ಕನ್ನಡ ಗಾದೆಮಾತು –   ಹಸಿದು ಉಣದಿರಬೇಡ, ಹಸಿಯದೆ ಉಣಬೇಡ.

ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ನಮ್ಮ ಪೂರ್ವಜರು ನಮಗೆ ಹೇಳಿರುವ ಒಂದು ಕಿವಿಮಾತೇ ಈ‌ ಗಾದೆಮಾತು. ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಬೇಕಾದರೆ, ನಮ್ಮ ಹೊಟ್ಟೆ ಹಸಿದಿದ್ದಾಗ ನಾವು ಊಟ ಮಾಡದೇ ಇರಬಾರದು ಮತ್ತು ಹೊಟ್ಟೆ ಹಸಿಯದೇ ಇದ್ದಾಗ ಊಟ ಮಾಡಬಾರದು. ಸಮಯಕ್ಕೆ ಸರಿಯಾಗಿ ಹಿತವಾಗಿ, ಮಿತವಾಗಿ ರುಚಿಶುಚಿಯಾಗಿ ಊಟ ಮಾಡಿದಾಗ ನಮ್ಮ ಜೀರ್ಣಾಂಗಗಳು ಸರಿಯಾಗಿ ಕೆಲಸ ಮಾಡಿ ನಾವು ಆರೋಗ್ಯವಾಗಿ ಜೀವಿಸಬಹುದು.‌ ಆಧುನಿಕ ವೈದ್ಯಕೀಯ ಜ್ಞಾನ ಕೂಡ ಇದನ್ನೇ ಹೇಳುತ್ತದೆ ಎಂಬುದನ್ನು ನೆನೆದಾಗ, ನಮ್ಮ ಹಿರಿಯರಿಗಿದ್ದ ಬದುಕಿನ […]

ಊಟದ ತಟ್ಟೆಗೆ ಅದೆಷ್ಟು ಹೆಸರುಗಳು!!

ಹೀಗೆಯೇ ಮೊನ್ನೆ ಅಕ್ಕಮಹಾದೇವಿಯ ‘ಮರವಿದ್ದು ಫಲವೇನು’ ಎಂಬ ವಚನವೊಂದನ್ನು ಓದುತ್ತಿದ್ದಾಗ ‘ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ’ ಎಂಬ ಸಾಲನ್ನು ಓದಿದೆ. ‘ಅಗಲು’ ಎಂಬುದನ್ನು ನಾವು ಕ್ರಿಯಾಪದವಾಗಿ ದೂರವಾಗು ಎಂಬ ಅರ್ಥದಲ್ಲಿ ಸಾಮಾನ್ಯವಾಗಿ ಬಳಸುತ್ತೇವೆ ಅಲ್ಲವೇ? ಈ ಪದ ಕೇಳಿದ ತಕ್ಷಣ ಪ್ರೇಮಿಗಳ ‘ಅಗಲಿಕೆ’, ‘ಎಂದೆಂದೂ ನಿನ್ನನು ಅಗಲಿ ನಾನಿರಲಾರೆ’ ಎಂಬ ಅಣ್ಣಾವ್ರ ಹಾಡಿನ ಸಾಲು, ‘ಅಗಲಿ ಇರಲಾರೆನೋ ನಿನ್ನನ್ನ’ ಎಂಬ ರಂಗಗೀತೆ ನೆನಪಾಗುತ್ತವೆ ತಾನೇ.  ಇಲ್ಲಿ ಯಾವ ಅರ್ಥದಲ್ಲಿ ‘ಅಗಲು’ ಎಂಬ ಪದವನ್ನು ವಚನಕಾರ್ತಿ ಬಳಸಿರಬಹುದು ಎಂದು ಯೋಚಿಸುತ್ತಾ […]

Cyclotron

ಕಣ ವೇಗವರ್ಧಕ – ಕಣಗಳ ವೇಗವನ್ನು ಹೆಚ್ಚಿಸುವ ಉಪಕರಣಗಳ ವಿಧಗಳಲ್ಲಿ ಒಂದು.

Cycloid

ಕಮಾನುರೇಖೆ – ಒಂದರ ಪಕ್ಕ ಒಂದರಂತೆ ಕಮಾನುಗಳನ್ನು ಇಟ್ಟಂತೆ ತೋರುವಂತಹ ರೇಖೆಯಲ್ಲಿ ಚಲಿಸುವ ಬಿಂದುವಿನ ಚಲನೆ. 

Cycle 

ಆವರ್ತನ / ಸುತ್ತು – ಒಂದು‌ ವ್ಯವಸ್ಥೆಯು‌ ಒಳಗಾಗುವಂತಹ ಬದಲಾವಣೆಗಳ ಅಥವಾ ಕಾರ್ಯಾಚರಣೆಗಳ  ಒಂದು ಸರಣಿ ಅಥವಾ ಒಂದು‌ ಕಟ್ಟು. ಇವು ಮುಗಿಯುತ್ತಿದ್ದಂತೆ ವ್ಯವಸ್ಥೆಯು ಮತ್ತೆ ತನ್ನ ಮೊದಲಿನ ಸ್ಥಿತಿಗೆ ಬರುತ್ತದೆ. 

Current

ವಿದ್ಯುತ್ ಪ್ರವಾಹ – ವಿದ್ಯುದಂಶಗಳ ಒಂದು ಪ್ರವಾಹವಿದು. ವಿದ್ಯುತ್ ಚಾಲಕ‌ ಶಕ್ತಿಯ ಪ್ರಭಾವದಿಂದಾಗಿ ಎಲೆಕ್ಟ್ರಾನುಗಳು ಅಥವಾ ವಿದ್ಯುದಣುಗಳು (ಅಯಾನುಗಳು) ಚಲಿಸುವುದರ ಫಲವೇ ವಿದ್ಯುತ್ಪ್ರವಾಹ.

Curie point

ಕ್ಯೂರಿ ಬಿಂದು‌ ಅಥವಾ ಕ್ಯೂರಿ ಉಷ್ಣತೆ – ಯಾವ ಉಷ್ಣತೆಯ ಮೇಲ್ಪಟ್ಟು ಸಹಜ ಅಯಸ್ಕಾಂತೀಯ ವಸ್ತುಗಳು ದುರ್ಬಲ ಅಯಸ್ಕಾಂತೀಯ ವಸ್ತುಗಳಂತೆ ವರ್ತಿಸುತ್ತವೋ ಆ ಉಷ್ಣತೆ.

Curie

ಕ್ಯೂರಿ – ವಿಜ್ಞಾನಿ ಮೇಡಂ ಕ್ಯೂರಿಯವರ ನೆನಪಿನಲ್ಲಿ ಇಡಲಾಗಿರುವ ಒಂದು  ಮೂಲಮಾನ. ಒಂದು ವಸ್ತುವಿನ ವಿಕಿರಣ ಚಟುವಟಿಕೆಯನ್ನು(Radio activity) ಅಳೆಯುವ ಮೂಲಮಾನವಿದು.

Crystallography

ಹರಳು ಅಧ್ಯಯನ – ಹರಳುಗಳ ರಚನೆಯನ್ನು ಅಧ್ಯಯನ ಮಾಡಲು ಬಳಸುವಂತಹ ವಿಧಾನ.

Crystal habit

ಹರಳು ನಿವಾಸ – ಹರಳಿನ ಬಾಹ್ಯ ರೂಪವನ್ನು ಹರಳು ನಿವಾಸ ಅನ್ನುತ್ತಾರೆ.

Page 1 of 3

Kannada Sethu. All rights reserved.