂತ್ರದ ವಿದ್ಯುತ್ ಸುರುಳಿಗಳನ್ನು ಹೊರಗಿನ ವಿದ್ಯುನ್ಮಂಡಲಕ್ಕೆ ಜೋಡಿಸುತ್ತದೆ, ಹಾಗೂ ವಿದ್ಯುತ್ ಸುರುಳಿಯು ಸುತ್ತುತ್ತಿರುವಾಗ ಅದರಲ್ಲಿ ಹರಿಯುವ ವಿದ್ಯುತ್ ಪ್ರವಾಹದ ದಿಕ್ಕು ಒಂದೇ ಆಗಿರುವಂತೆ ನೋಡಿಕೊಳ್ಳುತ್ತದೆ.
 
								 Like us!
 Like us! Follow us!
 Follow us!