Electron tube

ಎಲೆಕ್ಟ್ರಾನು ಕೊಳವೆ – ಎರಡು ವಿದ್ಯುದ್ವಾರಗಳ ನಡುವಿನ ಎಲೆಕ್ಟ್ರಾನುಗಳ ಚಲನೆಯು ಒಂದು ಮುಚ್ಚಿರುವ ಅಥವಾ ನಿರಂತರವಾಗಿ ಬರಿದಾಗುತ್ತಿರುವ ಆವರಣದೊಳಗಡೆ ನಡೆಯುತ್ತಿರುವಂತಹ ಒಂದು ಉಪಕರಣ.

Electron temperature

ಎಲೆಕ್ಟ್ರಾನು ಉಷ್ಣತೆ – ಪ್ಲಾಸ್ಮಾದೊಳಗಿನ ಎಲೆಕ್ಟ್ರಾನುಗಳ ಸರಾಸರಿ ಚಲನಶಕ್ತಿಯನ್ನೇ ಅನಿಲದ ಅಣುಗಳು ಕೂಡ ಹೊಂದಿರುವ ಉಷ್ಣತೆ.

Electron telescope

ಎಲೆಕ್ಟ್ರಾನು ದೂರದರ್ಶಕ‌ – ಅತಿನೇರಳೆ ಹಾಗೂ ಅಧೋಕೆಂಪು ವಿಕಿರಣವನ್ನು ದೃಗ್ಗೋಚರ ಬಿಂಬವನ್ನಾಗಿ ಪರಿವರ್ತಿಸಬಲ್ಲ ಒಂದು ದೂರದರ್ಶಕ.‌

Electron stains

ಎಲೆಕ್ಟ್ರಾನು ರಂಗು‌ – ಕೆಲವು‌ ಆಮ್ಲಗಳು ಎಲೆಕ್ಟ್ರಾನುಗಳನ್ನು ತುಂಬ ಹೆಚ್ಚಾಗಿ ಚದುರಿಸುವ ಗುಣವನ್ನು ಹೊಂದಿರುತ್ತವೆ. ಹೀಗಾಗಿ ಇವುಗಳನ್ನು ಎಲೆಕ್ಟ್ರಾನು ಸೂಕ್ಷ್ಮದರ್ಶಕದಲ್ಲಿ ಬಳಸುತ್ತಾರೆ. ಅಂದರೆ, ಬೆಳಕು ಸೂಕ್ಷ್ಮದರ್ಶಕಗಳಲ್ಲಿ ರಂಗಿನ ಮಾಧ್ಯಮಗಳನ್ನು ಬಳಸುವಂತೆಯೇ ಇವನ್ನು ಬಳಸಲಾಗುವುದು‌.

Electron paramagnetic resonance(EPR)

ಎಲೆಕ್ಟ್ರಾನು ಅರೆಕಾಂತೀಯ ಅನುರಣನ – ಲೋಹಗಳು ಮತ್ತು ಅರೆವಾಹಕಗಳಲ್ಲಿ ವಾಹಕ ಎಲೆಕ್ಟ್ರಾನುಗಳಿಂದ ಉಂಟಾಗುವ ಅನುರಣನವನ್ನು ಎಲೆಕ್ಟ್ರಾನು ಅರೆಕಾಂತೀಯ ಅನುರಣನ ಎನ್ನುತ್ತಾರೆ.

ಕನ್ನಡ ಗಾದೆಮಾತು – ಜನ ಮರುಳೋ ಜಾತ್ರೆ ಮರುಳೋ.

ಜನರು ಒಂಟಿಯಾಗಿದ್ದಾಗ ಅಥವಾ ತಮ್ಮ ಕುಟುಂಬದವರೊಂದಿಗೆ ಇದ್ದಾಗ ಹೇಗೆ ಇರುತ್ತಾರೋ ಯೋಚಿಸುತ್ತಾರೋ ಅದು  ಅವರವರಿಗೆ ಸಂಬಂಧಿಸಿದ ವಿಷಯ. ‌ಆದರೆ ಜನರು ಜಾತ್ರೆಯಂತೆ ಗುಂಪು ಸೇರಿದಾಗ ಕೆಲವೊಮ್ಮೆ ವಿಚಿತ್ರವಾಗಿ, ವಿಲಕ್ಷಣವಾಗಿ ವರ್ತಿಸುತ್ತಾರೆ. ಗಣಪತಿಯ ವಿಗ್ರಹವು ಹಾಲು ಕುಡಿಯಿತು ಎಂದು ನಂಬುವುದು, ದೇವರ ವಿಗ್ರಹವೊಂದು ಕಣ್ಣು ತೆರೆಯಿತು ಎಂದು ಸುದ್ದಿ ಹಬ್ಬಿಸುವುದು,  ಯಾರೋ ಏನೋ  ಯಾವ ಕಾರಣಕ್ಕೋ ಏನೋ ಒಂದು ಕೆಲಸ ಮಾಡಿದರೆ ಅವರನ್ನು ನೋಡಿ ಕುರಿಗಳಂತೆ ತಾವೂ ಅದನ್ನೇ ಎಲ್ಲರೂ ಮಾಡುವುದು..,.. ಹೀಗೆ.‌ ಇಂಗ್ಲೀಷ್ ನಲ್ಲಿ ಇದನ್ನು ಮಾಸ್ […]

ಹೊಟ್ಟೆಪಾಡು ಚಾಟ್ಸ್ ಅಂಗಡಿಯ ಬುಟ್ಟಿ ಚಾಟ್ – ವೀರೇಶರ ವಿಶೇಷ ಕನ್ನಡ ಪ್ರೇಮ

“ಅಬ್ಬ, ನೋಡಿಲ್ಲಿ! ಒಂದು ಕಾಲಿರೋ ಒಬ್ಬ ವ್ಯಕ್ತಿ ಇಟ್ಟಿರೋ ಚಾಟ್ ಅಂಗಡಿ ಎಷ್ಟು ಹೆಸರು ಮಾಡಿದೆ! ಒಮ್ಮೆ ಹೋಗ್ಬರೋಣ ಮೀರಾ” ಎಂದು ನನ್ನ ಮನೆಯವರು ಅಂದಾಗ ನನ್ನಲ್ಲಿ ಕುತೂಹಲ ಮೂಡಿತು. ಯೂಟ್ಯೂಬ್ ನಲ್ಲಿದ್ದ ದೃಶ್ಯಚಿತ್ರವೊಂದರ ಮೂಲಕ ತಿಳಿದ ವಿಷಯ ಇದು‌. ಹಾಗೆಯೇ, ಮುಂದೊಂದು ವಾರಾಂತ್ಯದಲ್ಲಿ ನಾಗರಬಾವಿ ವರ್ತುಲ ರಸ್ತೆಯಲ್ಲಿದ್ದ ಆ ತಿನಿಸಿನಂಗಡಿಯನ್ನು ಹುಡುಕಿಕೊಂಡು ಹೊರಟೆವು. ಗೂಗಲ್ ಗುರು ದಾರಿ ತೋರಿದ್ದರಿಂದ ವಿಳಾಸ  ಹುಡುಕುವುದು ಅಷ್ಟೇನೂ ಕಷ್ಟವಾಗಲಿಲ್ಲ.‌  ರಸ್ತೆ ಬದಿಯಲ್ಲಿ ಪುಟ್ಟ ಟೆಂಪೋ ಒಂದನ್ನು ಚಾಟ್  ಅಂಗಡಿಯಾಗಿ ಪರಿವರ್ತಿಸಿ, […]

Electron Optics

ಎಲೆಕ್ಟ್ರಾನು ದೃಶ್ಯ-ಬೆಳಕು ವಿಜ್ಞಾನ – ವಿದ್ಯುತ್ತೀಯ ಮತ್ತು ಕಾಂತೀಯ ಕ್ಷೇತ್ರಗಳಲ್ಲಿ ಒಂದು ಎಲೆಕ್ಟ್ರಾನು ಕಿರಣಪುಂಜದ ವರ್ತನೆ ಮತ್ತು ನಿಯಂತ್ರಣಗಳ ಅಧ್ಯಯನ.

Electron microscope

ಎಲೆಕ್ಟ್ರಾನು ಸೂಕ್ಷ್ಮದರ್ಶಕ – ಒಂದು ವಸ್ತುವಿನ ಹಿಗ್ಗಿಸಿದ ಬಿಂಬವನ್ನು ಉತ್ಪತ್ತಿ ಮಾಡಲು ಬೆಳಕಿನ ಕಿರಣಗಳ ಬದಲು ವಿದ್ಯುತ್ತೀಯ ಹಾಗೂ ಕಾಂತೀಯ ಕ್ಷೇತ್ರಗಳ ಸಂಯೋಜನೆಯನ್ನು ಬಳಸುವ ಒಂದು ಉಪಕರಣ.

Electron lens

ವಿದ್ಯುನ್ಮಾನ ಮಸೂರ – ವಿದ್ಯುತ್ತೀಯ ಮತ್ತು ಕಾಂತೀಯ ಕ್ಷೇತ್ರಗಳ ಒಂದು ಸಂಯೋಜನೆಯನ್ನು ಎಲೆಕ್ಟ್ರಾನು ಪುಂಜವೊಂದನ್ನು ಗಮನಕೇಂದ್ರಕ್ಕೆ ತರಲು ಬಳಸುವುದು.

Page 1 of 3

Kannada Sethu. All rights reserved.