ಕವನ ವಾಚನ ಕಲೆ – ವಿದ್ಯಾರ್ಥಿಗಳಿಗೆ ಭಾವವನ್ನು ತಲುಪಿಸುವ ನೆಲೆ.

ಯಾವುದೇ ಕವಿತೆಯ ಕೇಂದ್ರವೆಂದರೆ ಅದು ಭಾವ. ಕವಿಯ ಅನುಭವದ ಅಭಿವ್ಯಕ್ತಿ ಅಥವಾ ಭಾವದ ಭಾಷಾರೂಪೀ ಪ್ರಕಟಣೆಯೇ ಕವಿತೆ.‌ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಕವಿತೆಯನ್ನು ಪಾಠ ಮಾಡುವಾಗ ಅದನ್ನು ವಾಚಿಸುವ ರೀತಿಯು ಬಹಳ ಮುಖ್ಯ ವಾಗುತ್ತದೆ. ಏಕೆಂದರೆ ಸರಿಯಾದ ಒತ್ತು, ಸ್ವರಭಾರ, ಧ್ವನಿಯ ಏರಿಳಿತಗಳು ಕವಿತೆಯ ಭಾವದ ಜಾಡು ಹಿಡಿಯುತ್ತವೆ. ಉದಾಹರಣೆಗೆ, ‘ಸಾಮಾನ್ಯನೇ ಈ ಗಾಂಧಿ’ ಎಂಬ ಸಾಲು.‌ ಸಾಮಾನ್ಯನೇ ಎಂಬುದನ್ನು ಉಚ್ಚರಿಸುವ  ಎರಡು ಬೇರೆ ಬೇರೆ ರೀತಿಗಳಿಂದ ಗಾಂಧಿ ಎಲ್ಲರಂತೆ ಸಾಮಾನ್ಯನೇ ಅನ್ನುವ ಅರ್ಥವೂ‌ ಬರಬಹುದು, ಅಥವಾ ಅವನು […]

Electric image

ವಿದ್ಯುತ್ ಬಿಂಬ – ಒಂದು‌ ವಾಹಕ ಮೇಲ್ಮೈಯಿಂದ ಒಂದಷ್ಟು ದೂರದಲ್ಲಿ ಒಂದು ವಿದ್ಯುದಂಶವನ್ನು ಇಟ್ಟಿದ್ದೇವೆ ಅಂದುಕೊಳ್ಳೋಣ. ಈ ವಿದ್ಯುದಂಶದ ಪರಿಣಾಮವು, ಅದನ್ನು ಆ ವಾಹಕದ ಹಿಂದೆ ಇಟ್ಟರೂ ಮುಂದೆ ಇಟ್ಟರೂ, ದೂರವು ಸಮನಾಗಿದ್ದಾಗ ಒಂದೇ ಆಗಿರುತ್ತದೆ, ಕನ್ನಡಿಯಲ್ಲಿನ ಬಿಂಬವೋ ಎಂಬಂತೆ. ಇದೇ ‘ವಿದ್ಯುತ್ ಬಿಂಬ’. 

Electric flux

ವಿದ್ಯುತ್ ಬಲ ರೇಖೆಗಳು – ತನಗೆ ಲಂಬವಾಗಿರುವ ಪ್ರದೇಶ ಅಥವಾ ಮೇಲ್ಮೈಗೆ ಹರಿಯುವ ವಿದ್ಯುತ್ ಕ್ಷೇತ್ರವೊಂದರ ಬಲದ ರೇಖೆಗಳ ಸಂಖ್ಯೆ.

Electric field

ವಿದ್ಯುತ್ ಕ್ಷೇತ್ರ‌- ವಿದ್ಯುದಂಶ ಹೊಂದಿದ ಕಣವೊಂದು ಒಂದು ಬಲವನ್ನು ಅನುಭವಿಸುವಂತಹ ಒಂದು‌ ಕ್ಷೇತ್ರ‌.

Electrical energy

ವಿದ್ಯುಚ್ಛಕ್ತಿ ‌-ಒಂದು ವಿದ್ಯುತ್ ಕ್ಷೇತ್ರದಲ್ಲಿ ವಿದ್ಯುದಂಶವುಳ್ಳ ಕಣಗಳಿಗೆ ಸಂಬಂಧಿಸಿದ ಶಕ್ತಿ.

 ‘ಬೆಳಗಿನ ಶುಭೋದಯ’ ಏಕೆ, ಶುಭೋದಯ ಸಾಕಲ್ಲವೇ?

ಗುಡ್ ಮಾರ್ನಿಂಗ್ ಎಂದು ಇಂಗ್ಲಿಷ್ ಭಾಷೆಯಲ್ಲಿ ಹೇಳುವ ಬದಲು  ಕನ್ನಡದಲ್ಲಿ ಅದನ್ನು ಹೇಳಬಯಸುವವರು ‘ಬೆಳಗಿನ ಶುಭೋದಯ’ ಎಂದು ಹೇಳುವುದನ್ನು ನಾವು ಅನೇಕ ಸಾರಿ ಗಮನಿಸುತ್ತೇವೆ. ಶುಭೋದಯ ಎಂಬ ಒಂದು ಪದದಲ್ಲಿ ಗುಡ್( ಶುಭ) ಮತ್ತು ಉದಯ( ಮಾರ್ನಿಂಗ್) ಎಂಬ ಎರಡೂ ಪದಗಳಿವೆ! ಹೀಗಾಗಿ ಬೆಳಗಿನ ಶುಭೋದಯ ಎಂದು ಹೇಳಿದಾಗ ಗುಡ್ ಮಾರ್ನಿಂಗ್ ಆಫ್ ಮಾರ್ನಿಂಗ್ ಎಂಬ ಅರ್ಥ ಬರುತ್ತದೆ! ಹೀಗಾಗಿ‌ ಶುಭೋದಯ ಸಾಕು. ‘ಬೆಳಗಿನ ಶುಭೋದಯ’ ಬೇಡ. ಇನ್ನು ಕೆಲವರು ಗುಡ್ ಆಫ್ಟರ್ ನೂನ್ ಗೆ ಕನ್ನಡದಲ್ಲಿ […]

ಕನ್ನಡ ಗಾದೆಮಾತು – ಉಪವಾಸ ಇರಬಹುದು, ಉಪದ್ರವ ತಾಳಲಾಗದು.

ನಮ್ಮ ಜೀವನಾನುಭವದಲ್ಲಿ ನಾವು ಗಮನಿಸಿಯೇ ಇರುವಂತೆ, ಒಂದು ಹೊತ್ತು ಊಟ ಇಲ್ಲದದ್ದರೆ  ಹೇಗೋ ತಾಳಿಕೊಂಡುಬಿಡುತ್ತೇವೆ, ಆದರೆ ಯಾರಾದರೂ ನಮಗೆ ಒಂದೇ ಸಮ, ಕಿರಿಕಿರಿ ಅನ್ನಿಸುವಂತೆ ಉಪದ್ರವ ಕೊಡುತ್ತಿದ್ದರೆ ತಾಳಿಕೊಳ್ಳುವುದು ತುಂಬ ಕಷ್ಟ. ‌ಸದಾ ಮಾತಾಡುವ  ವಾಚಾಳಿಗಳು, ತಾನು ಮಾರುವ ವಸ್ತುವನ್ನು ಕೊಂಡುಕೋ, ಕೊಂಡುಕೋ ಎಂದು ಮೂರು ಹೊತ್ತೂ ದುಂಬಾಲು ಬೀಳುವ ಮಾರಾಟಗಾರರು, ಸದಾ ಗೋಳು ಹೇಳುತ್ತಾ ಸಾಲ ಕೇಳುತ್ತಲೇ ಇರುವವರು….ಇಂತಹವರ ಉಪದ್ರವವನ್ನು ತಡೆದುಕೊಳ್ಳುವುದು ಕಷ್ಟ. ಯಾವಾಗಲೂ ಗುಂಯ್ಗುಡುತ್ತಾ ಕಿರಿಕಿರಿ ಮಾಡುವ ಸೊಳ್ಳೆಗಳದ್ದೂ ಉಪದ್ರವವೇ. ಇಂತಹದ್ದನ್ನು ಸಹಿಸುವುದು ಒಂದು ಹೊತ್ತು […]

Electric lighting

ವಿದ್ಯುತ್ತೀಯ ಬೆಳಕು ವ್ಯವಸ್ಥೆ- ವಿದ್ಯುತ್ತಿನಿಂದ ನೀಡಲಾದಂತಹ ಬೆಳಕಿನ ವ್ಯವಸ್ಥೆ. ಇದಕ್ಕಾಗಿ ಬಳಸುವ ಉಪಕರಣಗಳೆಂದರೆ ವಿದ್ಯುತ್ ‌ಪ್ರಕಾಶ ದೀಪ( ಎಲೆಕ್ಟ್ರಿಕ್ ಆರ್ಕ್ ಲ್ಯಾಂಪ್), ವಿದ್ಯುತ್ ಬುರುಡೆ ದೀಪ( ಬಲ್ಬು) ಹಾಗೂ ಬೆಳಕು ಹೊರಹೊಮ್ಮಿಸುವ ( ಪ್ಲೋರೋಸೆಂಟ್ ಕೊಳವೆಗಳು). 

Page 3 of 3

Kannada Sethu. All rights reserved.