ಈ ತಿಂಗಳು ಅಂದರೆ ನವೆಂಬರ್ 2023ರ ಕಸ್ತೂರಿ ಮಾಸಪತ್ರಿಕೆಯಲ್ಲಿ ಒಂದು ಉತ್ತಮ ಲೇಖನ ಬಂದಿದೆ. ಜಯತನಯ ಎಂಬವರು ಬರೆದ “ಕನ್ನಡ ಹಿತರಕ್ಷಣೆಗೆ ಏನು ಮಾಡಬೇಕು?” ಎಂಬ ಲೇಖನ ಅದು. ಆ ಲೇಖನದಲ್ಲಿನ ಒಂದು ವಿಷಯ ನನ್ನ ಗಮನ ಸೆಳೆಯಿತು. ಪೆಟ್ರೋಲನ್ನು ಉಳಿಸಬೇಕು ಅಂದರೆ ಅದನ್ನು ಬಳಸಬಾರದು, ಆದರೆ ಕನ್ನಡವನ್ನು ಉಳಿಸಬೇಕು ಅಂದರೆ ಅದನ್ನು ಬಳಸಬೇಕು ಎಂಬ ಮಾತು ಅದು. ಎಷ್ಟು ನಿಜ ಅಲ್ಲವೇ? “ಹಿಂಗಾದ್ರೆ ಹೆಂಗೆ ಸ್ವಾಮಿ ಕನ್ನಡದುದ್ಧಾರ, ಭಾಷೆ ಬಳಸಿ ಬಳಸಿ ಮಾಡ್ಬೇಕ್ ನಾವೆ ಕನ್ನಡ […]
ಚಿತ್ರಯಂತ್ರ – ಅರೆಪಾರದರ್ಶಕ ವಸ್ತುಗಳನ್ನು ಬಿಂಬಿಸಲು ಬಳಸುವ ಒಂದು ದೃಶ್ಯೋಪಕರಣ.
ತಡೆಗೋಡೆ – ದೃಶ್ಯೋಪಕರಣಗಳಲ್ಲಿ ಕ್ಯಾಮರಾ ಕಿಂಡಿಯೊಳಗೆ ಬರುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ ಸಾಧನ.
ಕಾಂತವಿರೋಧಿ ಗುಣ – ತುಂಬಾ ದುರ್ಬಲವಾದ ಕಾಂತಗುಣ ಇದು. ಬಿಸ್ಮತ್ ಮತ್ತು ಸೀಸದಂತಹ ಕೆಲವು ಮೂಲವಸ್ತಗಳು ಅಯಸ್ಕಾಂತ ಗುಣವನ್ನು ವಿರೋಧಿಸುವ ನೆಲೆ.
ಬಲಮುಖೀ ತಿರುಗಣೆ – ಮೇಲ್ಮೈ ಧ್ರುವೀಕೃತ ಬೆಳಕನ್ನು ಎಡದಿಂದ ಬಲಕ್ಕೆ ರಾಸಾಯನಿಕ ಸಂಯುಕ್ತವೊಂದರ ಮೂಲಕ ತಿರುಗಿಸುವುದು.
ಇಬ್ಬನಿ – ಗಾಳಿಯ ಉಷ್ಣತೆ ಕಡಿಮೆಯಾಗಿ ಅದರಲ್ಲಿನ ಆವಿಯ ಪ್ರಮಾಣವು ಗರಿಷ್ಠ ಆರ್ದ್ರತೆಗೆ ತಲುಪಿದಾಗ ನೀರು ಪಡೆವ ಹನಿರೂಪ.
ಡ್ಯುಟೇರಿಯಂ – ಜಲಜನಕದ ಒಂದು ಸಮರೂಪಿ ಇದು. ಇದರ ದ್ರವ್ಯರಾಶಿ ಸಂಖ್ಯೆ 2. ಇದನ್ನು ಭಾರದ ಜಲಜನಕ ಎಂದೂ ಕರೆಯುತ್ತಾರೆ. ಸಹಜ ಜಲಜನಕದಲ್ಲಿ ಡ್ಯುಟೇರಿಯಂನ ಪ್ರಮಾಣ 0.0156%.
ಆಸ್ಫೋಟನ – ಅತಿ ಹೆಚ್ಚು ವೇಗವುಳ್ಳ ಆಘಾತ ತರಂಗಗಳೊಡನೆ ಆಗುವಂತಹ ಅತಿ ಕ್ಷಿಪ್ರ ದಹನಕ್ರಿಯೆ( ಬಾಂಬುಗಳಲ್ಲಿ ಆಗುವಂತೆ).