Coolant

ತಂಪುಕಾರಕ – ಉಷ್ಣ ವರ್ಗಾವಣೆಯ ವಿಧಾನದಿಂದ ಬಿಸಿ ಚಾಲಕ ಯಂತ್ರದಿಂದ ಶಕ್ತಿಯನ್ನು ತೆಗೆದುಬಿಡುವ ದ್ರವ.

Converging lens or mirror

ಕೂಡುವ ಮಸೂರ ಅಥವಾ ಕನ್ನಡಿ – ಬೆಳಕಿನ‌ ಒಂದು ಸಮಾನಾಂತರ ಕಿರಣ ಸಮೂಹವನ್ನು ಒಂದು ಬಿಂದುವಿನಲ್ಲಿ ಕೂಡುವಂತೆ ವಕ್ರೀಭವಿಸುವ ಅಥವಾ ಪ್ರತಿಫಲಿಸುವ ಮಸೂರ ಅಥವಾ ಕನ್ನಡಿ.‌ ಹೀಗೆ ಮಾಡುವ ಕನ್ನಡಿಯು ತಗ್ಗಿರುತ್ತದೆ ಮತ್ತು‌‌ ಮಸೂರವು‌ ಮಧ್ಯದಲ್ಲಿ ಉಬ್ಬಿರುತ್ತದೆ.

Convection

ಸ್ವತಃಚಲನಾ ಉಷ್ಣ ವರ್ಗಾವಣೆ – ಒಂದು ದ್ರವದಲ್ಲಿ ಆ ದ್ರವದ ಚಲನೆಯಿಂದಲೇ ಉಷ್ಣತೆಯು ಅದರ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವರ್ಗಾವಣೆಯಾಗುವುದು.

Continuous spectrum

ಅಖಂಡ ವರ್ಣಪಟಲ – ಹೊರಸೂಸಲ್ಪಟ್ಟ ಅಥವಾ ಹೀರಲ್ಪಟ್ಟ ವಿಕಿರಣದ ಅಖಂಡ ಶ್ರೇಣಿಯಿಂದ ಉಂಟಾಗಿರುವ ವರ್ಣಪಟಲ.

Control grid

ನಿಯಂತ್ರಕ ಸರಳು‌ – ಉಷ್ಣ ವಿದ್ಯುದಣು ಕವಾಟ ಅಥವಾ ಋಣಕಿರಣ ಕೊಳವೆಯಲ್ಲಿ ಇರಿಸಿದ ಲೋಹಪರದೆಯ ರೂಪದ ವಿದ್ಯುತ್ ಧ್ರುವ. ಇದು ಒಂದು ಧ್ರುವದಿಂದ ಇನ್ನೊಂದು ಧ್ರುವಕ್ಕೆ ಹರಿಯುವ ಎಲೆಕ್ಟ್ರಾನುಗಳನ್ನು‌ ನಿಯಂತ್ರಿಸುತ್ತೆ.

ಕನ್ನಡ ಗಾದೆ ಮಾತು – ಅಟ್ಟ ಮೇಲೆ ಒಲೆ ಉರೀತು, ಕೆಟ್ಟ ಮೇಲೆ ಬುದ್ಧಿ ಬಂತು.‌

ಅಡಿಗೆ ಮಾಡಬೇಕು ಅನ್ನುವಾಗ ಒಲೆ ಉರಿದರೆ ಪ್ರಯೋಜನವೇ ಹೊರತು, ಅಡಿಗೆ ಆದ ಮೇಲೆ ಒಲೆ ಉರಿದರೆ ಪ್ರಯೋಜನವಿಲ್ಲ. ಹಾಗೆಯೇ ಬದುಕು ‌ಹಾಳಾದ ಮೇಲೆ ಬುದ್ಧಿ ಸರಿಯಾದರೆ ಅದರಿಂದ ಪ್ರಯೋಜನ ಇಲ್ಲ.  ಆದುದರಿಂದ, ನಾವು ಸಕಾಲದಲ್ಲಿ‌ ಸರಿಯಾದ ಬುದ್ಧಿಯಿಂದ ಆಲೋಚಿಸಿ, ಅಥವಾ ಬಲ್ಲವರಿಂದ ಮಾರ್ಗದರ್ಶನ ಪಡೆದು ನಮ್ಮ ಬಾಳನ್ನು ಸರಿಮಾಡಿಕೊಳ್ಳಬೇಕು. ಮನಸ್ಸಿಗೆ ತಕ್ಷಣ ನಾಟುವ ಹೋಲಿಕೆಯೊಂದಿಗೆ ಈ‌ ಗಾದೆ ಮಾತು ಒಂದು ಜೀವನ ಪಾಠವನ್ನು ಹೇಳಿದೆ.  Kannada proverb – Atta mele ole uriyithu, ketta mele […]

ಪಂಚವಟಿಯ ಪ್ರಸಂಗ

ಈಚೆಗೆ ಮೈಸೂರಿನಲ್ಲಿ ಒಳ್ಳೆಯ ಹೋಟಲೆಂದು ಖ್ಯಾತವಾಗಿರುವ ಪಂಚವಟಿ ಎಂಬ ಹೋಟಲಿಗೆ ಬಂಧುಮಿತ್ರರ ಜೊತೆ ನಾನು ಕೆಲ ದಿನಗಳ ಹಿಂದೆ ಹೋಗಿದ್ದೆ.‌ ನಮ್ಮ‌ ಪಕ್ಕದ ಮೇಜಿನಲ್ಲಿ ಮೂರು ಜನ ಯುವ ಹರೆಯದವರು ಕುಳಿತಿದ್ದರು. ಅದರಲ್ಲಿ ನನಗೆ ತೀರ ಹತ್ತಿರವಿದ್ದ ನನ್ನ ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ಹುಡುಗಿ ಕನ್ನಡ ಬಲ್ಲವಳು. ಉಳಿದಿಬ್ಬರು ಹುಡುಗರು ತೆಲುಗು, ತಮಿಳು ಮಾತಾಡುವವರು ಅನ್ನಿಸಿತು. ಅವರನ್ನು ನೋಡಿದರೆ ವಿದ್ಯಾರ್ಥಿಗಳಿರಬೇಕು ಅನ್ನಿಸುತ್ತಿತ್ತು. ಖುಷಿಯಾಗಿ ಅವರು ಮಾತಾಡುತ್ತಿದ್ದರು, ಅಕ್ಕ ಪಕ್ಕದವರಿಗೆ ಅವರ ಉಲ್ಲಾಸದ ಮಾತುಗಳು ಕೇಳಿಸುತ್ತಿದ್ದವು.‌  ಮಾತಾಡುತ್ತಾ ಆ […]

ಕನ್ನಡ ತರಗತಿಯಲ್ಲಿ ಹುಟ್ಟಿದ ಹೊಸ ಬಳಕೆಮಾತು!

ಕಾಲೇಜುಗಳಲ್ಲಿ ಪಾಠ ಮಾಡುವ ಎಲ್ಲ ಕನ್ನಡ ಅಧ್ಯಾಪಕರಂತೆ ನಾನು ಸಹ, ನಮ್ಮ‌‌ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಉಚ್ಚರಿಸುವಾಗ ಮತ್ತು ಬರೆಯುವಾಗ ಮಾಡುವ ತಪ್ಪುಗಳ ಬಗ್ಗೆ ಅಸಮ್ಮತಿ ಸೂಚಿಸುತ್ತಾ, ಅವುಗಳನ್ನು ತಿದ್ದುತ್ತಾ ಇರುತ್ತೇನೆ. ದೀರ್ಘಾಕ್ಷರಗಳು, ಒತ್ತಕ್ಷರಗಳು, ಅಕಾರ-ಹಕಾರದಂತಹವುಗಳಲ್ಲಿನ‌ ಉಚ್ಚಾರ ದೋಷಗಳು, ಲೇಖನ ಚಿಹ್ನೆಗಳನ್ನು ಬಳಸದಿರುವುದು – ಇವು ಮಕ್ಕಳು ಮಾಡುವ ಸಾಮಾನ್ಯ ತಪ್ಪುಗಳಾಗಿರುತ್ತವೆ.‌ ನಾನು ಅವರ ಉಚ್ಚಾರ ಮತ್ತು ಬರವಣಿಗೆಯನ್ನು ಗಮನಿಸುತ್ತಾ ಹೋದಂತೆ ಅವರು ಅವಸರ ಮಾಡುವುದೇ ಈ ತಪ್ಪುಗಳಿಗೆ ಮುಖ್ಯ ಕಾರಣವೆಂದು ನನಗೆ ಅರಿವಾಯಿತು.‌ ಏಕೆಂದರೆ […]

ಕನ್ನಡ ಗಾದೆ ಮಾತು – ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.

ಕನ್ನಡ ಭಾಷೆಯಲ್ಲಿರುವ ತುಂಬ ಪರಿಣಾಮಕಾರಿಯಾದ ಗಾದೆಮಾತುಗಳಲ್ಲಿ ಇದೂ ಒಂದು.‌ ಜಿಪುಣ ಬುದ್ಧಿಯ ಜನರ ವರ್ತನೆಯನ್ನು ಮೃದುವಾಗಿ ಟೀಕಿಸಲು ಈ ಗಾದೆಮಾತನ್ನು ಬಳಸುತ್ತಾರೆ. ಮನೆಯಲ್ಲಿ ನೆಂಟರು ಬಂದಾಗ ಅವರಿಗಾಗಿ ಅಡುಗೆ ಮಾಡಿ, ಊಟ ಹಾಕುವ ಸಂದರ್ಭದಲ್ಲಿ ಅಕ್ಕಿಯು ಖರ್ಚಾಗುವುದು ಸಹಜ. ಆದರೆ ತಮ್ಮ ವಸ್ತು ಖರ್ಚಾಗಬಾರದೆಂಬ ಲೋಭಿ ಮನಸ್ಸಿನ ಜನರು ತಮಗೆ ನೆಂಟರ ಮೇಲೆ ಪ್ರೀತಿ ಇದ್ದರೂ ‘ಅಯ್ಯೋ, ಇವರಿಗೆ ಊಟ ಹಾಕಿದರೆ ನಮ್ಮ ಮನೆಯ ಅಕ್ಕಿ ಖರ್ಚಾಗುತ್ತದಲ್ಲಾ…’ ಎಂದು ಮನಸ್ಸಿನಲ್ಲಿಯೇ ಹಳಹಳಿಸುತ್ತಾ, ಅಡುಗೆ ಮಾಡಲು ಹಿಂದೆ ಮುಂದೆ […]

Continuous wave

ನಿರಂತರ ಅಲೆ – ಆಕಾಶವಾಣಿಯ ಸಂವಹನದಲ್ಲಿ‌ ಆಗುವಂತೆ ಒಂದು‌ ಕಾಲಾವಧಿಯಲ್ಲಿ ನಿರಂತರವಾಗಿ‌‌ ಪ್ರಸಾರಿಸಿದ ಒಂದು ವಿದ್ಯುತ್ಕಾಂತೀಯ ಅಲೆ. ‌

Page 1 of 4

Kannada Sethu. All rights reserved.