“ಏನು, ಹೆಂಗಿದೀರ? ಎಲ್ರೂ ನಾಷ್ಟ ಮಾಡಿದ್ರಾ ಮತ್ತೆ?..ನಮ್ಮ ಮಾಯ್ಕಾರ ಮಾದಪ್ನೋರು ಬರೋ ದಾರಿಯಲ್ಲಿ…” ಏನಾಯ್ತಪ್ಪಾ ಅಂದ್ರೆ ……..ಇದು ಕನ್ನಡ ಜನಪದ ಪುರಾಣಗಳ ಅದ್ಭುತ ಸಂವಹನ ಶೈಲಿ. ಮಂಟೆಸ್ವಾಮಿ ಕಥೆ, ಮಾದೇಶ್ವರನ ಪುರಾಣ, ಗೀಗೀಪದ ಮುಂತಾದ ಜನಪದ ಪುರಾಣ ಗಾಯನ ಹಾಗೂ ಗೀತ ಗಾಯನ ಸಂಪ್ರದಾಯವನ್ನು ವೀಕ್ಷಿಸಿದ ಯಾರಿಗೇ ಆದರೂ ಆ ಗಾಯಕರ ಉತ್ತಮ ಸಂವಹನ ಕಲೆಯು ಅಂದರೆ ಬಹಳ ಸರಾಗವಾಗಿ ಪ್ರೇಕ್ಷಕರನ್ನು ತಲುಪುವ ಗುಣವು ಗಮನಕ್ಕೆ ಬಂದಿರುತ್ತದೆ. ಸ್ವಲ್ಪ ಮಾತು, ಸ್ವಲ್ಪ […]
ಭೂಮಿಯ ಅಯಸ್ಕಾಂತತೆ – ಭೂಮಿಯು ತನ್ನ ಮೇಲ್ಮೈಯಲ್ಲಿ ಅಥವಾ ಅದಕ್ಕೆ ಹತ್ತಿರವಿರುವ ಬಿಂದುಗಳಲ್ಲಿ ಕಾಂತಕ್ಷೇತ್ರವನ್ನು ಹೊಂದಿರುವುದು ಗೊತ್ತಾಗಿರುವ ವಿಷಯವಾಗಿದೆ. ಹೆಚ್ಚೂಕಮ್ಮಿ ಉತ್ತರ ದಕ್ಷಿಣ ದಿಕ್ಕಿನಲ್ಲಿ ತನ್ನೊಳಗೆ ಒಂದು ಬೃಹತ್ ಗಾತ್ರದ ಪಟ್ಟಿ ರೂಪದ ಅಯಸ್ಕಾಂತವಿದೆಯೇನೋ ಎಂಬಂತೆ ವರ್ತಿಸುತ್ತದೆ ನಮ್ಮ ಭೂಮಿ.
ಭೂಮಿಯ ವಾತಾವರಣ – ಭೂಮಿಯನ್ನು ಸುತ್ತುವರಿದಿರುವ ಅನಿಲ. ಇದರಲ್ಲಿ ಅನೇಕ ಪದರಗಳಿರುತ್ತವೆ.
ಭೂಸ್ಪರ್ಶನ – ಒಂದು ವಿದ್ಯುತ್ ವಾಹಕವನ್ನು ಭೂಮಿಗೆ ಜೋಡಿಸುವ ಪ್ರಕ್ರಿಯೆ.
ಭೂ ಪ್ರೇರಕ – ಒಂದು ಗೊತ್ತಾದ ವಿಸ್ತೀರ್ಣವುಳ್ಳ ಪ್ರದೇಶದಲ್ಲಿ ಗೊತ್ತಾದ ತಿರುವುಗಳಿರುವ ಒಂದು ದೊಡ್ಡ ಸುರುಳಿ. ಒಂದು ನಿರ್ದಿಷ್ಟ ಸ್ಥಳದಲ್ಲಿನ ಕಾಂತಕ್ಷೇತ್ರವನ್ನು ಅಳೆಯುವಾಗ ಇದನ್ನು ಬಳಸುತ್ತಾರೆ.
ಭೂಸ್ಪರ್ಶಿತ( ನೆಲ) ವಿದ್ಯುತ್ - ಯಾವುದಾದರೊಂದು ವಿದ್ಯುತ್ ಉಪಕರಣದ ಮೂಲಕ ಹರಿಯುತ್ತಿರುವ ವಿದ್ಯುತ್ತು ಸೋರುವ, ತಪ್ಪಾಗಿ ಹರಿಯುವ ಅಥವಾ ಮರಳುವ ಸಂದರ್ಭಕ್ಕೆ ಇದು ಸಂಬಂಧಿಸಿದೆ.
ವಿದ್ಯುತ್ ಉತ್ಪಾದಕ – ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಒಂದು ಚಿಕ್ಕ ಉಪಕರಣ.
ಬಲ ವಿಜ್ಞಾನ – ಬಲಗಳ ವರ್ತನೆಯ ಅಡಿಯಲ್ಲಿ ಚಲಿಸುವ ವಸ್ತುಗಳ ಅಧ್ಯಯನ ಮಾಡುವ ಶಾಸ್ತ್ರ. ಯಂತ್ರಚಲನಶಾಸ್ತ್ರ(ಮೆಕ್ಯಾನಿಕ್ಸ್)ದ ಒಂದು ಶಾಖೆ ಇದು.