ಸ್ಥಾನಾಂತರ – ಸ್ಫಟಿಕದಲ್ಲಿನ(ಹರಳಿನಲ್ಲಿನ) ಒಂದು ಗೆರೆದೋಷ ಇದು. ಇದರಿಂದಾಗಿ ಸ್ಫಟಿಕದ ಒಟ್ಟು ಚೌಕಟ್ಟಿನ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಮೇಲ್ಮೈಗಳಲ್ಲಿ ಸ್ಥಾನಾಂತರ ಆಗುತ್ತದೆ( ಸ್ಥಾನಂತರ = ವಸ್ತುಗಳು ಎಲ್ಲಿರಬೇಕೋ ಅಲ್ಲಿ ಇರದಿರುವುದು).
ವಿಘಟನೆ – ಒಂದು ಪರಮಾಣುವಿನ ಬೀಜಕೇಂದ್ರವು ಒಡೆದು ಚೂರುಚೂರಾಗುವುದು.
ಭೇದಕಾರಕ ವಿದ್ಯುನ್ಮಂಡಲ – ಕೆಲವು ವಿದ್ಯುತ್ ಅಲೆಗಳನ್ನು ಆಯ್ದುಕೊಳ್ಳುವ ಹಾಗೂ ಇನ್ನು ಕೆಲವನ್ನು ತಿರಸ್ಕರಿಸುವ ವಿದ್ಯುನ್ಮಂಡಲ.
ವಿದ್ಯುತ್ ಹರಿವು – ಒಂದು ಅವಾಹಕದಲ್ಲಿ ಅಥವಾ ಕಡಿಮೆ ಒತ್ತಡದಲ್ಲಿರುವ ಅನಿಲದ ಮೂಲಕ ವಿದ್ಯುತ್ತು ಹರಿಯುವುದು. ಇದು ಸಾಮಾನ್ಯವಾಗಿ ಪ್ರಕಾಶಮಾನವಾಗಿರುತ್ತದೆ.
ತಂತಿ ಕಾಣಿಸದ ಉಷ್ಣಮಾಪಕ – ಉಷ್ಣತೆಯಿಂದಾಗಿ ಬೆಳಕು ಬೀರುವ ಆಕರವೊಂದರ ತಾಪಮಾನವನ್ನು ಅಳೆಯಲು ಬಳಸುವ ವಿದ್ಯುತ್ ಮಾಪಕ.
ನೇರ ವಿದ್ಯುತ್ - ಒಂದೇ ದಿಕ್ಕಿನಲ್ಲಿ ಹರಿಯುವ ವಿದ್ಯುತ್.
ದ್ವಿದ್ವಾರ – ಎರಡು ವಿದ್ಯುದ್ವಾರಗಳನ್ನು ಹೊಂದಿರುವ ಒಂದು ವಿದ್ಯುನ್ಮಾನ ಉಪಕರಣ. ಈ ಉಪಕರಣವು ದಿಕ್ಕು ಮಗುಚುತ್ತಾ ಹರಿಯುವ ವಿದ್ವತ್ತನ್ನು ನೇರ ವಿದ್ಯುತ್ತಾಗಿ ಬದಲಾಯಿಸುತ್ತದೆ.
ವಿಸ್ತಾರ – ಪ್ರಮಾಣವು ಹೆಚ್ಚಾಗುವುದು.