ಇಬ್ಬಗೆ ( ಅಲೆ – ಕಣ ಇಬ್ಬಗೆ) – ವಿದ್ಯುತ್ಕಾಂತೀಯ ವಿಕಿರಣವು ಕೆಲವು ಸನ್ನಿವೇಶಗಳಲ್ಲಿ ಅಲೆಗಳಂತೆ ಮತ್ತು ಇನ್ನು ಕೆಲವು ಸನ್ನಿವೇಶಗಳಲ್ಲಿ ಕಣಗಳಂತೆ ವರ್ತಿಸುತ್ತದೆ. ಈ ಸನ್ನಿವೇಶವನ್ನು ಇಬ್ಬಗೆ( ಅಲೆ-ಕಣ ಇಬ್ಬಗೆ) ಎನ್ನುತ್ತಾರೆ.
ಒಣ ಮಂಜುಗಡ್ಡೆ – ಘನರೂಪದಲ್ಲಿರುವ ಇಂಗಾಲದ ಡೈಆಕ್ಸೈಡ್. ಇದನ್ನು ತಂಪುಕಾರಕವಾಗಿ ಬಳಸುತ್ತಾರೆ.
ಒಣ ಕೋಶ – ತನ್ನಲ್ಲಿನ ವಿದ್ಯುತ್ ವಿಭಜಕವು ಹಣ್ಣುಪಾಕ ಅಥವಾ ಲೇಹ್ಯದಂತಹ ಹದದಲ್ಲಿ ಇರುವ ಒಂದು ವಿದ್ಯುತ್ ರಾಸಾಯನಿಕ ಕೋಶ. ಇದನ್ನು ಕೈದೀಪದಂತಹ, ಕೈಯಲ್ಲಿಟ್ಟುಕೊಂಡು ಓಡಾಡಿಸುವ ಉಪಕರಣಗಳಲ್ಲಿ ಬಳಸುತ್ತಾರೆ.
ಚಾಲಕ ವಿದ್ಯುನ್ಮಂಡಲ – ಒಂದು ಅಥವಾ ಅದಕ್ಕಿಂತ ಹೆಚ್ಚು ವಿದ್ಯುನ್ಮಂಡಲಗಳಿಗೆ ಒಳಹರಿವಿನ ವಿದ್ಯುತ್ ನೀಡುವಷ್ಟು ಹೊರಹರಿವಿನ ಸಾಮರ್ಥ್ಯವುಳ್ಳ ವಿದ್ಯುನ್ಮಂಡಲ.
ಗತಿಶೀಲತೆಯ ದಿಶಾವೇಗ – ಒಂದು ಅರೆವಾಹಕದಲ್ಲಿ, ಏಕಘಟಕ ವಿದ್ಯುತ್ ಕ್ಷೇತ್ರದಲ್ಲಿ ಬೇಕಾದ್ದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ವಿದ್ಯುದಂಶ ಒಯ್ಯಕಗಳ ಸರಾಸರಿ ದಿಶಾವೇಗ.
ಹೊರ ವಿದ್ಯುದ್ವಾರ – ಕ್ಷೇತ್ರ ಪರಿಣಾಮ ಟ್ರ್ಯಾನ್ಸಿಸ್ಟರುಗಳಲ್ಲಿ, ವಿದ್ಯುದಂಶಗಳು ವಿದ್ಯುದ್ವಾರದ ನಡುವಿನ ಜಾಗದಲ್ಲಿ ಯಾವ ವಿದ್ಯುದ್ವಾರದ ಮೂಲಕ ಹೊರಬರುತ್ತವೋ ಆ ವಿದ್ಯುದ್ವಾರ.
ಯುಗಳ ಗೆರೆ/ಜೋಡಿ ಮಸೂರ –
ಅ. ಒಂದುವರ್ಣಪಟಲದಲ್ಲಿ ತಮ್ಮ ಮೌಲ್ಯದಲ್ಲಿ ತುಂಬ ಹತ್ತಿರ ಇರುವ ತರಂಗಾಂತರಗಳನ್ನು ಹೊಂದಿರುವ ಎರಡು ರೇಖೆಗಳು.
ಆ. ಪರಸ್ಪರ ಸಂಪರ್ಕದಲ್ಲಿರುವ ಎರಡು ಮಸೂರಗಳನ್ನು ಹೊಂದಿರುವ ಒಂದು ಸಂಯುಕ್ತ ಮಸೂರ.
ಥಾಮಸ್ ಯಂಗ್ ಎಂಬ ವಿಜ್ಞಾನಿಯು ಮಾಡಿದ ಇತಿಹಾಸ ಪ್ರಸಿದ್ಧ ಪ್ರಯೋಗ. ಈ ಪ್ರಯೋಗವು ಬೆಳಕಿನಲೆಗಳ ಅಡ್ಡಹಾಯುವಿಕೆಯನ್ನು ಪ್ರತ್ಯಕ್ಷವಾಗಿ ರುಜುವಾತು ಪಡಿಸಿ, ಬೆಳಕನ್ನು ಕುರಿತ ‘ಅಲೆ ಸಿದ್ಧಾಂತ’ ಕ್ಕೆ ಗಟ್ಟಿ ಬೆಂಬಲ ನೀಡಿತು.