ಈಚೆಗೆ ಬಿ.ಎಸ್ಸಿ. ಪದವಿಯ ತರಗತಿಯೊಂದರಲ್ಲಿ ಪುರಂದರ ದಾಸರ ‘ಉದರ ವೈರಾಗ್ಯವಿದು’ ಕೀರ್ತನೆಯ ಪಾಠ ಮಾಡುತ್ತಿದ್ದೆ. ಕಷ್ಟ ಪದಗಳ ಅರ್ಥಗಳನ್ನು ಬರೆಸಿ ಓದಿಸುತ್ತಿದ್ದಾಗ ವಿದ್ಯಾರ್ಥಿನಿಯೊಬ್ಬಳು ‘ಉದರ = ಹೊಟ್ಟೆ’ ಎಂದು ಓದುವ ಸಂದರ್ಭದಲ್ಲಿ ‘ಉದಾರ’ ಎಂದು ಓದಿದಳು. ಆಗ ಆ ವಿದ್ಯಾರ್ಥಿನಿಯ ಉಚ್ಚಾರವನ್ನು ತಿದ್ದುವಾಗ ಒಂದೇ ಒಂದು ದೀರ್ಘವು ಅರ್ಥದಲ್ಲಿ ಎಷ್ಟು ವ್ಯತ್ಯಾಸ ಮಾಡುತ್ತದೆ ಎಂದು ಹೇಳಬೇಕಾಯಿತು. ‘ಉದರ’ ಕ್ಕೆ ನಿಘಂಟಿನಲ್ಲಿ ಹೊಟ್ಟೆ, ಜಠರ, ಆಹಾರ, ಮಧ್ಯ ಭಾಗ ಎಂಬ ಅರ್ಥಗಳಿದ್ದರೆ, ‘ಉದಾರ’ಕ್ಕೆ […]
ನೇರ ವಿದ್ಯುತ್ ಪ್ರವಾಹ – ಕೇವಲ ಒಂದು ದಿಕ್ಕಿನಲ್ಲಿ ಮಾತ್ರ ಹರಿಯುವ ವಿದ್ಯುತ್ ಪ್ರವಾಹ.
ದಿನ – ತನ್ನ ಅಕ್ಷದ ಮೇಲೆ ತಿರುಗುತ್ತಿರುವ ಭೂಮಿಯು ತನ್ನ ಒಂದು ಸುತ್ತು ಪೂರೈಸಲು ತೆಗೆದುಕೊಳ್ಳುವ ಸಮಯ.
ಕಾಲಗಣನೆಯ ತಂತ್ರವಿಧಾನ – ಕಲ್ಲು ಬಂಡೆಗಳು, ಉತ್ಖನನ(ಅಗೆತ) ಸ್ಥಳದ ವಸ್ತುಗಳು, ಪಳೆಯುಳಿಕೆಗಳೇ ಮುಂತಾವುಗಳ ಕಾಲವನ್ನು ನಿಗದಿ ಮಾಡುವ ಅಥವಾ ಕಂಡು ಹಿಡಿಯುವ ವಿಧಾನಗಳು
ದತ್ತಾಂಶ ಕಣಜ ಅಥವಾ ಮಾಹಿತಿ ಕಣಜ – ಗಣಕ ಯಂತ್ರದಲ್ಲಿ ಸಂಕೇತ ನೀಡಿ ಸಂಗ್ರಹಿಸಬಹುದಾದ ಮತ್ತು ವಿವಿಧ ಶಿರೋನಾಮೆಗಳಡಿಯಲ್ಲಿ ಪಡೆದುಕೊಳ್ಳಬಹುದಾದ ಮಾಹಿತಿಯ ದೊಡ್ಡ ಸಂಗ್ರಹ.
ಕ್ಷೀಣಗೊಳ್ಳುವಿಕೆ ಅಥವಾ ಕುಗ್ಗುವಿಕೆ – ತೂಗಾಡುತ್ತಿರುವ ಒಂದು ವ್ಯವಸ್ಥೆಯ ಶಕ್ತಿಯು ಕುಗ್ಗುತ್ತಾ ಬರುವುದರಿಂದ, ಅದರ ತೂಗಾಟ ಅಥವಾ ಆಂದೋಲನಗಳ ಅಲೆಯೆತ್ತರವು ಕಡಿಮೆಯಾಗುತ್ತಾ ಬರುವುದು.